ಸಿನಿಮಾ

ಶಾರೂಖ್ ಖಾನ್ ಗೆ 55 ನೇ ಜನ್ಮದಿನ: ಬಾಲಿವುಡ್ ನಟನ ಬಗ್ಗೆ ನಿಮಗೆ ಗೊತ್ತಿಲ್ಲದ ಅಪರೂಪದ ಸಂಗತಿಗಳು

ಬಾಲಿವುಡ್ ಬಾದ್ ಶಾ ಎಂದೇ ಖ್ಯಾತಿ ಪಡೆದಿರುವ ಶಾರೂಖ್ ಖಾನ್ ಅವರು ನವಂಬರ್ 2ರಂದು 55 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಅಪರೂಪದ ನಟನ ಬಗ್ಗೆ ನಿಮಗೆ ತಿಳಿದಿರದ ಅಪರೂಪದ ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಶಾರೂಖ್ ಖಾನ್ ಗೆ 55 ನೇ ಜನ್ಮದಿನ: ಬಾಲಿವುಡ್ ನಟನ ಬಗ್ಗೆ ನಿಮಗೆ ಗೊತ್ತಿಲ್ಲದ ಅಪರೂಪದ ಸಂಗತಿಗಳು
ಶಾರೂಖ್ ಖಾನ್ ಬಾಲಿವುಡ್ ಬಾದ್ ಶಾ ಎಂದೇ ಖ್ಯಾತಿ ಪಡೆದಿದ್ದು, 80 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ 14 ಫಿಲ್ಮ್ ಫೇರ್ ಅವಾರ್ಡ್ ಗಳನ್ನು ಗಳಿಸಿದ್ದಾರೆ.
Published On :
ನ.2, 1965 ರಂದು ನವದೆಹಲಿಯಲ್ಲಿ ಜನಿಸಿದ ಶಾರೂಖ್ ಖಾನ್, ತಮ್ಮ ಜೀವನದ ಮೊದಲ 5 ವರ್ಷಗಳನ್ನು ತಾಯಿಯ ತವರು ಮನೆಯಲ್ಲಿ ಮಂಗಳೂರು ಬಂದರಿನ ಮುಖ್ಯ ಇಂಜಿನಿಯರ್ ಆಗಿದ್ದ ಅಜ್ಜ ಇಫ್ತಿಯಾರ್ ಅಹ್ಮದ್ ಮನೆಯಲ್ಲಿ ಕಳೆದಿದ್ದರು.

ಶಾರೂಖ್ ಖಾನ್ ಅವರ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ ಪೇಶಾವರ್ ನಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು.

ದೆಹಲಿಯ ಸೇಂಟ್ ಕೊಲುಂಬಾಸ್ ಸ್ಕೂಲ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಕ್ತಾಯಗೊಳಿಸಿದ ಎಸ್ಆರ್ ಕೆ, ಪಾಠಗಳ ಹೊರತಾಗಿ ಹಾಕಿ, ಫುಟ್ಬಾಲ್ ನಲ್ಲಿಯೂ ಚುರುಕಾಗಿದ್ದರು. ಭುಜಕ್ಕೆ ಆದ ಗಾಯ ಅವರು ಕ್ರೀಡಾಪಟುವಾಗುವುದರಿಂದ ಹಿಂದೆ ಉಳಿಯುವಂತೆ ಮಾಡಿತು.

1980 ರಲ್ಲಿ ಪರದೆ ಮೇಲೆ ಕಾಣಿಸಿಕೊಳ್ಳಲು ಆರಂಭಿಸಿದ ಖಾನ್, ದಿಲ್ ದರಿಯಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು.

1992 ರಲ್ಲಿ ಚಮತ್ಕಾರ್ ನಲ್ಲಿ ನಾಯಕನಾಗಿ ನಟಿಸಿದ್ದರು. ಉರ್ಮಿಳ ಮತೋಂಡ್ಕರ್ ನಾಯಕನಟಿಯಾಗಿ ನಟಿಸಿದ್ದರು.

1995 ರಲ್ಲಿ ಖಾನ್ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರು.

1995 ರಲ್ಲಿ ಕಾಜೋಲ್ ಜೊತೆ ನಟಿಸಿದ್ದ ದಿಲ್ವಾಲೇ ದುಲ್ಹಾನಿಯಾ ಲೇ ಜಾಯೇಂಗೆ ಸಿನಿಮಾ ವರ್ಷದ ಅತಿ ದೊಡ್ಡ ಯಶಸ್ವಿ ಹಾಗೂ ದಾಖಲೆ ನಿರ್ಮಾಣ ಮಾಡಿದ ಸಿನಿಮಾ ಆಗಿ ಹೊರಹೊಮ್ಮಿತ್ತು.

ನಕಾರಾತ್ಮಕ ಪಾತ್ರಗಳಲ್ಲಿಯೂ ಶಾರೂಖ್ ಕಾಣಿಸಿಕೊಂಡಿದ್ದಾರೆ.

ಬಾಝಿಗರ್ (1993) ಡರ್ (1993) ಅಂಜಾಮ್ (1994) ಸಂಜಯ್ ಲೀಲಾ ಬನ್ಸಾಲಿ ಅವರ ದೇವ್ ದಾಸ್ (2002) ಡಾನ್ (2006) ಡಾನ್-2 (2011) ಶಾರೂಖ್ ಖಾನ್ ವಿನೂತನ ಪಾತ್ರಗಳಲ್ಲಿ ನಟಿಸಿರುವ ಚಿತ್ರಗಳಾಗಿವೆ.

ಕಿರುತೆರೆಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವನ್ನು 2007 ರ ಆವೃತ್ತಿಯಲ್ಲಿ ನಡೆಸಿಕೊಟ್ಟಿರುವ ಕೀರ್ತಿಯೂ ಶಾರೂಖ್ ಖಾನ್ ಅವರಿಗೆ ಸಲ್ಲುತ್ತದೆ.

2008 ರಲ್ಲಿ ಕ್ಯಾ ಆಪ್ ಪಾಂಚ್ವಿ ಪಾಸ್ ಸೇ  ತೇಜ್ ಹೈ ಎಂಬ ಅವರದ್ದೇ ಸ್ವಂತ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು ಶಾರೂಖ್ ಖಾನ್

ಶಾರೂಖ್ ಖಾನ್ ನಟಿಸಿದ್ದ ರಾಜು ಬನ್ ಗಯಾ ಜಂಟಲ್ ಮೆನ್ (1992) ಯೆಸ್ ಬಾಸ್ (1997) ಡುಪ್ಲಿಕೇಟ್ (1998) ಬಾದ್ ಶಾ (1999) ಫಿರ್ ಭಿ ದಿಲ್ ಹೈ ಹಿಂದೂಸ್ಥಾನಿ (2000) ಯಂತಹ ಕಾಮಿಡಿ ಚಿತ್ರಗಳಿಗೆ ಮಿಶ್ರ ಪ್ರತಿಕ್ರಿಯೆ ದೊರೆತಿತ್ತು.

2004 ರಲ್ಲಿ ಸ್ವದೇಶ್ ಚಿತ್ರೀಕರಣ ನಡೆದಿದ್ದು ಫ್ಲೊರಿಡಾದಲ್ಲಿರುವ ನಾಸಾದ ಕೆನಡಿ ಸ್ಪೇಸ್ ಸೆಂಟರ್ ನಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರವಾಗಿದೆ.

ಶಾರೂಖ್ ಖಾನ್
ಶಾರೂಖ್ ಖಾನ್
ಶಾರೂಖ್ ಖಾನ್
ಶಾರೂಖ್ ಖಾನ್
ಶಾರೂಖ್ ಖಾನ್
ಶಾರೂಖ್ ಖಾನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.