ನಮಗೂ ಬೇಡ ಭ್ರಷ್ಟ ಮುಖ್ಯಮಂತ್ರಿ: ಶಾಸಕ ರಮೇಶ್ ಕುಮಾರ್
ಭ್ರಷ್ಟ ಮುಖ್ಯಮಂತ್ರಿಯನ್ನು ತಲೆ ಮೇಲೆ ಇಟ್ಕೊಂಡು ಕೂರೋಕೆ ನಮಗೇನು ಹುಚ್ಚೇ?...

ವಿಧಾನಸಭೆ: ಭ್ರಷ್ಟ ಮುಖ್ಯಮಂತ್ರಿಯನ್ನು ತಲೆ ಮೇಲೆ ಇಟ್ಕೊಂಡು ಕೂರೋಕೆ ನಮಗೇನು ಹುಚ್ಚೇ?
ನಿಮ್ಮ ಬಳಿ ಏನು ದಾಖಲೆಗಳಿದೆಯೋ ಬಿಡುಗಡೆ ಮಾಡಿ, ಅದನ್ನು ಬಿಟ್ಟು ಸುಮ್ಮನೇ ಆರೋಪಿಸಬೇಡಿ, ಇಲ್ಲಿ ಆರೋಪ ಮಾಡಿ ಶೆಟ್ಟರ್-ಸಿದ್ದರಾಮಯ್ಯ ರಾಜಿ ಮಾಡಿಕೊಂಡರೆ ನಾವು ಶಾಸಕರು ಎಲ್ಲಿಗೆ ಹೋಗಬೇಕು? ಸತ್ಯವು ಜನರಿಗೆ ತಿಳಿಯಲಿ. ಯಾರ್ಯಾರ ಪಾಲು ಎಷ್ಟೆಷ್ಟು ಎಂದು ಗೋತ್ತಾಗುತ್ತದೆ ಎಂದು ಶಾಸಕ ರಮೇಶ್ ಕುಮಾರ್ ಗೇಲಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಅಧಿಸೂಚನೆಯ ಭಯದಲ್ಲಿ ರಾಜ್ಯ ಸರ್ಕಾರವು 7 ಗಣಿ ಕಂಪನಿಗಳಿಗೆ ಪರವಾನಗಿ ನೀಡಿದೆ ಎಂಬ ಜಗದೀಶ್ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ಈ 7 ಗಣಿ ಕಂಪನಿಗಳ ಹಿನ್ನೆಲೆಯೇನು? ಇದರ ಮಾಲೀಕರ್ಯಾರು? ಇವರಿಗೆ ಯಾವ್ಯಾವ ಪಕ್ಷದ ಜತೆ ನಂಟಿದೆ? ಅಕ್ರಮವಾಗಿ ಶಿಫಾರಸು ಮಾಡಿದ್ದರೆ ಸಿದ್ದರಾಮಯ್ಯ ಅವರ ಖಾತೆಗೆ ಹೇಗೆ ದುಡ್ಡು ಬಂದಿದೆ ಅಥವಾ ಸಿದ್ದರಾಮಯ್ಯ ಎಷ್ಟು ಬಂಗಾರ, ನಿವೇಶನ ಪಡೆದಿದ್ದಾರೆ ಎಂದು ಬಹಿರಂಗಪಡಿಸಿ.
ನಮಗೂ ಭ್ರಷ್ಟ ಮುಖ್ಯಮಂತ್ರಿ ಬೇಡ ಎಂದು ಪ್ರತಿಪಕ್ಷಗಳಿಗೆ ಅವರು ಸವಾಲು ಹಾಕಿದರು. ನೀವು ಹೀಗೆ ಆರೋಪ ಮಾಡಿ ಸುಮ್ಮನಾದರೆ ನೀವು ಹಾಗೂ ಸಿದ್ದರಾಮಯ್ಯ ರಾಜಿ ಮಾಡಿಕೊಂಡಿದ್ದೀರಿ ಎಂದು ಜನ ಮಾತನಾಡುತ್ತಾರೆ. ಒಂದೊಮ್ಮೆ ಅಕ್ರಮ ನಡೆದಿದ್ದರೆ ಅದು ಕ್ರಿಮಿನಲ್ ಅಪರಾಧವಾಗುತ್ತದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಮೊದಲೇ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ರಮೇಶ್ ಕುಮಾರ್ ಶೆಟ್ಟರ್ ಗೆ ತಿಳಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


