‘ಪ್ರಾರ್ಥನೆಯ ದಿನ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ'; ಭಾನುವಾರ ಬ್ಯಾಂಕ್ ತೆರೆಯುವ ನಿರ್ಧಾರಕ್ಕೆ ಚರ್ಚ್ ಮಂಡಳಿ ವಿರೋಧ!
ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ನೌಕರರ ಸಂಘಟನೆಗಳು ದೇಶವ್ಯಾಪಿ ಮೂರು ದಿನಗಳ ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ಭಾನುವಾರವೂ ಬ್ಯಾಂಕ್‌ಗಳನ್ನು ತೆರೆಯಲು..

ಐಜ್ವಾಲ್: ಸೆಪ್ಟೆಂಬರ್ 27ರಂದು ಭಾನುವಾರ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು ತೆರೆದಿಡುವ ನಿರ್ಧಾರಕ್ಕೆ ಮಿಜೋರಂನ ಪ್ರಮುಖ ಚರ್ಚ್ ಸಂಘಟನೆ ಹಾಗೂ ಅತಿದೊಡ್ಡ ನಾಗರಿಕ ಸಂಘಟನೆ ವಿರೋಧ ವ್ಯಕ್ತಪಡಿಸಿವೆ.
ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ನೌಕರರ ಸಂಘಟನೆಗಳು ದೇಶವ್ಯಾಪಿ ಮೂರು ದಿನಗಳ ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ಭಾನುವಾರವೂ ಬ್ಯಾಂಕ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಆದರೆ ಬ್ಯಾಂಕ್`ಗಳ ಈ ನಿರ್ಧಾರಕ್ಕೆ ಚರ್ಚ್ ಗಳ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
9 ಪ್ರಮುಖ ಚರ್ಚ್‌ಗಳನ್ನು ಪ್ರತಿನಿಧಿಸುವ ಕೌನ್ಸಿಲ್ ಆಫ್ ಚರ್ಚಸ್ ಇನ್ ಮಿಜೋರಂ (CCM) ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಭಾನುವಾರದಂದು ಬ್ಯಾಂಕ್‌ಗಳನ್ನು ತೆರೆಯುವ ಕ್ರಮವು ರಾಜ್ಯದ ಕ್ರೈಸ್ತರ ಧಾರ್ಮಿಕ ಆಚರಣೆಗೆ ಅಡ್ಡಿಯಾಗಬಹುದು ಎಂದು ತಿಳಿಸಿದೆ.
CCMನಲ್ಲಿ ಪ್ರೆಸ್ಬಿಟೇರಿಯನ್ ಚರ್ಚ್ ಆಫ್ ಇಂಡಿಯಾ ಹಾಗೂ ಬ್ಯಾಪ್ಟಿಸ್ಟ್ ಚರ್ಚ್ ಆಫ್ ಮಿಜೋರಂ ಸೇರಿದಂತೆ ಪ್ರಮುಖ ಚರ್ಚ್‌ಗಳು ಸದಸ್ಯತ್ವ ಹೊಂದಿವೆ.
ಪ್ರಾರ್ಥನೆಯ ದಿನ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ
“ರಾಜ್ಯದ ಬಹುಸಂಖ್ಯಾತ ಜನರಿಗೆ ಭಾನುವಾರ ಮಹತ್ವದ ಧಾರ್ಮಿಕ ದಿನವಾಗಿದ್ದು, ಪೂಜೆ ಸಲ್ಲಿಸುವ ದಿನವಾಗಿದೆ. ಸಂವಿಧಾನ ಖಾತರಿಪಡಿಸಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಯಾವುದೇ ವ್ಯವಸ್ಥೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ” ಎಂದು CCM ಹೇಳಿದೆ.
ಮುಂದಿನ ದಿನಗಳಲ್ಲಿ ಪ್ರಮುಖ ಧಾರ್ಮಿಕ ದಿನಗಳ ಆಚರಣೆಗೆ ಅಡ್ಡಿಯಾಗಬಹುದಾದ ಯಾವುದೇ ನಿರ್ಧಾರಗಳನ್ನು ಕೈಗೊಳ್ಳದಂತೆ ಅಧಿಕಾರಿಗಳಿಗೆ ಚರ್ಚ್ ಸಂಘಟನೆ ಮನವಿ ಮಾಡಿದೆ.
ಅಲ್ಲದೆ ಮಿಜೋರಂನ ಅತಿದೊಡ್ಡ ನಾಗರಿಕ ಸಂಘಟನೆ ಯಂಗ್ ಮಿಜೋ ಅಸೋಸಿಯೇಷನ್ (YMA) ಕೂಡ ಬ್ಯಾಂಕ್‌ಗಳನ್ನು ಭಾನುವಾರ ತೆರೆಯುವ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಶುಕ್ರವಾರ ಹೊರಡಿಸಿದ ಹೇಳಿಕೆಯಲ್ಲಿ YMAಯ ಕೇಂದ್ರ ಸಮಿತಿ, ಕೇಂದ್ರ ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕಿಂಗ್ ಅಧಿಕಾರಿಗಳು ಹಾಗೂ ಮಿಜೋರಂ ಸರ್ಕಾರವು ರಾಜ್ಯಕ್ಕೆ ಈ ನಿರ್ಧಾರ ಅನ್ವಯಿಸುವ ವಿಚಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



