ವಿಧಾನಸಭೆಯಲ್ಲಿ ಸಿಟಿ. ರವಿಗೆ ಬೆದರಿಕೆ: ವಿನಯ್ ಕುಲಕರ್ಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಆಗ್ರಹ
ವಿಧಾನಸಭೆಯಲ್ಲಿ ಬಿಜೆಪಿ ನಾಯ ಸಿಟಿ. ರವಿ ಅವರಿಗೆ ಬೆದರಿಕೆ ಹಾಕಿರುವುದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಬಿಜೆಪಿ, ಸಚಿವ ವಿನಯ್ ಕುಲಕರ್ಣಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಶುಕ್ರವಾರ ಆಗ್ರಹಿಸಿದೆ...

Published On :
ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ನಾಯ ಸಿಟಿ. ರವಿ ಅವರಿಗೆ ಬೆದರಿಕೆ ಹಾಕಿರುವುದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಬಿಜೆಪಿ, ಸಚಿವ ವಿನಯ್ ಕುಲಕರ್ಣಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಶುಕ್ರವಾರ ಆಗ್ರಹಿಸಿದೆ.
ವಿಧಾನಸಭೆಯಲ್ಲಿ ವಿನಯ್ ಕುಲಕರ್ಣಿಯವರ ಬೆದರಿಕೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಡಿಯರ್ 10 ಪರ್ಸೆಂಟ್ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಸಚಿವ ವಿನಯ್ ಕುಲಕರ್ಣಿ ಅವರು ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಅಂತಹವರು, ಸಿಟಿ ರವಿ ಅವರಿಗೆ ಪ್ರಜಾಪ್ರಭುತ್ವದ ದೇವರ ಮಂದಿರ ವಿಧಾನಸಭೆಯಲ್ಲಿಯೇ ಬೆದರಿಕೆ ಹಾಕುತ್ತಾರೆ. ಈ ರೌಡಿ ಮಂತ್ರಿ ವಿರುದ್ದ ಕ್ರಮ ಕೈಗೊಳ್ಳುವ ಧೈರ್ಯ ಇದೆಯಾ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಹಾಕಿದ್ದಾರೆ.
ಇದರಂತೆ ರಾಹುಲ್ ಗಾಂಧಿಯವರಿಗೂ ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, ಕರ್ನಾಟಕ ವಿಧಾನಸಭೆಯಲ್ಲಿ ಹಿಂದುಗಳ ಕೊಲೆಗಳ ಕುರಿತಂತೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ನಿಮ್ಮ ಸಚಿವ ವಿನಯ್ ಕುಲಕರ್ಣಿಯವರು ನಮ್ಮ ಪಕ್ಷದ ಶಾಸಕ ಸಿ.ಟಿ.ರವಿಯವರಿಗೆ ನೇರವಾಗಿ ಬೆದರಿಗೆ ಹಾಕಿದ್ದಾರೆ. ಮುಂದಿನ ಟಾರ್ಗೆಟ್ ಸಿ.ಟಿ. ರವಿ ಎಂದು ಹೇಳಿದ್ದಾರೆ. ಕರ್ನಾಟಕಕ್ಕೆ ನಾಳೆ ಆಗಮಿಸುವುದಕ್ಕೂ ಮುನ್ನ, ನಿಮ್ಮ ಸಚಿವನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.
ಬಿಜೆಪಿ ಕಾರ್ಪೋರೇಟರ್ ಪತಿ ಎಸ್.ಕದಿರೇಸ್ ಹತ್ಯೆ ಪ್ರಕರಣ ಕುರಿತು ಬಿಜೆಪಿ ನಾಯಕರು ಸದನದಲ್ಲಿ ದನಿ ಎತ್ತಿದ್ದರು. ರಾಜ್ಯದಲ್ಲಿ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿತ್ತು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪ ಮಾಡಿದ್ದರು.
ಬಿಜೆಪಿ ನಾಯಕ ಅಶೋಕ್ ಮಾತನಾಡಿ, ಈ ಹಿಂದೆ ಸಂತೋಷ್ ಇಂದು ಕದಿರೇಷ್ ನಾಳೆ ಯಾರ? ಎಂದು ಪ್ರಶ್ನಿಸಿದ್ದರು. ಈ ವೇಳೆ ಆಡಳಿತಾರೂಢ ಪಕ್ಷದಿಂದ ಸಿ.ಟಿ. ರವಿ ಹೆಸರು ಕೇಳಿಬರತೊಡಗಿದವು. ಇದರಿಂದ ಬಿಜೆಪಿ ತೀವ್ರವಾಗಿ ಕೆಂಡ ಕಾರಲು ಆರಂಭಿಸಿತು.
ಬಳಿಕ ಮಾತನಾಡಿದ ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು, ರವಿ ಅವರ ಹೆಸರನ್ನು ಹಾಗೆ ಸುಮ್ಮನೆ ಹೇಳಲಾಗಿತ್ತಷ್ಟೇ. ಇದಕ್ಕೆ ಕ್ಷಮೆಕೇಳುತ್ತೇನೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿKarnatakaಕರ್ನಾಟಕYeddyurappaಯಡಿಯೂರಪ್ಪthreatಬೆದರಿಕೆಸಿ.ಟಿ.ರವಿCT. RaviVinay Kulkarniವಿನಯ್ ಕುಲಕರ್ಣಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


