ದೇಶ

ಮಾಯಾವತಿ 3ನೇ ಬಾರಿ ಯೂ-ಟರ್ನ್: ಸೋದರಳಿಯ ಆಕಾಶ್ ಆನಂದ್ ಗೆ ಮತ್ತೆ ಅವಕಾಶ; ಆದ್ರೆ ಮಾವನಿಗೆ ಷರತ್ತು ಅನ್ವಯ!

ಈ ಕುರಿತು ಬುಧವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮಾಯಾವತಿ ಅವರು, ಸಿದ್ಧಾರ್ಥ್ ಈ ಷರತ್ತನ್ನು ಒಪ್ಪಿದರೆ ಆಕಾಶ್ ಆನಂದ್ "ಪಕ್ಷದಲ್ಲಿ ಮುಕ್ತವಾಗಿ ಕೆಲಸ ಮಾಡಲು" ಸಾಧ್ಯವಾಗುತ್ತದೆ

ಮಾಯಾವತಿ 3ನೇ ಬಾರಿ ಯೂ-ಟರ್ನ್: ಸೋದರಳಿಯ ಆಕಾಶ್ ಆನಂದ್ ಗೆ ಮತ್ತೆ ಅವಕಾಶ; ಆದ್ರೆ ಮಾವನಿಗೆ ಷರತ್ತು ಅನ್ವಯ!
ಆಕಾಶ್ ಆನಂದ್-ಮಾಯಾವತಿ — TNIE
Published On :

ಲಖನೌ: ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ದ ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರ ವಿಚಾರದಲ್ಲಿ ಮೂರನೇ ಬಾರಿ ಯೂ-ಟರ್ನ್ ಹೊಡೆದಿದ್ದು, ಈಗ ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಆದರೆ ಈ ಬಾರಿ ಒಂದು ಷರತ್ತು ವಿಧಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ, ಪಕ್ಷದ ಮುಖ್ಯ ರಾಷ್ಟ್ರೀಯ ಸಂಯೋಜಕರಾಗಿದ್ದ ಸೋದರಳಿಯ ಆಕಾಶ್ ಆನಂದ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ್ದ ಮಾಯಾವತಿ ಅವರು ಈಗ ಮತ್ತೆ ಪಕ್ಷದ ಹುದ್ದೆಗೆ ಮರಳಲು ಅವಕಾಶ ನೀಡಿದ್ದಾರೆ.

ಆದರೆ ಈ ಬಾರಿ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಅಕಾಶ್ ಆನಂದ್ ಅವರ ಮಾವ ಅಶೋಕ್ ಸಿದ್ಧಾರ್ಥ್ ರಾಜಕೀಯದಿಂದ "ಸನ್ಯಾಸ" ತೆಗೆದುಕೊಳ್ಳಬೇಕಾಗಿದೆ. ಇದರರ್ಥ ನಿವೃತ್ತಿ ಹೊಂದುವುದಲ್ಲದೆ, ರಾಜಕೀಯವನ್ನೇ ಸಂಪೂರ್ಣವಾಗಿ ತ್ಯಜಿಸಬೇಕಾಗಿದೆ.

ಆಗಸ್ಟ್‌ನಲ್ಲಿ ಬಿಎಸ್‌ಪಿಯಿಂದ ಹೊರಹಾಕಲ್ಪಟ್ಟ ಅಶೋಕ್ ಸಿದ್ಧಾರ್ಥ್ ಅವರಿಂದ ಪ್ರಭಾವಿತರಾಗಬೇಡಿ ಎಂದು ಮಾಯಾವತಿ ಅವರು ಹಿಂದೆ ಆಕಾಶ್ ಆನಂದ್‌ಗೆ ಹೇಳಿದ್ದರು.

ಈ ಕುರಿತು ಬುಧವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮಾಯಾವತಿ ಅವರು, ಸಿದ್ಧಾರ್ಥ್ ಈ ಷರತ್ತನ್ನು ಒಪ್ಪಿದರೆ ಆಕಾಶ್ ಆನಂದ್ "ಪಕ್ಷದಲ್ಲಿ ಮುಕ್ತವಾಗಿ ಕೆಲಸ ಮಾಡಲು" ಸಾಧ್ಯವಾಗುತ್ತದೆ ಮತ್ತು ನಂತರ ಅವರಿಂದ ಕಸಿದುಕೊಳ್ಳಲಾದ ಜವಾಬ್ದಾರಿಗಳನ್ನು ಮತ್ತೆ ನೀಡುವುದಾಗಿ ಹೇಳಿದ್ದಾರೆ.

ಮಾಯಾವತಿ ಕಳೆದ ವಾರ "ಅವರು ಇನ್ನೂ ಹೆಚ್ಚು ಪ್ರಬುದ್ಧರಾಗಬೇಕಾಗಿದೆ" ಎಂದು ಹೇಳಿ, ಆಕಾಶ್ ಆನಂದ್ ಗೆ ನೀಡಿದ್ದ ನಾಯಕತ್ವದ ಜವಾಬ್ದಾರಿಯನ್ನು ಹಿಂಪಡೆದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.