ರಾಜಕೀಯ

ನನ್ ಬರ್ತ್ ಡೇಟ್ ಸರಿಯಿಲ್ಲ ಕಣ್ರೀ, ನನ್ನ ಹುಟ್ಟುಹಬ್ಬ ಆಚರಿಸಬೇಡಿ, ಸಿಎಂ

ನನ್ ಡೇಟ್ ಆಫ್ ಬರ್ತ್ ಸರಿ ಇಲ್ಲ ಕಣ್ರೀ...!' ಇದು ಸಿಎಂ ಸಿದ್ದರಾಮಯ್ಯ ಅವರ ಮಾತು. ನಾನು ನೇರವಾಗಿ ಐದನೇ ಕ್ಲಾಸ್ಗೆ ಸೇರಿದವ್ನು...

ನನ್ ಬರ್ತ್ ಡೇಟ್ ಸರಿಯಿಲ್ಲ ಕಣ್ರೀ, ನನ್ನ ಹುಟ್ಟುಹಬ್ಬ ಆಚರಿಸಬೇಡಿ, ಸಿಎಂ
ಸಿಎಂ ಸಿದ್ದರಾಮಯ್ಯ
Published On :

ಮೈಸೂರು: `ನನ್ ಡೇಟ್ ಆಫ್  ಬರ್ತ್ ಸರಿ ಇಲ್ಲ ಕಣ್ರೀ...!' ಇದು ಸಿಎಂ ಸಿದ್ದರಾಮಯ್ಯ ಅವರ ಮಾತು. ನಾನು ನೇರವಾಗಿ ಐದನೇ ಕ್ಲಾಸ್ಗೆ ಸೇರಿದವ್ನು. ರಾಜಪ್ಪ ಮೇಷ್ಟ್ರು ಇದಕ್ಕೆ ಕಾರಣ ಡೇಟ್ ಆಫ್ ಬರ್ತ್ ಯಾವತ್ತೂ ಅಂತ ಗೊತ್ತಿಲ್ಲ. ಶಾಲಾ ದಾಖಲೆಯಲ್ಲಿ ಮಾತ್ರ ಆ.12 ಆಗಿತ್ತು.  ಹೀಗಾಗಿ ನಾನು ಯಾವತ್ತೂ ಹುಟ್ಟುಹಬ್ಬ ಆಚರಿಸಿಲ್ಲ, ಕೇಕ್ ಕತ್ತರಿಸಿಲ್ಲ. ಈ ಬಾರಿಯಂತೂ ರೈತರ ಆತ್ಮಹತ್ಯೆ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ  ಯಾವುದೇ ಆಚರಣೆ ಮಾಡಬೇಡಿ ಎಂದು ಅಭಿಮಾನಿಗಳಿಗೆ ಹೇಳಿದ್ದೇನೆ ಎಂದರು. ಆದರೂ ಹಾರ- ಶಾಲು ಸ್ವೀಕರಿಸಿ ಆಪ್ತ ಸಹಾಯಕರ ಕೈಗಿತ್ತರು.

ನಂತರ ರಂಗಾಯಣದ ಬೆಳ್ಳಿ ರಂಗಪಯಣಕ್ಕೆ ಚಾಲನೆ ನೀಡಿ ಮಾತನಾಡುವಾಗ, ಸಭಿಕರೊಬ್ಬರು, `ನೀವೂ ಸಹ ನಾಟಕ ಮಾಡಿದ್ದರಲ್ಲ' ಎಂದು ನೆನಪಿಸಿದರು. ಹೌದೌದು ಕಾಲೇಜು ದಿವಗಳಲ್ಲಿ ಜಬರ್ ದಸ್ತ್ ಮಾಡಿ ನಾಟಕದಲ್ಲಿ  ಅಭಿನಯಿಸಿದ್ದೆ. ಮತ್ತೆ ನಾಟಕದ ಸಹವಾಸಕ್ಕೆ ಹೋಗಿಲ್ಲ. ಆದರೆ ಈಗ ರಾಜಕೀಯದಲ್ಲಿ ಇದ್ದೇನೆ.ಆಗಾಗ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ಆಗುತ್ತಿರುತ್ತವೆ...!' ಎಂದಾಗ ಸಭೆಯಲ್ಲಿ ನಗೆಯ ಅಲೆ.

`ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ `ಯಮ ಧರ್ಮನ ಸನ್ನಿಧಿಯಲ್ಲಿ' ಎಂಬ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದೆ, ಕಾಲೇಜಿನ ಹಿರಿಯ ವಿದ್ಯಾರ್ಥಿ ಎಚ್. ವಿಶ್ವನಾಥ್ ಎಂಬವರು ಆ ನಾಟಕವನ್ನು ನಿರ್ದೇಶಿಸಿದ್ದರು. ನನಗೆ ನಟನೆ ಬರುತ್ತಿರಲಿಲ್ಲ. ಜಬರ್‍ದಸ್ತ್ ಮಾಡಿ ನಾಟಕಕ್ಕೆ ಸೇರಿಕೊಂಡಿದ್ದೆ. ಮತ್ತೆ ಎಲ್ಲೂ ನಾಟಕ ಮಾಡಿಲ್ಲ. ಈಗ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿರುತ್ತವೆ ಎಂದು ತಮಾಷೆ ಮಾಡಿದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.