ದೇಶ

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ

ತಮ್ಮ ಪಕ್ಷವು 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ದಿವ್ಯಾ ಮಿತ್ತಲ್ ಅವರು ತಿಳಿಸಿದ್ದಾರೆ.

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ
ದಿವ್ಯಾ ಮಿತ್ತಲ್
Published On :

ಲಖನೌ: ಇತ್ತೀಚೆಗೆ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಮಾಜಿ ಐಎಎಸ್(IAS) ಅಧಿಕಾರಿ ದಿವ್ಯಾ ಮಿತ್ತಲ್, ಹೊಸ ರಾಜಕೀಯ ಸ್ಥಾಪಿಸುವುದಾಗಿ ಘೋಷಿಸಿದ್ದರು. ಗುರುವಾರ ತಮ್ಮ ಹೊಸ ಪಕ್ಷದ ಹೆಸರು 'ಜನ್ ನೀತಿ ಭಾರತ್'(Jan Neeti Bharat) ಎಂದು ಘೋಷಿಸಿದ್ದಾರೆ.

ತಮ್ಮ ಪಕ್ಷವು 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ದಿವ್ಯಾ ಮಿತ್ತಲ್ ಅವರು ತಿಳಿಸಿದ್ದಾರೆ.

ಈ ಕುರಿತು 'ಎಕ್ಸ್'(X) ವಿಡಿಯೋ ಹಂಚಿಕೊಂಡಿರುವ ಮಿತ್ತಲ್, ತಮ್ಮ ಪಕ್ಷವು ನೀತಿ ನಿರೂಪಣೆಯಲ್ಲಿ ಜನರಿಗೆ ಪ್ರಮುಖ ಸ್ಥಾನ ನೀಡುವತ್ತ ಗಮನಹರಿಸಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಸರ್ಕಾರವು ಕೇವಲ ಚುನಾವಣಾ ದಿನದಂದು ಮಾತ್ರವಲ್ಲದೆ, ತನ್ನ ಐದು ವರ್ಷಗಳ ಅಧಿಕಾರಾವಧಿಯ ಉದ್ದಕ್ಕೂ ಜನರಿಗೆ ಉತ್ತರದಾಯಿತ್ವವನ್ನು ಹೊಂದಿರುವಂತೆ ಖಚಿತಪಡಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

"ರಾಜಕಾರಣಿಗಳು ನಿಮ್ಮ ಮೇಲೆ ಆಳ್ವಿಕೆ ನಡೆಸುತ್ತಾರೆ. ಆದರೆ 'ಜನ್ ನೀತಿ'ಯಲ್ಲಿ, ನೀವೇ ಆಳ್ವಿಕೆ ನಡೆಸುವವರಾಗುತ್ತೀರಿ," ಎಂದು ಹೇಳಿದ ಅವರು, ಪಕ್ಷದ ಹೆಸರನ್ನು ಘೋಷಿಸುವುದರ ಜೊತೆಗೆ, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನೂ ಪ್ರಕಟಿಸಿದ್ದಾರೆ.

ಐಐಟಿ (IIT) ದೆಹಲಿ ಮತ್ತು ಐಐಎಂ (IIM) ಬೆಂಗಳೂರಿನ ಹಳೆಯ ವಿದ್ಯಾರ್ಥಿನಿಯಾಗಿರುವ ಹಾಗೂ ಹಿಂದೆ 'ವಾಲ್ ಸ್ಟ್ರೀಟ್'ನಲ್ಲಿ ಟ್ರೇಡರ್ ಆಗಿ ಕೆಲಸ ಮಾಡಿದ್ದ ದಿವ್ಯಾ ಮಿತ್ತಲ್, 13 ವರ್ಷಗಳ ಸೇವೆಯ ನಂತರ ಆಗಸ್ಟ್ 30ರಂದು ಭಾರತೀಯ ಆಡಳಿತ ಸೇವೆ(IAS)ಗೆ ರಾಜೀನಾಮೆ ನೀಡಿದ್ದರು. ನಂತರ ಸೆಪ್ಟೆಂಬರ್ 29ರಂದು ರಾಜಕೀಯ ಪಕ್ಷವನ್ನು ಘೋಷಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.