ರಾಜಕೀಯ

ವಿಧಾನಸಭೆ ಚುನಾವಣೆಗೆ ರಣತಂತ್ರ: ಆರ್ ಎಸ್ಎಸ್ ನೆರವು ಕೋರಿದ ರಾಜ್ಯ ಬಿಜೆಪಿ ನಾಯಕರು

ಎರಡೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ರಣತಂತ್ರ ರೂಪಿಸುತ್ತಿದ್ದು,....

ವಿಧಾನಸಭೆ ಚುನಾವಣೆಗೆ ರಣತಂತ್ರ: ಆರ್ ಎಸ್ಎಸ್ ನೆರವು ಕೋರಿದ ರಾಜ್ಯ ಬಿಜೆಪಿ ನಾಯಕರು
ಬಿಎಸ್ ಯಡಿಯೂರಪ್ಪ
Published On :
ಬೆಂಗಳೂರು: ಎರಡೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ರಣತಂತ್ರ ರೂಪಿಸುತ್ತಿದ್ದು, ಇದಕ್ಕಾಗಿ ರಾಜ್ಯದ ಪ್ರಮುಖ ಬಿಜೆಪಿ ನಾಯಕರು ಆರ್ ಎಸ್ಎಸ್ ನೆರವು ಕೋರಿದ್ದಾರೆ.
ಈ ಸಂಬಂಧ ಮಾರ್ಚ್ 3ರಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ ಕುಮಾರ್‌ ಸೇರಿದಂತೆ ಹಲವು ಹಿರಿಯ ಬಿಜೆಪಿ ನಾಯಕರು ಆರ್‌ಎಸ್‌ಎಸ್‌ ನಾಯಕರೊಂದಿಗೆ ಸಭೆ ನಡೆಸಿದ್ದು, ಮುಂಬರುವ ಚುನಾವಣೆಗೆ ಸಂಘ ಪರಿವಾರ ಯೋಜನೆಯನ್ನು ರೂಪಿಸುವ ಬಗ್ಗೆ ಚರ್ಚಿಸಿರುವುದಾಗಿ ತಿಳಿದು ಬಂದಿದೆ. 
ಸಂಘ ಪರಿವಾರ ರಾಜ್ಯ ಪ್ರಧಾನ ಕಾರ್ಯಾಲಯದಲ್ಲಿ ಕಳೆದ ಶನಿವಾರ ವಾರ್ಷಿಕ ಸಂಚಾಲನಾ ಸಭೆ ನಡೆಸಿತು. ಬಿ ಎಸ್‌ ಯಡಿಯೂರಪ್ಪ, ಅನಂತ ಕುಮಾರ್‌, ಸದಾನಂದ ಗೌಡ ಮತ್ತು ಇತರರು ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಘ ಪರಿವಾರದ ನೆರವನ್ನು ಅವರು ಕೋರಿದರು ಎಂದು ಆರ್‌ಎಸ್‌ಎಸ್‌ ಹಿರಿಯ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ. 
ಚುನಾವಣೆ ವೇಳೆ ಸಂಘ ಪರಿವಾರ ನೇರವಾಗಿ ಬಿಜೆಪಿಗೆ ನೆರವು ನೀಡುವುದಿಲ್ಲ. ಆದರೆ ಸಂಘದ ಸ್ವಯಂಸೇವಕರಿಗೆ ಆ ರೀತಿಯಲ್ಲಿ ನೆರವಾಗುವುದಕ್ಕೆ ಪೂರ್ಣ ಸ್ವಾತಂತ್ರ್ಯವಿದೆ ಎಂದು ಆರ್‌ಎಸ್‌ಎಸ್‌ ನಾಯಕರು ತಿಳಿಸಿದರು. 
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಒಲವು ಹೊಂದಿರುವ ಓಬಿಸಿ ಮತ್ತು ದಲಿತರ ಓಟುಗಳನ್ನು ಒಡೆಯಲು ಬಿಜೆಪಿ ಆರ್‌ಎಸ್‌ಎಸ್‌ ಅನ್ನು ಕೇಳಿಕೊಂಡಿದೆಯೇ? ಎಂಬ ಪ್ರಶ್ನೆಗೆ ಉತ್ತರಿದ ಆರ್ ಎಸ್ ಎಸ್ ನಾಯಕರೊಬ್ಬರು, ಅಂತಹ ಯಾವುದೇ ಸಲಹೆಯನ್ನು ನಾವು ನೀಡಿಲ್ಲ ಅಥವಾ ಬಿಜೆಪಿ ಆ ರೀತಿಯಲ್ಲಿ ಏನನ್ನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಚುನಾವಣೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಬಿಜೆಪಿಗೆ ಯಾವ ರೀತಿಯಲ್ಲಿ ನೆರವಾಗುವರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅತ್ಯಧಿಕ ಸಂಖ್ಯೆಯಲ್ಲಿ ಮತ ಹಾಕುವಂತೆ ಮತದಾರರ ಮನ ಒಲಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬಲ್ಲರು ಎಂದು ಹೇಳಿದರು. 
ಪ್ರಜಾಸತ್ತೆಯ ಯಶಸ್ಸಿಗೆ ದೊಡ್ಡ ಸಂಖ್ಯೆಯಲ್ಲಿ ಮತದಾರರು ಮತ ಹಾಕುವುದು ಮತ್ತು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುವುದರಿಂದ ಆರ್‌ಎಸ್‌ಎಸ್‌ ಕಾರ್ಯಕರ್ತರು ಆ ಸಂದೇಶವನ್ನು ಮತದಾರರಿಗೆ ತಲುಪಿಸಲು ಕ್ಷೇತ್ರ ಕಾರ್ಯ ಮಾಡಬಲ್ಲರು' ಎಂದು ಆ ಆರ್‌ಎಸ್‌ಎಸ್‌ ನಾಯಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.