ರಾಜಕೀಯ

ಆರ್ ಎಸ್ಎಸ್ ಅನ್ನು ಮುಸ್ಲಿಂ ಬ್ರದರ್ ಹುಡ್ ಗೆ ಹೋಲಿಕೆ ಮಾಡಿದ ರಮ್ಯಾ?

ಈಜಿಪ್ಟ್​ನ ಉಗ್ರ ಸಂಘಟನೆ ಮುಸ್ಲಿಂ ಬ್ರದರ್​ಹುಡ್ ನೊಂದಿಗೆ ಆರ್​ಎಸ್​ಎಸ್​ ಹೋಲಿಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಆರ್ ಎಸ್ಎಸ್ ಅನ್ನು ಮುಸ್ಲಿಂ ಬ್ರದರ್ ಹುಡ್ ಗೆ ಹೋಲಿಕೆ ಮಾಡಿದ ರಮ್ಯಾ?
ಸಂಗ್ರಹ ಚಿತ್ರ
Published On :
ಬೆಂಗಳೂರು: ಈಜಿಪ್ಟ್​ನ ಉಗ್ರ ಸಂಘಟನೆ ಮುಸ್ಲಿಂ ಬ್ರದರ್​ಹುಡ್ ನೊಂದಿಗೆ ಆರ್​ಎಸ್​ಎಸ್​ ಹೋಲಿಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಬಿಜೆಪಿ ವಿರುದ್ಧ ಸದಾ ಟ್ವೀಟ್​ ಮೂಲಕ  ಆಕ್ರೋಶ ವ್ಯಕ್ತಪಡಿಸುವ ಮಾಜಿ ಸಂಸದೆ ರಮ್ಯಾ ಈ ಬಾರಿ ಆರ್​ಎಸ್​ಎಸ್​ ಟಾರ್ಗೆಟ್ ಮಾಡುವ ಭರದಲ್ಲಿ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.  ಈಜಿಪ್ಟ್ ​ನ ಉಗ್ರ ಸಂಘಟನೆಯಾದ ಮುಸ್ಲಿಂ ಬ್ರದರ್ ಹುಡ್ ನೊಂದಿಗೆ ಆರ್ ಎಸ್​ಎಸ್​ ಹೋಲಿಕೆ ಮಾಡಿ, ವಿವಾದಾತ್ಮಕ ಟ್ವೀಟ್​ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ರಮ್ಯಾ ಗುರಿಯಾಗಿದ್ದಾರೆ. 
ಮುಸ್ಲಿಂ ಬ್ರದರ್ ಹುಡ್​, ಆರ್ ಎಸ್ಎಸ್ ​ಎರಡೂ ಸ್ಥಾಪನೆಯಾದ್ದು 1920ರಲ್ಲಿ. ಎರಡೂ ಸಂಘಟನೆಗಳೂ ಜಾತ್ಯತೀತ ದೇಶ ನಿರ್ಮೂಲನೆ ಗುರಿ ಹೊಂದಿದೆ, ಎರಡೂ ಸಂಘಟನೆಗಳಿಂದಲೂ ಸರ್ಕಾರದ ಮೇಲೆ ನಿಯಂತ್ರಣ ಯತ್ನ ನಡೆಯುತ್ತಿದೆ.  2011ರಲ್ಲಿ ಅರಬ್ ಸ್ಪ್ರಿಂಗ್ ಹೋರಾಟ ಮುಸ್ಲಿಂ ಬ್ರದರ್ ಹುಡ್ ಮತ್ತು ಅದರ ನಾಯಕ ಮೋರ್ಸಿಯನ್ನು ಅಧಿಕಾರಕ್ಕೇರಿಸಿತ್ತು. ಭಾರತದಲ್ಲೂ 2011ರಲ್ಲಿ ನಡೆದಿದ್ದ ಅಣ್ಣಾ ಹಜಾರೆ ಹೋರಾಟದಿಂಗಾಗಿ ಆರ್ ಎಸ್ ಎಸ್ ಬೆಂಬಲಿತ ಮೋದಿ ಅಧಿಕಾರಕ್ಕೇರಿದ್ದಾರೆ. ಮುಸ್ಲಿಂ ಬ್ರದರ್ ಹುಡ್ ನಂತೆಯೇ ಆರ್ ಎಸ್ಎಸ್ ಕೂಡ ಸರ್ಕಾರದ ಮೇಲೆ ನಿಯಂತ್ರ ಹೊಂದಿದೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
ಆರ್ ಎಸ್​ಎಸ್​ ನಾಯಕರು ಹೇಳಿದಂತೆ ಬಿಜೆಪಿ ನಾಯಕರು ಆಡಳಿತ ನಡೆಸುತ್ತಾರೆ. ಬಿಜೆಪಿಯ ಭ್ರಾತೃತ್ವ ಸಂಸ್ಥೆ ಇದಾಗಿದೆ. ದೇಶಾದ್ಯಂತ ಬಿಜೆಪಿ, ಆರ್​ಎಸ್​ಎಸ್​ ದ್ವೇಷ ಭಾವನೆಯನ್ನು ಹರಡುತ್ತಿದೆ ಎಂದು  ರಾಹುಲ್​ ಗಾಂಧಿ ಇತ್ತೀಚೆಗೆ ಬರ್ಲಿನ್ ಗೆ ಭೇಟಿ ನೀಡಿದ್ದ ವೇಳೆ ಟೀಕಿಸಿದ್ದರು. ರಾಹುಲ್​ ಟೀಕೆ ಬೆನ್ನಲ್ಲೆ ಈಗ ಕಾಂಗ್ರೆಸ್​ ಐಟಿ ಸೆಲ್​ ಸಂಚಾಲಕಿಯಾಗಿರುವ ಮಾಜಿ ಸಂಸದೆ ರಮ್ಯಾ ಕೂಡ ಆರ್ ಎಸ್​ಎಸ್​ ವಿರುದ್ಧ ಹರಿಹಾಯ್ದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.