ದೇಶ

ರನ್‌ವೇಯಲ್ಲಿ ಮಂಗಗಳ ಹಾವಳಿ: ಇಂಡಿಗೋ ವಿಮಾನ ಟೇಕ್ ಆಫ್ ರದ್ದು!

ಲಖನೌ ವಿಮಾನ ನಿಲ್ದಾಣದಲ್ಲಿ ಮಂಗಗಳ ಗುಂಪೊಂದು ರನ್ ದಾಟುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ರಾಯಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಟೇಕ್ ಆಫ್ ನ್ನು ಸ್ಥಗಿತಗೊಳಿಸಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ರನ್‌ವೇಯಲ್ಲಿ ಮಂಗಗಳ ಹಾವಳಿ: ಇಂಡಿಗೋ ವಿಮಾನ ಟೇಕ್ ಆಫ್ ರದ್ದು!
ಸಾಂದರ್ಭಿಕ ಚಿತ್ರ
Published On :

ಲಖನೌ: ವಿಮಾನ ನಿಲ್ದಾಣದಲ್ಲಿ ಮಂಗಗಳ ಗುಂಪು ರನ್‌ವೇ ದಾಟುತ್ತಿರುವುದು ಕಂಡುಬಂದ ನಂತರ ಇಂಡಿಗೋ ವಿಮಾನ ಟೇಕ್ ಆಫ್ ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಲಖನೌ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಲಖನೌ ವಿಮಾನ ನಿಲ್ದಾಣದಲ್ಲಿ ಮಂಗಗಳ ಗುಂಪೊಂದು ರನ್ ದಾಟುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ರಾಯಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಟೇಕ್ ಆಫ್ ನ್ನು ಸ್ಥಗಿತಗೊಳಿಸಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಸುಮಾರು 150 ಪ್ರಯಾಣಿಕರನ್ನು ಹೊತ್ತ 6E 6521 ವಿಮಾನ ಗುರುವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ರನ್ ವೇಯಿಂದ ಸ್ವಲ್ಪ ಕೆಳಗೆ ಹಾರಾಟ ನಡೆಸುವಾಗ, ಮಂಗಗಳು ರನ್ ವೇ ದಾಟುತ್ತಿರುವುದನ್ನು ಪೈಲಟ್ ನೋಡಿದ್ದಾರೆ.

ತಕ್ಷಣ ಟೇಕ್ ಆಫ್ ರದ್ದುಗೊಳಿಸಿದ್ದು, ವಾಯು ಸಂಚಾರ ನಿಯಂತ್ರಣಕ್ಕೆ ಮಾಹಿತಿ ನೀಡಿದ್ದಾರೆ. ನಂತರ ವಿಮಾನ ಹಿಂತಿರುಗಿದ್ದು, ಸುಮಾರು ಒಂದು ಗಂಟೆಯ ನಂತರ ಇಂಧನ ತುಂಬಿಸಿಕೊಂಡು ಹೊರಟಿದೆ. ಇದರಿಂದಾಗಿ ಇತರ ಕೆಲವು ವಿಮಾನಗಳ ನಿರ್ಗಮನ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿತು.

ಘಟನೆಗೆ 10 ನಿಮಿಷಗಳ ಮುನ್ನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರನ್‌ವೇ ಬಳಿ ಮಂಗಗಳು ಇರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಮಾಹಿತಿ ಬಂದ ಕೂಡಲೇ, ಇಂಡಿಗೋ ವಿಮಾನವು ಹೊರಡಲು ನಿಗದಿಯಾಗಿತ್ತು. ಆದರೆ ರನ್‌ವೇಯಲ್ಲಿ ಮಂಗಗಳ ಕಾಟದಿಂದ ಟೇಕ್-ಆಫ್ ಅನ್ನು ರದ್ದುಗೊಳಿಸಲಾಯಿತು.

ಘಟನೆಯ ನಂತರ ವಿಮಾನ ನಿಲ್ದಾಣದ ವನ್ಯಜೀವಿ ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸಿ ಮಂಗಗಳನ್ನು ಓಡಿಸಿ, ರನ್‌ವೇಯನ್ನು ತೆರವುಗೊಳಿಸಿತು. ಬಳಿಕ ವಿಮಾನ ಕಾರ್ಯಾಚರಣೆಗಳು ಸಾಮಾನ್ಯವಾಗಿ ಪುನರಾರಂಭಗೊಂಡವು ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.