ಎಲ್ಲಾ ನೇಮಕದಲ್ಲೂ ವ್ಯಾಪಾರ: ರಮೇಶ್ ಕುಮಾರ್ ಗರಂ
ಆಡಳಿತದ ಬಿಗಿ ಸಡಿಲಗೊಂಡಾಗಲೆಲ್ಲಾ ಸರ್ಕಾರದ ಕಿವಿ ಹಿಂಡುವ ಸದಸ್ಯ ರಮೇಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಮತ್ತೆ ಸರ್ಕಾರದ ಹಾಗೂ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರು: ಕಾಂಗ್ರೆಸ್ ಸದಸ್ಯರಾಗಿದ್ದರು ಆಡಳಿತದ ಬಿಗಿ ಸಡಿಲಗೊಂಡಾಗಲೆಲ್ಲಾ ಸರ್ಕಾರದ ಕಿವಿ ಹಿಂಡುವ ಸದಸ್ಯ ರಮೇಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಮತ್ತೆ ಸರ್ಕಾರದ ಹಾಗೂ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಅವರ ಮಾತಿಗೆ ಸೂಕ್ತ ಉತ್ತರ ನೀಡದೇ ಸಚಿವ ಯುಟಿ ಖಾದರ್ ಪರದಾಡಿದರೆ ಇನ್ನೊಂದು ಸಂದರ್ಭದಲ್ಲಿ ಎಲ್ಲರ ನೇಮಕವೂ ವ್ಯಾಪಾರ. ಇದನ್ನು ನಾನು ಘಂಟಾಘೋಷವಾಗಿ ಹೇಳುತ್ತೇನೆ ಎಂದರು.
ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದಾಗ ಮಾತನಾಡಿದ ರಮೇಶ್ ಕುಮಾರ್ ಇಲ್ಲಿ ಯಾರು ಹಣ ತೆಗೆದುಕೊಂಡರೋ ನೀಡಿದರೋ ಗೊತ್ತಿಲ್ಲ ಆದರೆ ಉಪಕುಲಪತಿಗಳು, ನ್ಯಾಯಾಧೀಶರು, ಲೋಕಾಯುಕ್ತರು ಸೇರಿದಂತೆ ಬಹುತೇಕ ಎಲ್ಲಾ ನೇಮಕಗಳೂ ಇಂದು ವ್ಯಾಪಾರವೇ ಆಗುತ್ತಿವೆ, ಎಲ್ಲವನ್ನೂ ಕೊಂಡುಕೊಳ್ಳಲಾಗುತ್ತಿದೆ. ಇದನ್ನು ನಾನು ಎಲ್ಲಿ ಬೇಕಾದರೂ ಹೇಳುತ್ತೇನೆ.ಕಾನೂನು ಎದುರಿಸಲು ಸಿದ್ಧನಿದ್ದೇನೆ. ಇಂತಹ ಹುದ್ದೆಗಳೆಲ್ಲವೂ ಇಂದು ಪುನರ್ವಸತಿ ಕೇಂದ್ರಗಳಾಗುತ್ತಿವೆ. ಹಿಂದೆ ಮಹನೀಯರನ್ನು ಹುಡುಕಿ ಅವರಿಗೆ ಹುದ್ದೆ ನೀಡಲಾಗುತ್ತಿತ್ತು. ಇಂದು ಅದನ್ನು ವ್ಯಾಪಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೇ ಭಾಸ್ಕರ್ ರಾವ್ ನೇಮಕದಲ್ಲಿ ಅಂದಿನ ಸಿ.ಎಂ ಪ್ರತಿಪಕ್ಷ ನಾಯಕರು ಶಿಫಾರಸು ಮಾಡಿದರೂ ಮುಖ್ಯನ್ಯಾಯಮೂರ್ತಿ ಅವರಿಗೆ ಭಾಸ್ಕರ್ ರಾವ್ ಅವರ ಸರ್ವೀಸ್ ರೆಕಾರ್ಡ್ ಗೊತ್ತಿರಲಿಲ್ಲವಾ? ಅವರು ಹೇಗೆ ಒಪ್ಪಿದರು ಎಂದು ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


