ರಾಜಕೀಯ

ನೋಟು ಅಮಾನ್ಯದಿಂದ ಸಾಧಿಸಿದಾದರೂ ಏನು? - ಪ್ರಿಯಾಂಕ ಚತುರ್ವೇದಿ ಪ್ರಶ್ನೆ

ಡಿಜಿಟಲ್ ಆರ್ಥಿಕತೆ ಕಡೆಗೆ ಭಾರತವನ್ನು ಕೊಂಡೊಯ್ಯುವ ಉದ್ದೇಶದಿಂದ ಕೇಂದ್ರಸರ್ಕಾರ ಕೈಗೊಂಡ 1 ಸಾವಿರ ಹಾಗೂ 500 ರೂ ನೋಟ್ ಅಮಾನ್ಯದಿಂದ ಸಾಧಿಸಿದಾದರೂ ಏನು ಎಂದು ಎಐಸಿಸಿ ವಕ್ತಾರೆ ಪ್ರಿಯಾಂಕ ಚತುರ್ವೇದಿ ಪ್ರಶ್ನಿಸಿದ್ದಾರೆ.

ನೋಟು ಅಮಾನ್ಯದಿಂದ ಸಾಧಿಸಿದಾದರೂ ಏನು? - ಪ್ರಿಯಾಂಕ ಚತುರ್ವೇದಿ ಪ್ರಶ್ನೆ
ಪ್ರಿಯಾಂಕ ಚತುರ್ವೇದಿ ಸುದ್ದಿಗೋಷ್ಠಿ
Published On :

ಬೆಂಗಳೂರು: ಡಿಜಿಟಲ್ ಆರ್ಥಿಕತೆ ಕಡೆಗೆ ಭಾರತವನ್ನು ಕೊಂಡೊಯ್ಯುವ ಉದ್ದೇಶದಿಂದ ಕೇಂದ್ರಸರ್ಕಾರ ಕೈಗೊಂಡ 1 ಸಾವಿರ ಹಾಗೂ 500 ರೂ ನೋಟ್ ಅಮಾನ್ಯದಿಂದ ಸಾಧಿಸಿದಾದರೂ ಏನು ಎಂದು ಎಐಸಿಸಿ ವಕ್ತಾರೆ ಪ್ರಿಯಾಂಕ ಚತುರ್ವೇದಿ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೋಟು ಅಮಾನ್ಯದ ನಂತರ ಹೆಚ್ಚಿನ ಹಣ ಸಿಗದಂತಾಗಿದ್ದು, ದೇಶದಲ್ಲಿನ ಜನರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

13 ರಾಜ್ಯಗಳಲ್ಲಿ ನಗದು ಕೊರತೆ ಎದುರಾಗಿದೆ. ಎಟಿಎಂಗಳಲ್ಲಿ ಹಣದ ಕೊರತೆ ಉಂಟಾಗಿದೆ. ದಿನನಿತ್ಯದ ವಸ್ತುಗಳನ್ನು ಕೊಳ್ಳಲು ಜನರು ಹೆಣಗಾಡುತ್ತಿದ್ದಾರೆ.  7 ಲಕ್ಷ ಕೋಟಿ ರೂಪಾಯಿಯನ್ನು ಹೊರಗಡೆ ಸಾಗಿಸಲಾಗಿದೆ ಎಂದು ಆರೋಪಿಸಿದರು.

ಸಾರ್ವಜನಿಕರ ಹಣವನ್ನು ಸರ್ಕಾರ ಕಸಿಯುತ್ತಿದ್ದು, ಸಾರ್ವಜನಿಕರು ಮದುವೆ ಮತ್ತಿತರ ಸಮಾರಂಭಗಳಿಗೆ ಹಣಕ್ಕಾಗಿ ಪರದಾಡುವಂತಾಗಿದೆ ಎಂದು ಪ್ರಿಯಾಂಕ ಚತುರ್ವೇದಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.