ರಾಜಕೀಯ

ಮಹಿಳಾ ಮತದಾರರಿಗೆ ಪಿಂಕ್ ಬೂತ್, ಎಸ್ಎಂಎಸ್ ಮೂಲಕ ಮಾಹಿತಿ

ಬೆಂಗಳೂರು ನಗರದ ಮಹಿಳಾ ಮತದಾರರಿಗೆ ಮತ ಚಲಾಯಿಸಲು ಪ್ರತ್ಯೇಕ ...

ಮಹಿಳಾ ಮತದಾರರಿಗೆ ಪಿಂಕ್ ಬೂತ್, ಎಸ್ಎಂಎಸ್ ಮೂಲಕ ಮಾಹಿತಿ
ಮಾದರಿ ಪಿಂಕ್ ಬೂತ್
Published On :

ಬೆಂಗಳೂರು: ಬೆಂಗಳೂರು ನಗರದ ಮಹಿಳಾ ಮತದಾರರಿಗೆ ಮತ ಚಲಾಯಿಸಲು ಪ್ರತ್ಯೇಕ ಗುಲಾಬಿ ಬಣ್ಣದ ಬೂತ್ ಕಲ್ಪಿಸಲಾಗಿದೆ. ಮಹಿಳೆಯರು, ಪುರುಷರು ಮತ್ತು ಇತರ ಮತದಾರರಿಗೆ ಮತ ಚಲಾಯಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾರರ ನಿಗದಿತ ಸಂಖ್ಯೆಗೆ ಎಸ್ಎಂಎಸ್ ಕಳುಹಿಸಲಾಗುತ್ತದೆ.

ನಗರದಾದ್ಯಂತ ಸುಮಾರು 100 ಗುಲಾಬಿ ಬಣ್ಣದ ಬೂತ್ ಗಳನ್ನು ಏರ್ಪಡಿಸಲಾಗಿದೆ. ಇದು ವಿಶೇಷವಾಗಿ ಮಹಿಳಾ ಮತದಾರರಿಗೆ. ಬೂತ್ ಗಳನ್ನು ಗುಲಾಬಿ ಬಣ್ಣದಿಂದ ಅಲಂಕರಿಸಲಾಗಿದ್ದು ಇಲ್ಲಿ ನಿಯೋಜನೆಗೊಳ್ಳುವ ಮಹಿಳಾ ಸಿಬ್ಬಂದಿ ಕೂಡ ಗುಲಾಬಿ ಬಣ್ಣದ ಧಿರಿಸು ಧರಿಸುತ್ತಾರೆ.

ಬಿಬಿಎಂಪಿ ಮತ್ತು ಚುನಾವಣಾ ಆಯೋಗ ಸಹಾಯವಾಣಿಯನ್ನು 9731979899ನ್ನು ನೀಡಿದೆ. ಮತದಾರರಿಗೆ ಅವರ ಮೊಬೈಲ್ ಸಂಖ್ಯೆಗೆ ಎಲ್ಲಿ ಮತದಾನ ಮಾಡಬೇಕೆಂಬ ವಿವರ ನೀಡಲಾಗುತ್ತದೆ. ಮತದಾರರು ''KAEPIC''ಎಂದು ಮತ್ತು ಭಾರತೀಯ ಚುನಾವಣಾ ಆಯೋಗದ ಸಂಖ್ಯೆಯನ್ನು ಟೈಪ್ ಮಾಡಿ ಸಹಾಯವಾಣಿಗೆ ಕಳುಹಿಸಿದರೆ ಎಲ್ಲಾ ವಿವರಗಳು ಸಿಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಬಿಬಿಎಂಪಿ ಆಯುಕ್ತ ಎಂ.ಮಹೇಶ್ವರ ರಾವ್ ಹೇಳಿದ್ದಾರೆ.

ಬೆಂಗಳೂರು ನಗರ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮತದಾನದ ಸಂಖ್ಯೆ ಕಡಿಮೆಯಿರುತ್ತದೆ. ಈ ವರ್ಷ ಮತದಾನ ಮಾಡುವವರ ಸಂಖ್ಯೆ ಹೆಚ್ಚಿಸಲು ಎನ್ ಸಿಸಿ, ಸಿಆರ್ ಪಿಎಫ್, ರಾಜ್ಯ ಪೊಲೀಸ್ ಪಡೆ ಮೊದಲಾದ ಅಂಗಗಳಿಗೆ ಮೋಂಬತ್ತಿ ಮೆರವಣಿಗೆ ಹೋಗಲು ಸೂಚಿಸಲಾಗಿದೆ. ಮತದಾನ ವ್ಯವಸ್ಥೆ, ಭದ್ರತಾ ವ್ಯವಸ್ಥೆ, ಆರೋಗ್ಯಸೇವೆ, ಮತದಾನ ದಾಖಲಾತಿಗೆ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದು ಮಹೇಶ್ವರ ರಾವ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.