ಸಂದಾಯವಾಗದೆ ಕಡತ ಚಲಿಸದು: ಆರೋಪ
ರಾಜ್ಯವನ್ನು ಒಬ್ಬ ವ್ಯಕ್ತಿ ಹಾಗೂ ಅವರ ಸಹಚರ ಆಳುತ್ತಿದ್ದಾರೆ. ಸಂದಾಯವಿಲ್ಲದೇ ಯಾವೊಂದು ಕಡತವೂ ಕದಲುವುದಿಲ್ಲ...

ಬೆಂಗಳೂರು: ರಾಜ್ಯವನ್ನು ಒಬ್ಬ ವ್ಯಕ್ತಿ ಹಾಗೂ ಅವರ ಸಹಚರ ಆಳುತ್ತಿದ್ದಾರೆ. ಸಂದಾಯವಿಲ್ಲದೇ ಯಾವೊಂದು ಕಡತವೂ ಕದಲುವುದಿಲ್ಲ. ಬಹಳ ಬುದ್ಧಿವಂತಿಕೆಯಿಂದ ಸರ್ಕಾರ ದಲ್ಲಿ ವ್ಯವಹಾರ ನಡೆಯುತ್ತಿದೆ ಎಂದುನಿವೃತ್ತ ಡಿಜಿಪಿ ಶಂಕರ ಬಿದರಿ ಆರೋಪಿಸಿದ್ದಾರೆ. ಕರ್ನಾಟಕವು ಇಂದು ಭ್ರಷ್ಟಾಚಾರದಲ್ಲಿ ನಂ.1 ಆಗಿದೆ.ಹಿಂದಿನ ಸರ್ಕಾರಗಳ ತಪ್ಪಿನಿಂದ ಪಾಠ ಕಲಿತಿರುವುದರಿಂದಎಲ್ಲ ಸಂದಾಯಗಳನ್ನು ಸೂಕ್ಷ್ಮವಾಗಿ ಮಾಡಲಾಗುತ್ತಿದೆ. ಕೆಲ ಅಧಿಕಾರಿಗಳ ಮೂಲಕ ಕಡತ ವಿಲೇವಾರಿಯಾಗುತ್ತಿದ್ದು, ನಿರೀಕ್ಷಿತ ವ್ಯವಹಾರ ನಡೆದು ಸಂದಾಯ ವಾಗದಿದ್ದರೆ ಆ ಕಡತಕ್ಕೆ ಮುಕ್ತಿಯೇ ಸಿಗುತ್ತಿಲ್ಲ. ಆದರೆ, ಪ್ರಚಾರಕ್ಕೆ ಕಡತ ವಿಲೇವಾರಿ ಯಜ್ಞ ಎಂದು ಹೇಳುತ್ತಿದ್ದಾರೆ.
ಅದರಲ್ಲೂ ಮುಖ್ಯ ಮಂತ್ರಿಗಳ ಬಳಿ ಇರುವ ಇಲಾಖೆಯಲ್ಲಿ ಈ ಸಂದಾಯ ವ್ಯವಹಾರ ಹೆಚ್ಚಿದೆ ಎಂದುರಾಜ್ಯ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಸಿ ತಿಳಿಸಿದರು. ಹಿಂದಿನ ಸರ್ಕಾರದಲ್ಲಿ ಸಚಿವರೇ ಸಿಕ್ಕಿಹಾಕಿಕೊಂಡಿರುವುದರಿಂದ ಜಾಣತನದಿಂದ ಅ„ಕಾರಿಗಳ ನೇತೃತ್ವದಲ್ಲೇ ಸಮಿತಿರಚಿಸಲಾಗಿದೆ. ಈ ಮೂಲಕ ಜಾಣತನದಿಂದ ಸೂಕ್ಷ್ಮವಾಗಿ ವ್ಯವಹಾರ ನಡೆಸಲಾಗುತ್ತಿದೆ. ದೇಶ, ಮನೆಯನ್ನೇ ಲೂಟಿ ಮಾಡಲು ನಿಂತರೆ ಪರಿಸ್ಥಿತಿ ಏನಾಗಬೇಕು? ರಾಜ್ಯದಲ್ಲಿ ಅದೇ ಕೆಲಸ ಪ್ರಾರಂಭವಾಗಿದೆ. ಇದಕ್ಕೆ ನಿಯಂತ್ರಣ ಹೇರಬೇಕಿದೆ ಎಂದು ಅವರು ಹೇಳಿದರು. ನಿಸ್ವಾರ್ಥ ಸೇವೆಗೆಂದು ರಾಜಕೀಯಕ್ಕೆ ಬರಬೇಕು. ಡೀಲ್ ನಡೆಸುವುದಾದರೆ ರಿಯಲ್ ಎಸ್ಟೇಟ್‍ನಂತಹ ಸಾಕಷ್ಟುಉದ್ಯಮಗಳಿವೆ. ರಾಜಕೀಯವನ್ನು ಇಂತಹ ಕಾರ್ಯಗಳಿಗೆ ಬಳಸಿಕೊಳ್ಳಬಾರದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


