ಸಿನಿಮಾ

ಅಮೀರ್ ಖಾನ್ ಪುತ್ರಿ ಇರಾಗೆ ಪ್ರೊಪೋಸ್ ಮಾಡಿದ ಬಾಯ್ ಫ್ರೆಂಡ್ ನೂಪುರ್ ಶಿಖಾರೆ

ಬಾಲಿವುಡ್ ಪರ್ಫೆಕ್ಷನಿಸ್ಟ್ ಎಂದು ಹೆಸರು ಗಳಿಸಿರುವ ಅಮೀರ್ ಖಾನ್ ಪುತ್ರಿ ಇರಾ ಖಾನ್ ತನ್ನ ಬಾಯ್ ಫ್ರೆಂಡ್ ನೂಪುರ್ ಶಿಖಾರೆ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾಳೆ.

Published On :
ಸೆಲೆಬ್ರಿಟಿಗಳು, ಅವರ ಮಕ್ಕಳು ವಿದೇಶಕ್ಕೆ ಹೋಗಿ ಯಾವುದೋ ರೊಮ್ಯಾಂಟಿಕ್ ಸ್ಥಳದಲ್ಲಿ, ಹೊಟೇಲ್ ನಲ್ಲಿ, ವಿಶೇಷ ದಿನಗಳಲ್ಲಿ ತನ್ನ ಪ್ರಿಯತಮ ಅಥವಾ ಪ್ರಿಯತಮೆಗೆ ಬೆರಳಿಗೆ ಉಂಗುರ ತೊಡಿಸಿ ಹೂ ಕೊಟ್ಟು ಪ್ರೊಪೋಸ್ ಮಾಡಿ ನಿಶ್ಚಿತಾರ್ಥ ಮಾಡಿಕೊಳ್ಳುವುದು ಸಾಮಾನ್ಯ.

25 ವರ್ಷದ ಇರಾ ಖಾನ್ ಗೆ ಆಕೆಯ ಬಾಯ್ ಫ್ರೆಂಡ್ ಒಂದು ಸೈಕ್ಲಿಂಗ್ ಈವೆಂಟ್ ನಲ್ಲಿ ಸೈಕ್ಲಿಂಗ್ ಉಡುಪಿನಲ್ಲಿಯೇ ಬಂದು ಥೇಟ್ ಫಿಲ್ಮಿ ಸ್ಟೈಲ್ ನಲ್ಲಿ ವಿಲ್ ಯು ಮ್ಯಾರಿ ಮಿ ಎಂದು ಪ್ರೊಪೋಸ್ ಮಾಡಿದ್ದಾನೆ. ಇರಾ ಯಸ್ ಎಂದಾಗ ಉಂಗುರ ತೊಡಿಸಿ ಪರಸ್ಪರ ಮುತ್ತಿಕ್ಕಿದ್ದಾರೆ. ನೆರೆದಿದ್ದವರು ಖುಷಿಯಿಂದ ಚಪ್ಪಾಳೆ ತಟ್ಟಿದರು.

ಇಬ್ಬರೂ ಈ ವಿಷಯವನ್ನು ಇನ್ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಜೋಡಿ ಎರಡು ವರ್ಷಗಳ ಹಿಂದೆ ತಮ್ಮ ಸಂಬಂಧವನ್ನು ಜಗಜ್ಜಾಹೀರು ಮಾಡಿದ್ದರು.

ಇವರ ಎಂಗೇಜ್ ಮೆಂಟ್ ಸುದ್ದಿಗೆ ಸ್ನೇಹಿತರು, ಬಾಲಿವುಡ್ ತಾರೆಯರು ಅಭಿನಂದನೆಯ ಸುರಿಮಳೆಯನ್ನೇ ಹರಿಸಿದ್ದಾರೆ.

ಕೆಲ ತಿಂಗಳ ಹಿಂದೆ ಇರಾ ಖಾನ್ ಸ್ವಿಮ್ಮಿಂಗ್ ಪೂಲ್ ಬಳಿ ತನ್ನ ಬಾಯ್ ಫ್ರೆಂಡ್, ತಂದೆ-ತಾಯಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡದ್ದು ಸುದ್ದಿಯಾಗಿತ್ತು.

ಅಮೀರ್ ಖಾನ್ ನ ಮಾಜಿ ಪತ್ನಿ ರೀನಾ ದತ್ತರ ಮಗಳು ಇರಾ ಖಾನ್ ಆಗಿದ್ದಾಳೆ. 2002ರಲ್ಲಿ ವಿಚ್ಛೇದನ ಪಡೆದ ಬಳಿಕ 2005ರಲ್ಲಿ ಅಮೀರ್ ಖಾನ್ ಕಿರಣ್ ರಾವ್ ರನ್ನು ವಿವಾಹವಾದರು. ಅವರಿಗೆ ಆಜಾದ್ ಎಂಬ ಮಗ ಹುಟ್ಚಿದ್ದನು. ರೀನಾ ದತ್ತ ಜೊತೆಗೆ ಇರಾ ಖಾನ್ ಮತ್ತು ಜುನೈದ ಎಂಬ ಮಕ್ಕಳು ಅಮೀರ್ ಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.