ದೇಶ

ಪರಿಸ್ಥಿತಿ ಬದಲಾಗದಿದ್ದರೆ ದಶಕಗಳ ಪರಿಶ್ರಮ ವ್ಯರ್ಥ, ಮತ್ತೆ ಭಾರಿ ಬಡತನ ಮರಳಬಹುದು: ಪ್ರಧಾನಿ ಮೋದಿ ಎಚ್ಚರಿಕೆ

ರಾಷ್ಟ್ರಗಳು ಇಂಧನ ಸಂಪನ್ಮೂಲಗಳನ್ನು ರಾಜಕೀಯ ಆಯುಧಗಳಾಗಿ ಬಳಸುವುದನ್ನು ತಪ್ಪಿಸಿ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಇಂಧನ ಸಹಭಾಗಿತ್ವಗಳನ್ನು ನಿರ್ಮಿಸುವತ್ತ ಗಮನಹರಿಸಬೇಕು..

ಪರಿಸ್ಥಿತಿ ಬದಲಾಗದಿದ್ದರೆ ದಶಕಗಳ ಪರಿಶ್ರಮ ವ್ಯರ್ಥ, ಮತ್ತೆ ಭಾರಿ ಬಡತನ ಮರಳಬಹುದು: ಪ್ರಧಾನಿ ಮೋದಿ ಎಚ್ಚರಿಕೆ
ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ಮಧ್ಯ ಪ್ರಾಚ್ಯ ಸಂಘರ್ಷ ಜಗತ್ತಿನಾದ್ಯಂತ ವ್ಯಾಪಕ ಆತಂಕಕ್ಕೆ ಕಾರಣವಾಗಿದ್ದು, ಜಾಗತಿಕ ಇಂಧನ ಸಂಕಷ್ಟ ತೀವ್ರಗೊಳ್ಳುತ್ತಿರುವಂತೆಯೇ ಪರಿಸ್ಥಿತಿ ಬದಲಾಗದಿದ್ದರೆ ಭಾರತಕ್ಕೆ ಮತ್ತೆ ಭಾರಿ ಬಡತನ ಮರಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಜಾಗತಿಕ ನಾಯಕರು, ಕೈಗಾರಿಕಾ ತಜ್ಞರು ಭಾಗವಹಿಸಿದ್ದ ಅಂತರರಾಷ್ಟ್ರೀಯ ಇಂಧನ ಮತ್ತು ಆರ್ಥಿಕ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಇಂಧನ ಸಂಕಷ್ಟ ತೀವ್ರಗೊಳ್ಳುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು.

'ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಇಂಧನ ಸರಬರಾಜು ಸರಪಳಿಯ ವ್ಯತ್ಯಯಗಳು ವಿಶ್ವದ ಆರ್ಥಿಕತೆಗಳ ಮೇಲೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ, ದೊಡ್ಡ ಪರಿಣಾಮ ಬೀರುತ್ತವೆ ಎಂದು ಅವರು ಎಚ್ಚರಿಸಿದರು.

ಅಂತೆಯೇ ಎಲ್ಲರಿಗೂ ಸ್ಥಿರ, ಕೈಗೆಟುಕುವ ಮತ್ತು ಶಾಶ್ವತ ಇಂಧನ ಲಭ್ಯತೆ ಖಚಿತಪಡಿಸಲು ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಒತ್ತಿಹೇಳಿದರು.

ದಶಕಗಳ ಪರಿಶ್ರಮ ವ್ಯರ್ಥ, ಬಡತನ ಮರಳಿಬಹುದು

'ಸಂಘರ್ಷಗಳು, ಕಚ್ಚಾ ತೈಲದ ಬೆಲೆ ಏರಿಕೆ, ಸರಬರಾಜಿನ ವ್ಯತ್ಯಯಗಳು ಮತ್ತು ಹೆಚ್ಚುತ್ತಿರುವ ಇಂಧನ ಬೇಡಿಕೆಗಳಿಂದ ವಿಶ್ವವು ಅಪೂರ್ವ ಅನಿಶ್ಚಿತತೆಯ ಅವಧಿಯನ್ನು ಎದುರಿಸುತ್ತಿದೆ.

ಈ ಪರಿಸ್ಥಿತಿ ದರ ಏರಿಕೆಯ ಒತ್ತಡವನ್ನು ಉಂಟುಮಾಡಿ, ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸಿ, ಆಮದು ಇಂಧನದ ಮೇಲೆ ಅವಲಂಬಿತವಾಗಿರುವ ಬಡ ರಾಷ್ಟ್ರಗಳಿಗೆ ಗಂಭೀರ ಸಂಕಷ್ಟವನ್ನು ತರಬಹುದು ಎಂದು ಎಚ್ಚರಿಸಿದರು.

ಅಲ್ಲದೆ "ವಿಷಯಗಳು ಬದಲಾಗದಿದ್ದರೆ, ಕಳೆದ ಕೆಲವು ದಶಕಗಳಲ್ಲಿ ಸಾಧಿಸಿದ ಪ್ರಗತಿಯನ್ನು ಇದು ಅಳಿಸಿಹಾಕಬಹುದು ಮತ್ತು ಭಾರಿ ಬಡತನ ಮರಳಬಹುದು" ಎಂದು ಎಚ್ಚರಿಕೆ ನೀಡಿದರು.

ಮಾನವೀಯ ಕಳಕಳಿಯ ವಿಷಯ

“ಜಾಗತಿಕ ಇಂಧನ ಮಾರುಕಟ್ಟೆ ಭಾರೀ ಒತ್ತಡದಲ್ಲಿದೆ. ಇಂಧನ ಭದ್ರತೆ ಇಂದು ಕೇವಲ ಆರ್ಥಿಕ ವಿಷಯವಲ್ಲ, ಅದು ತಂತ್ರಾತ್ಮಕ ಮತ್ತು ಮಾನವೀಯ ಕಳಕಳಿಯ ವಿಷಯವೂ ಆಗಿದೆ. ಜಾಗತಿಕ ಇಂಧನ ಬೆಲೆಗಳ ಏರಿಳಿತದಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಅತ್ಯಂತ ಹೆಚ್ಚು ಹಾನಿಗೊಳಗಾಗುತ್ತಿವೆ.

ತೈಲ ಮತ್ತು ಅನಿಲದ ಬೆಲೆಗಳಲ್ಲಿ ಏಕಾಏಕಿ ಉಂಟಾಗುವ ಏರಿಕೆಗಳು ಸಾರಿಗೆ, ಆಹಾರ ಸರಬರಾಜು ಸರಪಳಿ, ಉತ್ಪಾದನಾ ವೆಚ್ಚ ಮತ್ತು ಗೃಹ ಖರ್ಚುಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವುದು ಮತ್ತು ಪ್ರಮುಖ ಇಂಧನ ಸರಬರಾಜಿಗಾಗಿ ಕೆಲವು ಪ್ರದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವ ಅಗತ್ಯವನ್ನೂ ಪ್ರಧಾನಿ ಮೋದಿ ಒತ್ತಿಹೇಳಿದರು.

ಪುನರ್ನವೀಕರಿಸಬಹುದಾದ ಇಂಧನ ಅಭಿವೃದ್ಧಿ, ಸ್ವಚ್ಛ ತಂತ್ರಜ್ಞಾನ ಹಂಚಿಕೆ ಮತ್ತು ಶಾಶ್ವತ ಮೂಲಸೌಕರ್ಯ ಹೂಡಿಕೆಯಲ್ಲಿ ಹೆಚ್ಚಿನ ಅಂತರರಾಷ್ಟ್ರೀಯ ಸಹಕಾರ ನೀಡಬೇಕು ಎಂದ ಅವರು, ಸೌರಶಕ್ತಿ, ಗ್ರೀನ್ ಹೈಡ್ರೋಜನ್ ಮತ್ತು ಜೈವ ಇಂಧನಗಳಂತಹ ಹಸಿರು ಯೋಜನೆಗಳನ್ನು ಉತ್ತೇಜಿಸುವ ಮೂಲಕ ಭಾರತ ನಿರಂತರವಾಗಿ ತನ್ನ ಪುನರ್ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ ಎಂದು ಮೋದಿ ಹೇಳಿದರು.

ಅಲ್ಲದೆ ದೇಶದ ಹೆಚ್ಚುತ್ತಿರುವ ಜನಸಂಖ್ಯೆಯ ಇಂಧನ ಅಗತ್ಯಗಳನ್ನು ಸಮತೋಲನಗೊಳಿಸುತ್ತಾ, ದೀರ್ಘಕಾಲೀನ ಹವಾಮಾನ ಗುರಿಗಳನ್ನು ಸಾಧಿಸುವ ಬದ್ಧತೆಯನ್ನು ಭಾರತ ಹೊಂದಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.

ಇಂಧನ ಸಂಪನ್ಮೂಲಗಳನ್ನು ರಾಜಕೀಯ ಆಯುಧಗಳಾಗಿ ಬಳಸುವುದನ್ನು ತಪ್ಪಿಸಿ

ಭಾಷಣದ ವೇಳೆ ಜಾಗತಿಕ ಸರಬರಾಜು ಸರಪಳಿಗಳ ಸ್ಥೈರ್ಯದ ಮಹತ್ವವನ್ನೂ ಪ್ರಧಾನಿ ಮೋದಿ ಉಲ್ಲೇಖಿಸಿಸಿದ್ದು, ರಾಷ್ಟ್ರಗಳು ಇಂಧನ ಸಂಪನ್ಮೂಲಗಳನ್ನು ರಾಜಕೀಯ ಆಯುಧಗಳಾಗಿ ಬಳಸುವುದನ್ನು ತಪ್ಪಿಸಿ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಇಂಧನ ಸಹಭಾಗಿತ್ವಗಳನ್ನು ನಿರ್ಮಿಸುವತ್ತ ಗಮನಹರಿಸಬೇಕು ಎಂದು ಅವರು ಹೇಳಿದರು.

ಮಾರುಕಟ್ಟೆಗಳನ್ನು ಸ್ಥಿರಗೊಳಿಸಿ, ಅಗತ್ಯ ಇಂಧನ ಸಂಪನ್ಮೂಲಗಳ ನಿರಂತರ ಸರಬರಾಜು ಖಚಿತಪಡಿಸಲು ಜಾಗತಿಕ ಸಂಸ್ಥೆಗಳು, ಇಂಧನ ಉತ್ಪಾದಕ ರಾಷ್ಟ್ರಗಳು ಮತ್ತು ಪ್ರಮುಖ ಆರ್ಥಿಕತೆಗಳು ಸಮನ್ವಯಿತ ಕ್ರಮಗಳನ್ನು ಕೈಗೊಳ್ಳಬೇಕು. ಇಂಧನ ಭದ್ರತೆ, ಶಾಶ್ವತತೆ ಮತ್ತು ಕೈಗೆಟುಕುವ ದರವನ್ನು ರಾಷ್ಟ್ರಗಳು ಎಷ್ಟು ಪರಿಣಾಮಕಾರಿಯಾಗಿ ಸಮನ್ವಯಗೊಳಿಸುತ್ತವೆ ಎಂಬುದರ ಮೇಲೆ ಜಾಗತಿಕ ಆರ್ಥಿಕ ಸ್ಥಿರತೆಯ ಭವಿಷ್ಯ ಅವಲಂಬಿತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಜಾಗತಿಕ ಚಿಂತೆ

ಶೃಂಗಸಭೆಯಲ್ಲಿ ಭಾಗವಹಿಸಿದ್ದ ಅನೇಕ ಜಾಗತಿಕ ನಾಯಕರು ಹೆಚ್ಚುತ್ತಿರುವ ಇಂಧನ ಅಸುರಕ್ಷತೆ ಮತ್ತು ಅಂತರರಾಷ್ಟ್ರೀಯ ಸಂಘರ್ಷಗಳ ಇಂಧನ ಮಾರುಕಟ್ಟೆಯ ಮೇಲಿನ ಪರಿಣಾಮಗಳ ಬಗ್ಗೆ ಚಿಂತೆ ವ್ಯಕ್ತಪಡಿಸಿದರು. ಪ್ರಮುಖ ತೈಲ ಉತ್ಪಾದಕ ಪ್ರದೇಶಗಳಲ್ಲಿ ದೀರ್ಘಕಾಲದ ಅಸ್ಥಿರತೆ ಜಾಗತಿಕ ಮಟ್ಟದಲ್ಲಿ ಇಂಧನ ವೆಚ್ಚವನ್ನು ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸಿದರು.

ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಕಚ್ಚಾ ತೈಲ ಸರಬರಾಜಿನ ವ್ಯತ್ಯಯಗಳ ಆತಂಕಗಳ ನಡುವೆಯೇ ಅಂತರರಾಷ್ಟ್ರೀಯ ಮಾರುಕಟ್ಟೆಗಳು ಇನ್ನೂ ಅಸ್ಥಿರತೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಪ್ರಧಾನಮಂತ್ರಿಯವರ ಈ ಹೇಳಿಕೆಗಳು ಹೊರಬಿದ್ದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.