ಸಿನಿಮಾ

ಬಾಲಿವುಡ್ ನಲ್ಲಿ ಮದುವೆ ಸಂಭ್ರಮ: ಕತ್ರಿನಾ ಕೈಫ್- ವಿಕ್ಕಿ ಕೌಶಲ್ ವಿವಾಹಕ್ಕೆ ಸಿದ್ಧತೆ

ಖ್ಯಾತ ತಾರಾ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹ ಮುಂದಿನ ವಾರ ಡಿಸೆಂಬರ್ 7ರಿಂದ 9ರವರೆಗೆ ನೆರವೇರಲಿದೆ ಎಂದು ವರದಿಗಳು ಹೇಳುತ್ತವೆ.

ಬಾಲಿವುಡ್ ನಲ್ಲಿ ಮದುವೆ ಸಂಭ್ರಮ: ಕತ್ರಿನಾ ಕೈಫ್- ವಿಕ್ಕಿ ಕೌಶಲ್ ವಿವಾಹಕ್ಕೆ ಸಿದ್ಧತೆ
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹ ಮುಂದಿನ ವಾರ ಡಿಸೆಂಬರ್ 7ರಿಂದ 9ರವರೆಗೆ ನೆರವೇರಲಿದೆ ಎಂದು ವರದಿಗಳು ಹೇಳುತ್ತವೆ. ಮದುವೆಗೆ ಸಿದ್ಧತೆ ಭರದಿಂದ ಸಾಗುತ್ತಿದ್ದು, 200 ಮಂದಿ ಅತಿಥಿಗಳಿಗೆ ವಿಕ್ಯಾಟ್ ವಿವಾಹ ಸಮಾರಂಭಕ್ಕೆ ಆಹ್ವಾನವಿದೆ.
Published On :
ರಾಜಸ್ತಾನದ ಸವೈ ಮಧೋಪುರ್ ನಲ್ಲಿನ ಐಷಾರಾಮಿ ರೆಸಾರ್ಟ್ ನಲ್ಲಿ ಈಗಾಗಲೇ ಮದುವೆಗೆ ಸಿದ್ಧತೆ ನಡೆಯುತ್ತಿದ್ದು ನಿನ್ನೆ ಜಿಲ್ಲಾಧಿಕಾರಿ ರಾಜೇಂದ್ರ ಕಿಶನ್ ವಿವಾಹ ನಡೆಯುವ ರೆಸಾರ್ಟ್ ಸುತ್ತಮುತ್ತ ವ್ಯವಸ್ಥೆ, ಕಾನೂನು-ಸುವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದಾರೆ.

ವಿಕ್ಯಾಟ್ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಈ ಜೋಡಿಯ ವಿವಾಹ ಸಮಾರಂಭದ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಗತಿಗಳು ಹರಿದಾಡುತ್ತಿವೆ. ವಿಕ್ಯಾಟ್ ಹೆಸರಿನಲ್ಲಿ ಟ್ವಿಟ್ಟರ್ ಖಾತೆ ಕೂಡ ಸೃಷ್ಟಿಯಾಗಿದೆ.

ಸವೈ ಮಾದೋಪುರ್ ನ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದ್ದು 200 ಮಂದಿ ಅತಿಥಿಗಳಿಗೆ ಮಾತ್ರ ಆಹ್ವಾನವಿದೆ.

ರಾಜಸ್ತಾನ ಶೈಲಿಯ ಸಾಂಪ್ರದಾಯಿಕ ಕಲೆಯಲ್ಲಿ ಈ ರೆಸಾರ್ಟ್ ಇದ್ದು ನಾಳೆಯಿಂದ ಡಿಸೆಂಬರ್ 10ವರೆಗೆ ಇಡೀ ರೆಸಾರ್ಟ್ ನ್ನು ಎರಡೂ ಕುಟುಂಬ ಬುಕ್ಕಿಂಗ್ ಮಾಡಿಕೊಂಡಿದೆ. ಆಧುನಿಕತೆ ಮತ್ತು ಗ್ರಾಮೀಣ, ಭಾರತದ ಸಾಂಪ್ರದಾಯಿಕ ಕಲೆ-ಶಿಲ್ಪ ಕಲೆಯನ್ನು ಮೇಳೈಸಿಕೊಂಡು ಈ ರೆಸಾರ್ಟ್ ನೋಡುಗರ ಕಣ್ಮನ ಸೆಳೆಯುತ್ತದೆ.

ಮದುವೆ ಸಮಾರಂಭವನ್ನು ಬಹಳ ಗೌಪ್ಯವಾಗಿಡಲಾಗಿದೆ. ಮದುವೆಯಲ್ಲಿ ಭಾಗವಹಿಸುವ ಅತಿಥಿಗಳಿಗೆ ಕೋಡ್ ಗಳನ್ನು ನೀಡಲಾಗಿದ್ದು ಕೋಡ್ ಗಳನ್ನು ನೀಡಿದರೆ ಮಾತ್ರ ವಿವಾಹ ಸಮಾರಂಭದೊಳಗೆ ಎಂಟ್ರಿ.

ವಿವಾಹಕ್ಕೆ ಬರುವ ಅತಿಥಿಗಳ ಹೆಸರುಗಳನ್ನು ಸಹ ಗೌಪ್ಯವಾಗಿಡಲಾಗಿದೆ. ಮದಿವೆಗೆ ಬರುವವರು ಹಾಜರಿಯನ್ನು ಬಹಿರಂಗಪಡಿಸುವಂತಿಲ್ಲ, ಫೋಟೋಗ್ರಫಿ ಮಾಡುವಂತಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು, ಲೋಕೇಶನ್ ಶೇರ್ ಮಾಡುವಂತಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಲಾಗಿದೆ.

ರಾಜಸ್ತಾನದಲ್ಲಿ ವಿವಾಹಕ್ಕೆ ಮೊದಲು ಜೋಡಿ ಮುಂಬೈಯಲ್ಲಿ ರಿಜಿಸ್ಟರ್ ವಿವಾಹ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್ ಚಿತ್ರ ನಿರ್ಮಾಪಕ-ನಿರ್ದೇಶಕ ಕಬೀರ್ ಖಾನ್, ನಿರ್ಮಾಪಕ ಅಮ್ರಿತ್ ಪಾಲ್ ಸಿಂಗ್ ಬಿಂದ್ರ, ನಿರ್ದೇಶಕ ಆನಂದ್ ತಿವಾರಿ, ಕರಣ್ ಜೋಹರ್ ಮೊದಲಾದವರು ವಿವಾಹದಲ್ಲಿ ಭಾಗವಹಿಸಲಿದ್ದಾರೆ.

ಕಬೀರ್ ಖಾನ್ ಅವರ ನ್ಯೂ ಯಾರ್ಕ್, ಏಕ್ ತಾ ಟೈಗರ್, ಫ್ಯಾಂಟಮ್ ಚಿತ್ರಗಳಲ್ಲಿ ಕತ್ರಿನಾ ನಟಿಸಿದ್ದಾರೆ. 2018ರಲ್ಲಿ ವಿಕ್ಕಿ ಕೌಶಲ್ ಮತ್ತು ಅಂಗಿರ ಧರ್ ಅವರ ಲವ್ ಪರ್ ಸ್ಕ್ಯಾರ್ ಫೂಟ್ ಚಿತ್ರಗಳು ಬಂದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.