ರಾಜಕೀಯ

ಬಿಜೆಪಿ ಸೋಲಿಸಲು ದೇಶ ವಿರೋಧಿ ಶಕ್ತಿಗಳು ಒಗ್ಗೂಡಿವೆ: ಯೋಗಿ ಆದಿತ್ಯನಾಥ್

ಮೋಸದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಬಿಜೆಪಿಯನ್ನು ಸೋಲಿಸಲು ದೇಶವಿರೋಧಿ ಶಕ್ತಿಗಳು ಕೈಜೋಡಿಸಿವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಹೇಳಿದ್ದಾರೆ...

ಬಿಜೆಪಿ ಸೋಲಿಸಲು ದೇಶ ವಿರೋಧಿ ಶಕ್ತಿಗಳು ಒಗ್ಗೂಡಿವೆ: ಯೋಗಿ ಆದಿತ್ಯನಾಥ್
ಮಂಗಳೂರಿನ ಬಿಸಿ ರಸ್ತೆಯಲ್ಲಿ ನಡೆದ ರೋಡ್ ಶೋನಲ್ಲಿ ಭಾಗಿಯಾಗಿದ್ದ ಯೋಗಿ ಆದಿತ್ಯನಾಥ್
Published On :
ಮಂಗಳೂರು; ಮೋಸದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಬಿಜೆಪಿಯನ್ನು ಸೋಲಿಸಲು ದೇಶವಿರೋಧಿ ಶಕ್ತಿಗಳು ಕೈಜೋಡಿಸಿವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಹೇಳಿದ್ದಾರೆ. 
ಮಂಗಳೂರಿನ ಬಿಸಿ ರಸ್ತೆಯಲ್ಲಿ ನಡೆದ ರೋಡ್ ಶೋನಲ್ಲಿ ಭಾಗಿಯಾಗಿದ್ದ ಯೋಗಿ ಆದಿತ್ಯನಾಥ್ ಅವರು, ಬಡತನ, ಭ್ರಷ್ಟಾಚಾರ, ಗೂಂಡಾ ಹಾದೂ ಜಿಹಾದಿಗಳನ್ನು ಮಟ್ಟಹಾಕಲು ದೇಶ ವಿರೋಧ ಶಕ್ತಿಗಳು ಅಲ್ಪಪ್ರಮಾಣದ ಹಿತಾಸಕ್ತಿಗಳನ್ನು ತೋರಿಸಿತ್ತಿವೆ ಎಂದು ಹೇಳಿದ್ದಾರೆ. 
ರಾಮರಾಜ್ಯ ನಿರ್ಮಾಣಕ್ಕೆ ಕರ್ನಾಟಕದಲ್ಲಿ ನಡೆಯುವ ಈ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ಈ ಬಾರಿಯ ಪ್ರತೀಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಅಗತ್ಯವಿದೆ. 2019ರ ಉತ್ತರಪ್ರದೇಶ ವಿಧಾನಸಭೆಯಲ್ಲಿ 403 ಸ್ಥಾನಗಳಲ್ಲಿ ಕಾಂಗ್ರೆಸ್ ಬಲ 7ಕ್ಕೆ ಕುಸಿದಿದೆ. ಶೀಘ್ರದಲ್ಲಿಯೇ ಕಾಂಗ್ರೆಸ್ ಬಲ ಶೂನ್ಯಕ್ಕೆ ಕುಸಿಯಲಿದೆ. ಅರೇಬಿಯಾ ಸಮುದ್ರದಲ್ಲಿ ಕಾಂಗ್ರೆಸ್'ನ್ನು ಮುಳುಗಿಸುವಂತೆ ಮತದಾರದಲ್ಲಿ ಮನವಿ ಮಾಡಿಕೊಳ್ಳಲು ನಾನಿಲ್ಲಿಗೆ ಬಂದಿದ್ದೇನೆ. ಬಿಜೆಪಿ ರೈತರು ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.