ರಾಜಕೀಯ

ಮೋದಿ, ರಾಹುಲ್'ಗಲ್ಲ, ರಾಜ್ಯ ಮತದಾರರ ಗುಲಾಮ ನಾನು: ಹೆಚ್.ಡಿ. ಕುಮಾರಸ್ವಾಮಿ

ನಾನು ರಾಜ್ಯದ ಗುಲಾಮನೇ ಹೊರತು ಪ್ರಧಾನಮಂತ್ರಿ ನರೇಂದ್ರ ಮೋದಿಗಾಗಲೀ ಅಥವಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗಾಗಲಿ ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ...

ಮೋದಿ, ರಾಹುಲ್'ಗಲ್ಲ, ರಾಜ್ಯ ಮತದಾರರ ಗುಲಾಮ ನಾನು: ಹೆಚ್.ಡಿ. ಕುಮಾರಸ್ವಾಮಿ
ತೀವ್ರ ಜ್ವರದಿಂದ ಬಳಲುತ್ತಿದ್ದರೂ ವಿಧಾನಸಭಾ ಚುನಾವಣೆ ಕೊನೆ ಹಂತದ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಹೆಚ್.ಡಿ.ಕುಮಾರಸ್ವಾಮಿ
Published On :
ಬೆಂಗಳೂರು: ನಾನು ರಾಜ್ಯದ ಗುಲಾಮನೇ ಹೊರತು ಪ್ರಧಾನಮಂತ್ರಿ ನರೇಂದ್ರ ಮೋದಿಗಾಗಲೀ ಅಥವಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗಾಗಲಿ ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ.

ತೀವ್ರ ಜ್ವರದಿಂದ ಬಳಲುತ್ತಿದ್ದರೂ ವಿಧಾನಸಭಾ ಚುನಾವಣೆ ಕೊನೆ ಹಂತದ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡ ಅವರು ಚಾಮರಾಜಪೇಟೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಮತಯಾಚನೆ ಮಾಡಿದರು. 

ಜೆಡಿಎಸ್ ಕಾಂಗ್ರೆಸ್ ಆಗಲೀ ಅಥವಾ ಬಿಜೆಪಿಯನ್ನಾಗಲೀ ಬೆಂಬಲಿಸುತ್ತಿಲ್ಲ. ನನಗೆ ಯಾವುದೇ ರೀತಿಯ ಹೈ ಕಮಾಂಡ್ ಇಲ್ಲ. ಮೋದಿಯಾಗಲೀ ಅಥವಾ ರಾಹುಲ್ ಗಾಂಧಿಯ ಗುಲಾಮ ನಾನಲ್ಲ. ರಾಜ್ಯದ 6 ಕೋಟಿ ಜನರ ಗುಲಾಮ ನಾನು ಎಂದು ಹೇಳಿದ್ದಾರೆ. 

ಇದೇ ವೇಳೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ತೀವ್ರವಾಗಿ ಕಿಡಿಕಾರಿದ ಅವರು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಿದ್ದೇ ಆದರೆ, ಪ್ರಣಾಳಿಕೆಯಲ್ಲಿ ನೀಡಲಾಗಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆಂದು ಭರವಸೆ ನೀಡಿ, ಅಲ್ತಾಫ್ ಖಾನ್'ಗೆ ಮತ ನೀಡುವಂತೆ ಮನವಿ ಮಾಡಿಕೊಂಡರು. 

2013ರಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಬೆಂಬಲ ನೀಡುವ ಮೂಲಕ ಪಕ್ಷ ತಪ್ಪು ಮಾಡಿತ್ತು. ಜಮೀರ್ ಸಾಕಷ್ಟು ಮಾತನಾಡಿದ್ದರೂ, ಈ ವರೆಗೂ ನಾನು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿರಲಿಲ್ಲ. ಏಕೆಂದರೆ, ಜಮೀರ್ ಹೆಚ್ಚು ಮಾತನಾಡುತ್ತಾರೆಂಬುದು ನನಗೆ ಗೊತ್ತು. ಅವರು ಹೆಚ್ಚು ಮಾತನಾಡಿದ್ದಷ್ಟು, ಜನರು ಹೆಚ್ಚು ನನ್ನನ್ನು ಅನುಸರಿಸುತ್ತಾರೆ ಎಂದಿದ್ದಾರೆ. 

ಇದೇ ವೇಳೆ ಕುಮಾರಸ್ವಾಮಿಯವರು ಬಿಜೆಪಿಯವರೊಂದಿಗೆ ಕೈಜೋಡಿಸಿದ್ದಾರೆಂಬ ಜಮೀರ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಪಕ್ಷ ಅವರಿಗೆ ಬೆಂಬಲ ನೀಡದೇ ಹೋಗಿದ್ದರೆ, ಇಂದು ಅವರು ಶಾಸಕನಾಗಿ ಮೊದಲ ಸ್ಥಾನದಲ್ಲಿರುತ್ತಿರಲಿಲ್ಲ ಎಂದಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಜೆಡಿಎಸ್ ಕುರಿತು ಮಾತನಾಡಿದ್ದ ರಾಹುಲ್ ಗಾಂಧಿಯವರು ಜೆಡಿಎಸ್ ಯಾವುದಾದರೂ ನಿಲುವನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಪರವೋ ಅಥವಾ ಬಿಜೆಪಿ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿಯವರು, ಜೆಡಿಎಸ್ ಪಕ್ಷ, ಕಾಂಗ್ರೆಸ್ ಆಗಲೀ ಅಥವಾ ಬಿಜೆಪಿ ಪಕ್ಷವನ್ನಾಗಲೀ ಬೆಂಬಲಿಸುವುದಿಲ್ಲ. ನಾನು ಮೋದಿಯಾಗಲೀ ಅಥವಾ ರಾಹುಲ್ ಗಾಂಧಿಯ ಸೇವಕನಲ್ಲ. ನಾನು ರಾಜ್ಯದ 6 ಕೋಟಿ ಜನರ ಗುಲಾಮನೆಂದು ತಿಳಿಸಿದ್ದಾರೆ. 

ಪಕ್ಷ ಅಧಿಕಾರಕ್ಕೆ ಬಂದು ನೀಡಿದ ಭರವಸೆಗಳನ್ನು ಈಡೇರಿಸದೇ ಹೋದರೆ, ರಾಜಕೀಯದಿಂದಲೇ ನಿವೃತ್ತಿ ಪಡೆದುಕೊಳ್ಳುತ್ತೇನೆ. 2004ರಲ್ಲಿ ನನ್ನನ್ನು ಗೆಲ್ಲಿಸಿದ್ದರಿ. ಇಂದು ನಾನು ನಿಮ್ಮ ಮುಂದೆ ತಲೆ ಬಾಗುತ್ತಿದ್ದೇನೆ. ಅಲ್ತಾಫ್ ಖಾನ್ ಗೆಲ್ಲುವಂತೆ ಮಾಡಿ ಎಂದ ಅವರು, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ 113 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಬಳಿಕ ಮಾತನಾಡಿದ ಅಲ್ತಾಫ್ ಖಾನ್ ಅವರು, ಕ್ಷೇತ್ರದಲ್ಲಿ ತಾವು ಮಾಡಿದ್ದ ಅಭಿವೃದ್ಧಿ ಕಾರ್ಯಗಳ ಕುರಿತು ಪಕ್ಷ ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ನೀಡದ ಜಮೀರ್, ತಮ್ಮ ಅಹಂಕಾರವನ್ನು ಪ್ರದರ್ಶಿಸುತ್ತಿದ್ದಾರೆಂದು ಹೇಳಿದ್ದಾರೆ, ರ್ಯಾಲಿಯಲ್ಲಿ ಜೆಡಿಎಸ್ ಎಂಎಲ್'ಸಿ ಟಿಎ ಶರವಣ ಕೂಡ ಭಾಗಿಯಾಗಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.