ರಾಜಕೀಯ

ಹೊಟ್ಟೆಕಿಚ್ಚಿಗೆ ಯಾವುದೇ ಮದ್ದಿಲ್ಲ; ಕಾಂಗ್ರೆಸ್ ಆಂತರಿಕ ಕಿತ್ತಾಟ ಕುರಿತು ಡಿ.ಕೆ.ಶಿವಕುಮಾರ್

ಹೊಟ್ಟೆ ಕಿಚ್ಚುಗಳಿಗೆ ಯಾವುದೇ ರೀತಿಯ ರೀತಿಯ ಮದ್ದುಗಳಿಲ್ಲ ಎಂದು ಕಾಂಗ್ರೆಸ್ ಆಂತರಿಕ ಕಿತ್ತಾಟ ಕುರಿತು ಸಚಿವ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ...

ಹೊಟ್ಟೆಕಿಚ್ಚಿಗೆ ಯಾವುದೇ ಮದ್ದಿಲ್ಲ; ಕಾಂಗ್ರೆಸ್ ಆಂತರಿಕ ಕಿತ್ತಾಟ ಕುರಿತು ಡಿ.ಕೆ.ಶಿವಕುಮಾರ್
ಸಚಿವ ಡಿ.ಕೆ.ಶಿವಕುಮಾರ್
Published On :
ಬೆಂಗಳೂರು: ಹೊಟ್ಟೆ ಕಿಚ್ಚುಗಳಿಗೆ ಯಾವುದೇ ರೀತಿಯ ರೀತಿಯ ಮದ್ದುಗಳಿಲ್ಲ ಎಂದು ಕಾಂಗ್ರೆಸ್ ಆಂತರಿಕ ಕಿತ್ತಾಟ ಕುರಿತು ಸಚಿವ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ. 
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೊಂಡ ಬಳಿಕ ಪಕ್ಷದಲ್ಲಿ ಎದುರಾಗಿರುವ ಆಂತರಿಕ ಕಿತ್ತಾಟಗಳ ಕುರಿತಂತೆ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಡಿ,ಕೆ.ಶಿವಕುಮಾರ್ ಅವರು ಮನಬಿಚ್ಚಿ ಮಾತನಾಡಿದ್ದಾರೆ. 
ಸರ್ಕಾರ ರಚನೆ ಮತ್ತು ಸಂಪುಟ ಸೇರ್ಪಡೆಯಲ್ಲಿ ನಿಮ್ಮ ಪಾತ್ರ ಕುರಿತು ಪಕ್ಷದೊಳಗಿನ ನಾಯಕರಿಗೆ ಕೋಪವಿದೆಯೇ? 
ಸಚಿವನಾಗಿರುವುದಕ್ಕೆ ಕೆಲವರಿಗೆ ನನ್ನ ಮೇಲೆ ಕೋಪವಿದೆ. ನನ್ನ ಪ್ರಮಾಣಿಕತೆ ಹಾಗೂ ಶ್ರಮದಾಯಕ ಕೆಲಸವನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ. ಆದರೂ, ಹೊಟ್ಟೆಕಿಚ್ಚಿಗೆ ಯಾವುದೇ ರೀತಿ ಮದ್ದುಗಳಿಲ್ಲ. ತಪ್ಪುಗಳನ್ನು ಹುಡುಕುವ ಯತ್ನಗಳು ನಡೆಯುತ್ತಲೇ ಇರುತ್ತವೆ. ನನ್ನ ಕರ್ತವ್ಯ ನಿಭಾಯಿಸುವುದರ ಮೇಲೆ ನಾನು ನಂಬಿಕೆ ಇಟ್ಟಿದ್ದೇನೆ. ಯಶಸ್ಸು ಗಳಿಸುವುದಕ್ಕೆ ನಾನೊಬ್ಬನೇ ಅಲ್ಲ, ಪ್ರತೀಯೊಬ್ಬ ಶ್ರಮ ಕೂಡ ಮುಖ್ಯವಾಗಿದೆ ಎಂದು ಹೇಳಿದ್ದಾರೆ. 
ಸಂಪುಟ ರಚನೆ ಕುರಿತು ದಕ್ಷಿಣ ಕರ್ನಾಟಕ ಮತ್ತು ಒಕ್ಕಲಿಗ ಸಮುದಾಯಗಳಿಂದ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ದಕ್ಷಿಮ ಕರ್ನಾಟಕ 3-4 ಜಿಲ್ಲೆಗಳಲ್ಲಿ ಜೆಡಿಎಸ್ ನಿಂದ 30 ಶಾಸಕರಿದ್ದಾರೆ. ಅವರು ಪಡೆದಿರುವ ಮತಗಳಿಗೆ ಅನುಗುಣವಾಗಿ ಅವರಿಗೆ ಸ್ಥಾನಗಳನ್ನು ನೀಡಲಾಗಿದೆ. ಇದು ವೊಕ್ಕಲಿಗರ ವಿಚಾರವಲ್ಲ. ಪ್ರಜಾಪ್ರಭುತ್ವದಲ್ಲಿ ಅವರು ಪಡೆದಿರುವ ಮತಗಳ ಮೂಲಕ ಅವರಿಗೆ ಸ್ಥಾನವನ್ನು ನೀಡಲಾಗಿದೆ. ವೊಕ್ಕಲಿಗರೇ ಅತೀ ಹೆಚ್ಚು ಸ್ಥಾನವನ್ನು ಗೆದ್ದುಕೊಂಡಿದ್ದರೆ, ಆ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ಲಿಂಗಾಯತರಿಗೆ ಹೆಚ್ಚು ಸ್ಥಾನಗಳನ್ನು ನೀಡಲಾಗಿತ್ತು. ಅಧಿಕಾರ ಹಂಚಿಕೆಯಲ್ಲಿ ಕಾಂಗ್ರೆಸ್ ಸಮತೋಲನವನ್ನು ಕಾಪಾಡಿದೆ. ನ್ಯಾಯವನ್ನು ದೊರಕಿಸಿಕೊಟ್ಟಿದ್ದೇವೆ. 
ಕೃಷಿ ಸಾಲ ಮನ್ನಾ ನಿಮ್ಮ ಸಚಿವಾಲಯಗಳ ಯೋಜನೆಗಳ ಮೇಲೆ ಪರಿಣಾಮ ಬೀರುತ್ತದೆಯೇ? 
ಈ ಬಗ್ಗೆ ಜು.5ರವರೆಗೂ ಕಾದು ನೋಡಬೇಕಿದೆ. ನೀರಾವರಿ ಯೋಜನೆಗಳನ್ನು ಮುಟ್ಟದಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇನೆ. ವಾಸ್ತವವಾಗಿ ಕಾವೇರಿ ನದಿ ಪ್ರದೇಶದ ಶಾಸಕರು ಹೆಚ್ಚು ನೀರಾವರಿ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ. ಯೋಜನೆಗಳಿಗೆ ಹೆಚ್ಚುವರಿ ಅನುದಾನಗಳ ಅಗತ್ಯವಿದೆ. ಬಜೆಟ್ ವರೆಗೂ ಕಾದು ನೋಡುತ್ತೇನೆ. 
ನಿಮ್ಮ ಸಚಿವಾಲಯದ ಬಗ್ಗೆ ನಿಮಗಿರುವ ಮುಂದಿನ ದೃಷ್ಟಿಕೋನವೇನು? 
ನೀರಾವರಿ ಹಾಗೂ ವೈದ್ಯಕೀಯ ಶಿಕ್ಷಣ ಎರಡರ ಜವಬ್ದಾರಿ ನನ್ನ ಹೆಗಲ ಮೇಲಿದೆ. ಎರಡೂ ಸಚಿವಾಲಯಗಳೂ ದೊಡ್ಡ ಜವಾಬ್ದಾರಿಯುತವಾದದ್ದು. ಹುಟ್ಟಿದಿಂದ ನಾನು ಕೃಷಿಕನಾಗಿದ್ದೆ. ವೃತ್ತಿಯಿಂದ ಉದ್ಯಮಿ ಮತ್ತು ಆಯ್ಕೆಯಿಂದ ಶಿಕ್ಷಣ ತಜ್ಞನಾಗಿದ್ದೇನೆ. ಕೃಷಿಕನಾಗಿ ನೀರಾವರಿಯ ಕರ್ತವ್ಯವನ್ನು ಪಡೆದುಕೊಂಡಿದ್ದೇನೆ. ಶಿಕ್ಷಣ ತಜ್ಞ ಆಯ್ಕೆಯನ್ನು ವೈದ್ಯಕೀಯ ಶಿಕ್ಷಣಕ್ಕೆ ಬಳಸಿಕೊಳ್ಳಲಾಗಿದೆ. ದೇಶದಲ್ಲಿಯೇ ಕರ್ನಾಟಕ ರಾಜ್ಯ ಅತೀ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ರಾಜ್ಯವಾಗಿದೆ.
ವೈದ್ಯರ ಉಳಿಸಿಕೊಳ್ಳುವುದು ಮತ್ತು ಕರ್ನಾಟಕ ರಾಜ್ಯವು ಆರೋಗ್ಯ ಪ್ರವಾಸೋದ್ಯಮ ನಾಯಕನಂದೆ ಉತ್ತಮ ಆರೋಗ್ಯ ಚಿಕಿತ್ಸೆಗಳನ್ನು ನೀಡುವುದರತ್ತ ನಾನು ದೃಷ್ಟಿಕೋನವನ್ನಿಟ್ಟುಕೊಂಡಿದ್ದೇನೆ. ರಾಜಧಾನಿ ಬೆಂಗಳೂರಿನಲ್ಲಿ ವಿಶ್ವದ ಅತ್ಯುತ್ತಮ ಚಿಕಿತ್ಸೆಗಳು ದೊರೆಯಬೇಕು. ಸರ್ಕಾರಿ ಸೀಟುಗಳನ್ನು ಆಯ್ಕೆ ಮಾಡಿಕೊಂಡ ಎಲ್ಲಾ ವಿದ್ಯಾರ್ಥಿಗಳು ಕನಿಷ್ಟವೆಂದರೂ 1 ವರ್ಷವಾದರೂ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಪ್ರತೀ ವಿದ್ಯಾರ್ಥಿಗಳಿಗೆ ಸರ್ಕಾರ ರೂ.10-12 ಲಕ್ಷ ಖರ್ಚು ಮಾಡುತ್ತಿದೆ. ವಿಶ್ವವಿದ್ಯಾಲಯಗಳಿಗೆ ನಾವೂ ಕೂಡ ಹಣವನ್ನು ಕಟ್ಟಬೇಕಿದ್ದು, ಹೀಗಾಗಿ ಸರ್ಕಾರಿ ಸೀಟುಗಳ ಮೇಲೆ ರೂ.50,000 ಹೆಚ್ಚಿಸಲು ನಿರ್ಧರಿಸಲಾಗಿದೆ. 
ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ನಾಯಕತ್ವ ಜೊತೆಗಿನ ತಿಕ್ಕಾಟ ಇದೀಗ ವೈಯಕ್ತಿಕವಾಗಿದೆಯೇ? 
ಯಾರೊಂದಿಗೂ ಹೋರಾಟ ಮಾಡುವುದು ನನಗಿಷ್ಟವಿಲ್ಲ. ನನ್ನ ತತ್ವಗಳು ನನಗೆ ಮಾರ್ಗದರ್ಶನವನ್ನು ನೀಡುತ್ತಿದೆ. ಯಾರೊಂದಿಗೂ ವೈಯಕ್ತಿಕವಾಗಿ ಹೋರಾಟ ಮಾಡುವುದು ನನಗಿಷ್ಟವಿಲ್ಲ. ಒಂದು ವೇಳೆ ಅವರು ವೈಯಕ್ತಿಕವಾಗಿ ತೆಗೆದುಕೊಂಡರೆ, ಅದು ಅವರಿಷ್ಟ. ಇದು ನನಗೆ ಸೈದ್ಧಾಂತಿಕ ಹೋರಾಟವಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.