Kerala Election: ಕೇರಳ ಮಾಜಿ ಸಿಎಂ ಪುತ್ರನಿಗೆ 52,907 ಮತಗಳ ಭಾರಿ ಅಂತರದ ಗೆಲುವು!
ಚಾಂಡಿ ಅವರ ಚುನಾವಣಾ ಪ್ರಚಾರವು ವ್ಯಾಪಕ ಗಮನ ಸೆಳೆದಿತ್ತು. ಏಕೆಂದರೆ ಅವರು ಪರಿಸರ ಸ್ನೇಹಿ ವಿಧಾನವನ್ನು ಅನುಸರಿಸಿದರು. ಅವರು ಪ್ಲಾಸ್ಟಿಕ್ ಬ್ಯಾನರ್ಗಳು ಮತ್ತು ಫ್ಲೆಕ್ಸ್ ಬೋರ್ಡ್ಗಳನ್ನು ಬಳಸುವುದನ್ನು ತಪ್ಪಿಸಿದರು.

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪುತ್ರ, ಕಾಂಗ್ರೆಸ್ ಶಾಸಕ ಚಾಂಡಿ ಉಮ್ಮನ್ ಸೋಮವಾರ ತಮ್ಮ ತವರು ಕ್ಷೇತ್ರ ಪುತುಪ್ಪಳ್ಳಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇಂದು ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಚಾಂಡಿ ಅವರು ತಮ್ಮ ಸಮೀಪ ಸ್ಪರ್ಧಿಗಿಂತ 52,907 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕೇರಳದಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 9 ರಂದು ನಡೆದಿತ್ತು.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಚಾಂಡಿ ಅವರು 84,031 ಮತಗಳನ್ನು ಪಡೆದರು. ಸಿಪಿಐ (ಎಂ)ನ ಕೆಎಂ ರಾಧಾಕೃಷ್ಣನ್ ಅವರು 31,124 ಮತಗಳನ್ನು ಪಡೆದರು.
ಚಾಂಡಿ ಅವರ ಚುನಾವಣಾ ಪ್ರಚಾರವು ವ್ಯಾಪಕ ಗಮನ ಸೆಳೆದಿತ್ತು. ಏಕೆಂದರೆ ಅವರು ಪರಿಸರ ಸ್ನೇಹಿ ವಿಧಾನವನ್ನು ಅನುಸರಿಸಿದರು. ಅವರು ಪ್ಲಾಸ್ಟಿಕ್ ಬ್ಯಾನರ್ಗಳು ಮತ್ತು ಫ್ಲೆಕ್ಸ್ ಬೋರ್ಡ್ಗಳನ್ನು ಬಳಸುವುದನ್ನು ತಪ್ಪಿಸಿದರು. ಬದಲಾಗಿ ಸೈಕಲ್ ಬಳಸಿ ಮನೆ-ಮನೆಗೆ ಪ್ರಚಾರ ಮಾಡುವ ಮೂಲಕ ಸುಸ್ಥಿರತೆಯನ್ನು ಉತ್ತೇಜಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



