ದೇಶ

ಪಲಾಶ್ ಮುಚ್ಚಲ್ ವಿರುದ್ಧ ವಂಚನೆ, ಜಾತಿ ನಿಂದನೆ ಪ್ರಕರಣ ದಾಖಲಿಸಿದ ಸ್ಮೃತಿ ಮಂಧಾನ ಬಾಲ್ಯದ ಸ್ನೇಹಿತ!

ಸಾಂಗ್ಲಿಯವರೇ ಆದ ನಟ ಮತ್ತು ನಿರ್ಮಾಪಕರೂ ಆದ ವಿದ್ಯಾನ್ ಮಾನೆ, ಪಲಾಶ್ ಮುಚ್ಚಲ್ ತಮ್ಮ ನಜರಿಯಾ (Nazariya) ಚಿತ್ರಕ್ಕೆ ಲಕ್ಷಾಂತರ ಹಣವನ್ನು ಹೂಡಿಕೆ ಮಾಡುವಂತೆ ಆಮಿಷವೊಡ್ಡಿದರು ಎಂದು ದೂರಿದ್ದಾರೆ.

ಪಲಾಶ್ ಮುಚ್ಚಲ್ ವಿರುದ್ಧ ವಂಚನೆ, ಜಾತಿ ನಿಂದನೆ ಪ್ರಕರಣ ದಾಖಲಿಸಿದ ಸ್ಮೃತಿ ಮಂಧಾನ ಬಾಲ್ಯದ ಸ್ನೇಹಿತ!
ಪಲಾಶ್ ಮುಚ್ಚಲ್
Published On :

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸಂಗೀತ ಸಂಯೋಜಕ ಮತ್ತು ಚಲನಚಿತ್ರ ನಿರ್ದೇಶಕ ಪಲಾಶ್ ಮುಚ್ಚಲ್ ವಿರುದ್ಧ ಸೋಶಿಯಲ್ ವರ್ಕರ್ ವಿದ್ಯಾನ್ ಮಾನೆ ವಂಚನೆ ಮತ್ತು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಪಲಾಶ್ ಮುಚ್ಚಲ್ ಅವರ ಮಾಜಿ ಪ್ರೇಯಸಿ, ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ಬಾಲ್ಯದ ಸ್ನೇಹಿತರೂ ಆಗಿರುವ ವಿದ್ಯಾನ್ ಮಾನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ಸಾಂಗ್ಲಿಯವರೇ ಆದ ನಟ ಮತ್ತು ನಿರ್ಮಾಪಕರೂ ಆದ ವಿದ್ಯಾನ್ ಮಾನೆ, ಪಲಾಶ್ ಮುಚ್ಚಲ್ ತಮ್ಮ ನಜರಿಯಾ (Nazariya) ಚಿತ್ರಕ್ಕೆ ಲಕ್ಷಾಂತರ ಹಣವನ್ನು ಹೂಡಿಕೆ ಮಾಡುವಂತೆ ಆಮಿಷವೊಡ್ಡಿದರು. ಆದರೆ, ಆ ಹಣವನ್ನು ಹಿಂದಿರುಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ, ಸಾಂಗ್ಲಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾನ್ ಮಾನೆ, ಪಲಾಶ್ ಮುಚ್ಚಲ್ ತಮ್ಮಿಂದ ₹25 ಲಕ್ಷ ಸಾಲ ಪಡೆದಿದ್ದರು ಎಂದು ಹೇಳಿಕೊಂಡಿದ್ದಾರೆ.

'ನಾನು ಕಾನೂನನ್ನು ಪಾಲಿಸುವ ನಾಗರಿಕ, ಭಾರತದ ಸಂವಿಧಾನ ಮತ್ತು ಕಾನೂನಿನಲ್ಲಿ ದೃಢವಾಗಿ ನಂಬಿಕೆ ಇಡುತ್ತೇನೆ. 2024ರಲ್ಲಿ, ಪಲಾಶ್ ಮುಚ್ಚಲ್ ಚಲನಚಿತ್ರ ಯೋಜನೆಯಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ನನ್ನಿಂದ ₹25 ಲಕ್ಷ ಪಡೆದು, ಉತ್ತಮ ಆದಾಯದ ಭರವಸೆ ನೀಡಿದ್ದರು. ಆದಾಗ್ಯೂ, ಚಿತ್ರ ಪೂರ್ಣಗೊಂಡ ನಂತರ, ಪದೇ ಪದೆ ಫಾಲೋಅಪ್‌ಗಳ ಹೊರತಾಗಿಯೂ, ಅವರು ಮರುಪಾವತಿಯನ್ನು ವಿಳಂಬ ಮಾಡುತ್ತಲೇ ಇದ್ದಾರೆ' ಎಂದಿದ್ದಾರೆ.

'ನವೆಂಬರ್ 22, 2025 ರಂದು, ಅವರು ಸಾಂಗ್ಲಿಯಲ್ಲಿದ್ದಾಗ, ನಾನು ಮತ್ತು ನನ್ನ ಸ್ನೇಹಿತರು ಅವರನ್ನು ವೈಯಕ್ತಿಕವಾಗಿ ಭೇಟಿಯಾದೆವು. ಈ ಭೇಟಿಯ ಸಮಯದಲ್ಲಿ, ನಾವು ಮೋಸ ಹೋಗಿದ್ದೇವೆ ಎಂದು ನಮಗೆ ಅರಿವಾಯಿತು. ಅದೇ ಸಮಯದಲ್ಲಿ, ಅವರು ಒಂದು ನಿರ್ದಿಷ್ಟ ಸಮುದಾಯದ ಬಗ್ಗೆ ಆಕ್ರಮಣಕಾರಿ ಮತ್ತು ಜಾತಿವಾದಿ ಹೇಳಿಕೆಗಳನ್ನು ನೀಡಿದ್ದಾರೆ. ಅದನ್ನು ನಾನು ನನ್ನ ಎಫ್‌ಐಆರ್‌ನಲ್ಲಿ ವಿವರಿಸಿದ್ದೇನೆ. ಏಕೆಂದರೆ, ಅವುಗಳನ್ನು ಸಾರ್ವಜನಿಕವಾಗಿ ಪುನರಾವರ್ತಿಸುವುದು ಸೂಕ್ತವಲ್ಲ' ಎಂದು ದೂರುದಾರರು ಹೇಳಿದರು.

ವಿದ್ಯಾನ್ ಮಾನೆ ಅವರ ಪ್ರಕಾರ, ಪಲಾಶ್ ಮುಚ್ಚಲ್ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದರು. ಆದರೆ, ಹಿಂತಿರುಗಿಸಲು ವಿಫಲರಾದರು. ಬದಲಾಗಿ, ಅವರು ಮುಂಬೈನಲ್ಲಿನ ಸಂಪರ್ಕಗಳ ಮೂಲಕ ನನಗೆ ದೈಹಿಕ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ನನಗೆ ಗಮನಾರ್ಹ ಮಾನಸಿಕ ಕಿರುಕುಳ ನೀಡಿದೆ. ಈ ಎಲ್ಲ ಘಟನೆಗಳ ಬಗ್ಗೆ ನಾನು ಪೊಲೀಸರಿಗೆ ವರದಿ ಮಾಡಿದ್ದೇನೆ... ಜಾತಿವಾದಿ ಹೇಳಿಕೆಗಳು ನನ್ನ ಮೇಲೆ ತೀವ್ರ ಪರಿಣಾಮ ಬೀರಿತು ಮತ್ತು ನನ್ನ ಸ್ನೇಹಿತರ ಬೆಂಬಲದೊಂದಿಗೆ, ನಾನು ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ' ಎಂದು ಹೇಳಿದರು.

ಜಾತಿ ಆಧಾರಿತ ನಿಂದನಾತ್ಮಕ/ಅವಹೇಳನಕಾರಿ ಹೇಳಿಕೆಗಳನ್ನು ಬಳಸಿದ ಆರೋಪದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆ 2012ರ ಸೆಕ್ಷನ್ 3(1)(ಆರ್)(ಎಸ್) ಮತ್ತು ಬಿಎನ್‌ಎಸ್‌ನ ಸೆಕ್ಷನ್ 351, 302 ಮತ್ತು 352 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಬಂಧಿಸಲು ಸಾಂಗ್ಲಿ ನಗರ ಪೊಲೀಸ್ ಠಾಣೆಯ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ.

ಪಲಾಶ್ ಮುಚ್ಚಲ್ 2024ರಲ್ಲಿ ನಜಾರಿಯಾ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದರು. ಇದರಲ್ಲಿ ಭವ್ಯಾ ಶಾ, ಅಪೂರ್ವ ಅರೋರಾ ಮತ್ತು ಧೀರಜ್ ಸನಾಪ್ ನಟಿಸಿದ್ದಾರೆ.

ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ ಅವರ ವಿವಾಹವು ನವೆಂಬರ್ 23, 2025 ರಂದು ಸಾಂಗ್ಲಿಯಲ್ಲಿ ನಡೆಯಬೇಕಿತ್ತು. ಆದರೆ, ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರನ್ನು ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾದ ಕೆಲವು ಗಂಟೆಗಳ ನಂತರ, ಪಲಾಶ್ ಮುಚ್ಚಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿಗಳು ಬಂದವು. ಡಿಸೆಂಬರ್ 7 ರಂದು, ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ ತಮ್ಮ ವಿವಾಹ ರದ್ದಾಗಿದೆ ಎಂದು ಘೋಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.