ಆನ್ ಲೈನ್ ನೀತಿ ಸಂಹಿತೆ ಉಲ್ಲಂಘನೆ ಪತ್ತೆಗೆ ಚುನಾವಣಾ ಆಯೋಗದಿಂದ ವಿದ್ಯಾರ್ಥಿಗಳ ನಿಯೋಜನೆ
ಸಾಮಾಜಿಕ ಜಾಲತಾಣ, ಆನ್ ಲೈನ್ ಬಳಸಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಡೆಸುತ್ತಿರುವವರ ಮೇಲೆ ಕಣ್ಣಿಡಲು ವಿವಿಧ ಕಾಲೇಜು ವಿದ್ಯಾರ್ಥಿಗಳನ್ನು...
Published On :
ಬೆಂಗಳೂರು: ಸಾಮಾಜಿಕ ಜಾಲತಾಣ, ಆನ್ ಲೈನ್ ಬಳಸಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಡೆಸುತ್ತಿರುವವರ ಮೇಲೆ ಕಣ್ಣಿಡಲು ವಿವಿಧ ಕಾಲೇಜು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಚುನಾವಣಾ ಆಯೋಗ ತೀರ್ಮಾನಿಸಿದೆ.
ಈ ಉದ್ದೇಶಕ್ಕಾಗಿ ಆಯೋಗವು ವಿವಿಧ ವೆಬ್ ಸೈಟ್ ಗಳಿಗೆ ವೆಬ್ ಕ್ರಾಲರ್ಗಳನ್ನು ಅಳವಡಿಸಿದೆ. ."ನಾವೀಗಾಗಲೇ ವಿವಿಧ ರಾಜಕೀಯ ಪಕ್ಷಗಳು ಜಾಲತಾಣದಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ಪರಿಶೀಲಿಸಲು 10-15 ಜನರನ್ನು ನೇಮಕ ಮಾಡಿದ್ದೇವೆ. ಅಲ್ಲದೆ ನೀತಿ ಸಂಹಿತೆ ಉಲ್ಲಂಘನೆ ಮಾಡದಂತೆ ತಡೆಯಲು ನಾವು 10-15 ಕಾಲೇಜು ವಿದ್ಯಾರ್ಥಿಗಳನ್ನು ಇಂಟರ್ನಿಗಳಾಗಿಯೂ ನೇಮಕ ಮಾಡಲಾಗಿದೆ." ಎಕ್ಸ್ ಪ್ರೆಸ್ ಜತೆ ಮಾತನಾಡಿದ ಜಂಟಿ ಮುಖ್ಯ ಚುನಾವಣಾ ಅಧಿಕಾರಿ,ಸೂರ್ಯ ಸೇನ್ ಎ ವಿ, ಹೇಳಿದ್ದಾರೆ.
ಈ ಕಾರ್ಯದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ರಾಜ್ಯದ ವಿವಿಧ ಕಾಲೇಜುಗಳಲ್ಲಿ ಎಂಜಿನಿಯರಿಂಗ್, ಕಾನೂನು ಮತ್ತು ಪತ್ರಿಕೋದ್ಯಮದ ಕೋರ್ಸ್ ಮಾಡುತ್ತಿದ್ದಾರೆ.ಇಂತಹಾ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ ಆಯೋಗ ನೀತಿ ಸಂಹಿತೆಯನ್ನು ಘೋಷಿಸುವುದಕ್ಕೆ ಒಂದು ತಿಂಗಳು ಮುನ್ನ ಅವರಿಗೆ ತರಬೇತಿ ನೀಡಿದೆ ಎಂದು ಅವರು ಹೇಳಿದರು. ಅಲ್ಲದೆ ಈ ಪರೀಕ್ಷಾ ಕೆಲಸದಲ್ಲಿ ನಿರತರಾದ ವಿದ್ಯಾರ್ಥಿಗಳು ಮನೆ, ವಸತಿ ನಿಲಯಗಳಿಂದಲೇ ಕೆಲಸ ಮಾಡುವವರಿದ್ದು ಅವರಾರೂ ಕೇಂದ್ರ ಕಛೇರಿಗೆ ಬಂದು ಕಾರ್ಯನಿರ್ವಹಿಸುವುದಿಲ್ಲ.
ಬೆಂಗಳೂರು ಕೇಂದ್ರ ಕಛೇರಿಯನ್ನು ಹೊರತುಪಡಿಸಿ ಇತರೆ ಜಿಲ್ಲಾ ಕೇಂದ್ರಗಳಲಿಯೂ ತಂಡಗಳ ನೇಮಕವಾಗಲಿದೆ. ಈ ತಂಡಗಳಿಗೆ ಸಹಾಯ ಮಾಡಲು ಕೆಲ ವಿಶೇಷ ತರಬೇತುದಾರರಿರಲಿದ್ದಾರೆ.
ಜೇಡಗಳ ಬಳಕೆ
ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳಿಂದ ಆನ್ ಲೈನ್ ನಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡುವುದನ್ನು ಪತ್ತೆ ಮಾಡಲಿಕ್ಕಾಗಿ ಇಸಿ ಜೇಡಗಳು ಅಥವಾ ವೆಬ್ ಕ್ರಾಲರ್ ಗಳನ್ನು ಬಳಕೆಮಾಡಲಾಗುತ್ತದೆ. ಕ್ರಾಲರ್ ಗಳು ವೆಬ್ ಪುಟವನ್ನು ಬ್ರೌಸ್ ಮಾಡಲು ವಿನ್ಯಾಸಗೊಳಿಸಲಾದ ಕಂಪ್ಯೂಟರ್ ಪ್ರೊಗ್ರಾಮ್ ಗಳಾಗಿವೆ. ಸಾಮಾನ್ಯವಾಗಿ ವೆಬ್ ಪುಟಗಳನ್ನು ಅನುಕ್ರಮಣಿಕೆ (ಇಂಡೆಕ್ಸಿಂಗ್) ಮಾಡಲು ಬಳಸಲಾಗುವುದು. ಇದನ್ನು ಸದ್ಯ ನೀತಿ ಸಂಹಿತೆ ಉಲ್ಲಂಘನೆಯನ್ನು ಪರೀಕ್ಷಿಸಲು ಬಳಕೆ ಮಾಡುವುದಕ್ಕೆ ಯೋಜಿಸಲಾಗಿದೆ ಎಂದು ಸೂರ್ಯ ಸೇನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವಿದ್ಯಾರ್ಥಿಗಳುPoliticsರಾಜಕೀಯStudentsಚುನಾವಣಾ ಆಯೋಗಚುನಾವಣಾ ನೀತಿ ಸಂಹಿತೆKarnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆECIelection code of conduct
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

