ED ದಾಳಿಗೆ ಹೆದರಿ 9ನೇ ಮಹಡಿಯಿಂದ 21 ಲಕ್ಷವಿದ್ದ ಹಣದ ಬ್ಯಾಗ್ ಎಸೆದ ಸಿಎಂ ಮಾನ್'ರ OSD ಪಿಎ, Video!
ಸಂಟೆಕ್ ಯೋಜನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮೊಹಾಲಿ ಮತ್ತು ಚಂಡೀಗಢದ 12 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಬಿಲ್ಡರ್‌ಗಳೊಂದಿಗಿನ ಶಾಮೀಲಿನಿಂದ ಅಕ್ರಮವಾಗಿ ಗಳಿಸಿದ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗುತ್ತಿದೆ.

ಸಂಟೆಕ್ ಯೋಜನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮೊಹಾಲಿ ಮತ್ತು ಚಂಡೀಗಢದ 12 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಬಿಲ್ಡರ್‌ಗಳೊಂದಿಗಿನ ಶಾಮೀಲಿನಿಂದ ಅಕ್ರಮವಾಗಿ ಗಳಿಸಿದ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗುತ್ತಿದೆ ಎಂದು ಆರೋಪ ಸಂಬಂಧ ಇಡಿ ದಾಳಿ ನಡೆಸಿತ್ತು. ಬಂಧನದ ಭಯದಿಂದ ಉದ್ಯಮಿಯೊಬ್ಬ ಒಂಬತ್ತನೇ ಮಹಡಿಯಿಂದ ನಗದು ತುಂಬಿದ ಎರಡು ಬ್ಯಾಗ್ ಗಳನ್ನು ಎಸೆದಿದ್ದರು.
ನೋಟುಗಳಿಂದ ತುಂಬಿದ ಒಂದು ಬ್ಯಾಗ್ ಕೇಳಕ್ಕೆ ಬಿದ್ದ ರಭಸದಲ್ಲಿ ನೋಟಿನ ಕಂತೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಆರೋಪಿಯ ಚಾಲಕ ಒಂದು ಬ್ಯಾಗ್ ನೊಂದಿಗೆ ಪರಾರಿಯಾಗಿದ್ದಾನೆ. ಸಂಟೆಕ್ ಸಿಟಿ ಯೋಜನೆಯ ಪ್ರವರ್ತಕ ಅಜಯ್ ಸೆಹಗಲ್, ಎಬಿಎಸ್ ಟೌನ್‌ಶಿಪ್, ಆಲ್ಟಸ್ ಬಿಲ್ಡರ್ಸ್ ಮತ್ತು ಧೀರ್ ಕನ್ಸ್ಟ್ರಕ್ಷನ್ಸ್ ಮೇಲೆ ದಾಳಿ ನಡೆಸಲಾಯಿತು. ಅಕ್ರಮವಾಗಿ ಅಭಿವೃದ್ಧಿ ಅಧಿಕಾರಿಗಳಿಂದ ಪರವಾನಗಿಗಳನ್ನು ಪಡೆದ ಆರೋಪ ಹೊತ್ತಿದ್ದಾರೆ.
ಆರೋಪಿಗಳಲ್ಲಿ ಒಬ್ಬರಾದ ನಿತಿನ್ ಗೋಹಲ್, ಮುಖ್ಯಮಂತ್ರಿ ಭಗವಂತ್ ಮಾನ್ ಅವರ OSD (ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ) ರಾಜ್‌ಬೀರ್ ಘುಮಾನ್ ಅವರ ಆಪ್ತ ಸಹಾಯಕ ಎಂದು ಹೇಳಲಾಗಿದೆ. ಅಧಿಕಾರಿಗಳು ಅವರ ಮನೆಯನ್ನು ಸಮೀಪಿಸುತ್ತಿದ್ದಂತೆ, ಎರಡು ಚೀಲಗಳು 9ನೇ ಮಹಡಿಯಿಂದ ಎಸೆಯಲ್ಪಟ್ಟವು. ಒಂದು ಚೀಲ ಬೀಳುತ್ತಿದ್ದಂತೆ ಕಿತ್ತು ಹೋಗಿತ್ತು. ಅದರ ವೀಡಿಯೊ ಕಾಣಿಸಿಕೊಂಡಿದೆ. ಹತ್ತಿರದಲ್ಲಿ 500 ರೂಪಾಯಿ ನೋಟುಗಳ ಬಂಡಲ್‌ಗಳು ನೆಲದ ಮೇಲೆ ಹರಡಿತ್ತು.
ಗ್ರೇಟರ್ ಮೊಹಾಲಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ (GMADA) ಶುಲ್ಕ ಪಾವತಿಸದ ಬಿಲ್ಡರ್‌ಗಳಿಗೆ ನಿತಿನ್ ಗೋಹಲ್ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ರಾಜಕೀಯ ಪ್ರೋತ್ಸಾಹವನ್ನು ಸಹ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನಿತಿನ್ ಪಂಜಾಬ್ ಮುಖ್ಯಮಂತ್ರಿಯ "ಸಂಪರ್ಕ ಬಿಂದು" ವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ. ED ನಿತಿನ್‌ಗಾಗಿ ಹುಡುಕಾಟ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



