ರಾಜಕೀಯ

ನಿರಾಣಿ ಕಾರಿನ ಬದಲಾಗಿ ರೈಲಿನಲ್ಲೇ ಬಿಎಸ್ ವೈ ಬರ ಪ್ರವಾಸ

ಬರ ಪೀಡಿತ ಗ್ರಾಮಗಳಿಗೆ ಇದೇ ಏಪ್ರಿಲ್ 27ರಿಂದ 5 ದಿನಗಳ ಕಾಲ ಪ್ರವಾಸ ಕೈಗೊಳ್ಳಲಿರುವ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರೈಲಿನಲ್ಲೇ ಬರ ಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ...

ನಿರಾಣಿ ಕಾರಿನ ಬದಲಾಗಿ ರೈಲಿನಲ್ಲೇ ಬಿಎಸ್ ವೈ ಬರ ಪ್ರವಾಸ
ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಬರ ಪೀಡಿತ ಗ್ರಾಮಗಳಿಗೆ ಇದೇ ಏಪ್ರಿಲ್ 27ರಿಂದ 5 ದಿನಗಳ ಕಾಲ ಪ್ರವಾಸ ಕೈಗೊಳ್ಳಲಿರುವ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರೈಲಿನಲ್ಲೇ ಬರ  ಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಅವರಿಗೆ ಮುರುಗೇಶ್ ನಿರಾಣಿ ಅವರು ಐಷಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು. ಪಕ್ಷದ  ಕೆಲಸಕ್ಕಾಗಿ ಮತ್ತು ಬರ ಪ್ರವಾಸಕ್ಕಾಗಿ ಯಡಿಯೂರಪ್ಪ ಇದೇ ಕಾರಿನಲ್ಲಿ ತೆರಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ರಾಜ್ಯದ ಜನ ಬರದಿಂದ ತತ್ತರಿಸುತ್ತಿರುವಾಗ ಐಷಾರಾಮಿ ಕಾರಿನಲ್ಲಿ  ಪ್ರವಾಸ ಮಾಡುವ ಕುರಿತು ಕೇಳಿಬಂದ ಟೀಕೆಗಳಿಂದಾಗಿ ಯಡಿಯೂರಪ್ಪ ರೈಲಿನಲ್ಲೇ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ.

ಇದೇ ಏಪ್ರಿಲ್ 27ರಂದು ಬೀದರ್ ಜಿಲ್ಲೆಯಿಂದ ಯಡಿಯೂರಪ್ಪ ಅವರು ಪ್ರವಾಸ ಆರಂಭಿಸಲಿದ್ದು, ಕುಡಿಯುವ ನೀರಿನ ಸಮಸ್ಯೆ, ಬೆಳೆಹಾನಿ, ಗೋಶಾಲೆ ನಿರ್ಮಾಣ, ಮೇವಿನ ಸಂಗ್ರಹ, ತುರ್ತು  ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಆ ನಂತರ ರಾಜ್ಯ ಸರ್ಕಾರ ಮಾಡಬೇಕಾಗಿರುವ ತುರ್ತು ಪರಿಹಾರ  ಕಾಮಗಾರಿಗಳ ಕುರಿತು ವರದಿ ಬಿಎಸ್ ವೈ ವರದಿ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮಾಧ್ಯಮ ಕೇಂದ್ರದ ಸಂಚಾಲಕ ಎಸ್.ಪ್ರಕಾಶ್ ತಿಳಿಸಿದ್ದಾರೆ.

ರೈಲು ಪ್ರಯಾಣ ಕುರಿತು ಬಿಎಸ್ ವೈ ಸ್ಪಷ್ಟನೆ
ಪಕ್ಷ ಸಂಘಟನೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಕೊಡುಗೆಯಾಗಿ ನೀಡಿರುವ ಕಾರನ್ನು ಬರ ಅಧ್ಯಯನಕ್ಕೆ ಬಳಕೆ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ  ಸ್ಪಷ್ಟಪಡಿಸಿದರು. ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಸುತ್ತಾಡಿ ಪಕ್ಷ ಕಟ್ಟುವಂತೆ ನಿರಾಣಿ ಕಾರ್ ಕೊಡಿಸಿರುವುದು ನಿಜ. ಆದರೆ, ದೂರದ  ಊರುಗಳಿಗೆ ಮೊದಲಿನಿಂದಲೂ ಕಾರಿನಲ್ಲಿ ಪ್ರಯಾಣಿಸುವುದಿಲ್ಲ. ರೈಲನ್ನೇ ಹೆಚ್ಚು ಬಳಕೆ ಮಾಡುತ್ತ ಬಂದಿದ್ದೇನೆ. ರೈಲು ಪ್ರಯಾಣ ಆರೋಗ್ಯಕ್ಕೂ ಉತ್ತಮ. ಹಾಗಾಗಿ ಸದ್ಯದ ಬರ ಪರಿಸ್ಥಿತಿ  ಅಧ್ಯಯನಕ್ಕೆ ಮತ್ತು ದೂರದ ಊರುಗಳಿಗೆ ನಿರಾಣಿ ನೀಡಿರುವ ಕಾರನ್ನು ಬಳಸುವುದಿಲ್ಲ. ಬೆಂಗಳೂರು ನಗರಮತ್ತು ಹತ್ತಿರದ ಸ್ಥಳಗಳಿಗೆ ಆ ಕಾರನ್ನು ಬಳಕೆ ಮಾಡುತ್ತೇನೆ ಎಂದು ಬಿಎಸ್‌ವೈ  ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.