'ಹನುಮಾನ್ ಅಂಶ್' ಚಿತ್ರತಂಡ ಭೇಟಿ; ಚಿತ್ರದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ ಅಮಿತ್ ಶಾ!
'ಇಂದು ದೆಹಲಿಯಲ್ಲಿ ಬಾಬಾ ನೀಮ್ ಕರೋಲಿ ಜಿ ಅವರ ಜೀವನವನ್ನು ಆಧರಿಸಿದ 'ಹನುಮಾನ್ ಅಂಶ್' ಚಿತ್ರದ ಕಲಾವಿದರನ್ನು ಭೇಟಿಯಾದೆ' ಎಂದು ಶಾ ಅವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ನವದೆಹಲಿ: ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ 'ಹನುಮಾನ್ ಅಂಶ್' ಚಿತ್ರದ ಯಶಸ್ಸಿಗಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಚಿತ್ರತಂಡವನ್ನು ಭೇಟಿ ಮಾಡಿ ಅಭಿನಂದಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯ ಹಾಗೂ ಚಿತ್ರ ನಿರ್ದೇಶಕ ವಿಶಾಲ್ ಚತುರ್ವೇದಿ ಮತ್ತು ನಟ ಶೋಭಿನವ್ ಸತ್ಯಾ ಸೇರಿದಂತೆ ಚಿತ್ರತಂಡದ ಸದಸ್ಯರು ಇಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದರು.
'ಇಂದು ದೆಹಲಿಯಲ್ಲಿ ಬಾಬಾ ನೀಮ್ ಕರೋಲಿ ಜಿ ಅವರ ಜೀವನವನ್ನು ಆಧರಿಸಿದ 'ಹನುಮಾನ್ ಅಂಶ್' ಚಿತ್ರದ ಕಲಾವಿದರನ್ನು ಭೇಟಿಯಾದೆ' ಎಂದು ಶಾ ಅವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
'ಬಾಬಾ ನೀಮ್ ಕರೋಲಿ ಜಿ ಅವರ ಆಧ್ಯಾತ್ಮಿಕ ಪಯಣ ಮತ್ತು ಹನುಮಂತನ ಮೇಲಿನ ಅವರ ಅಪ್ರತಿಮ ಭಕ್ತಿಯನ್ನು ಚಿತ್ರದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಈ ಶ್ಲಾಘನೀಯ ಪ್ರಯತ್ನಕ್ಕಾಗಿ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು' ಎಂದು ಅವರು ಹೇಳಿದರು.
'ಹನುಮಾನ್ ಅಂಶ್' ಆಗಸ್ಟ್ 7 ರಂದು ಬಿಡುಗಡೆಯಾದಾಗ ಬಾಕ್ಸ್ ಆಫೀಸ್‌ನಲ್ಲಿ ಕೇವಲ 10 ಲಕ್ಷ ರೂ.ಗಳ ಆರಂಭಿಕ ಗಳಿಕೆಯನ್ನು ಕಂಡಿತ್ತು. ಆದರೆ, ನಂತರ ಚಿತ್ರ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿದೆ. ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಈ ಚಿತ್ರವು ಇದೀಗ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ₹347.05 ಕೋಟಿ ಗಳಿಕೆ ಕಂಡಿದೆ.
ನೀಮ್ ಕರೋಲಿ ಬಾಬಾ ಅವರ ಜೀವನಗಾಥೆಯನ್ನು ಆಧರಿಸಿದ ಈ ಚಿತ್ರವನ್ನು 2 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಇದು ಬಾಕ್ಸ್ ಆಫೀಸ್‌ನಲ್ಲಿ ಅನಿರೀಕ್ಷಿತ ಯಶಸ್ಸನ್ನು ಸಾಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


