TVK Vijay ನೂರಾರು ಕೋಟಿಗಳ ಒಡೆಯ; ತಂದೆ-ತಾಯಿ, ಮಕ್ಕಳಿಗೂ ಸಾಲ ಕೊಟ್ಟಿದ್ದಾರಾ? ಅಫಿಡವಿಟ್ಟಿನಲ್ಲಿ ನಮೂದು
ವಿಜಯ್ ಅವರು ನಿನ್ನೆ ಅಂದರೆ ಮಾರ್ಚ್ 30ರಂದು ಚೆನ್ನೈನ ವ್ಯಾಸರ್ಪಾಡಿಯ ಡಾ ಅಂಬೇಡ್ಕರ್ ಕಲಾ ಕಾಲೇಜು (ಸ್ವಾಯತ್ತ) ನಲ್ಲಿ ಪೆರಂಬೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ತಮಿಳು ನಾಡು ವಿಧಾನಸಭೆ ಚುನಾವಣೆಗೆ Tamilaga Vettri Kazhagam (ಟಿವಿಕೆ) ಅಧ್ಯಕ್ಷ ಸಿ ಜೋಸೆಫ್ ವಿಜಯ್ ಅಲಿಯಾಸ್ ದಳಪತಿ ವಿಜಯ್ ನೇತೃತ್ವದ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದು, ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿಗಳ ವಿವರಗಳನ್ನು ಘೋಷಿಸಿದ್ದಾರೆ.
ಅವರು ಘೋಷಿಸಿರುವ ಪ್ರಕಾರ, ವಿಜಯ್ ಅವರ ಹೆಸರಿನಲ್ಲಿ 404.58 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿಗಳು ಮತ್ತು 220.15 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳು ಇವೆ. ಅವರ ಪತ್ನಿ ಸಂಗೀತ ವಿಜಯ್ ಅವರ ಹೆಸರಿನಲ್ಲಿ 15.51 ಕೋಟಿ ರೂಪಾಯಿ ಚರ ಆಸ್ತಿಗಳು ಮತ್ತು 2.5 ಕೋಟಿ ಸ್ಥಿರ ಆಸ್ತಿಗಳು ಇವೆ ಎಂದು ತಿಳಿಸಿದ್ದಾರೆ.
ವಿಜಯ್ ಅವರು ನಿನ್ನೆ ಅಂದರೆ ಮಾರ್ಚ್ 30ರಂದು ಚೆನ್ನೈನ ವ್ಯಾಸರ್ಪಾಡಿಯ ಡಾ ಅಂಬೇಡ್ಕರ್ ಕಲಾ ಕಾಲೇಜು (ಸ್ವಾಯತ್ತ) ನಲ್ಲಿ ಪೆರಂಬೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಚರ ಆಸ್ತಿಗಳೆಷ್ಟು?
ಅವರ ಅಫಿಡವಿಟ್ ಪ್ರಕಾರ, ಚರ ಆಸ್ತಿಗಳಲ್ಲಿ 883 ಗ್ರಾಂ ಚಿನ್ನ, ಐದು ಕಾರುಗಳು ಮತ್ತು ಒಂದು ದ್ವಿಚಕ್ರ್ರ ವಾಹನ ಸೇರಿವೆ. ಅವರ ಪತ್ನಿಯ ಹೆಸರಿನಲ್ಲಿ 3,132 ಗ್ರಾಂ ಚಿನ್ನ ಮತ್ತು 134.91 ಕ್ಯಾರಟ್ ವಜ್ರಗಳು ಸೇರಿವೆ. ನಗದು ರೂಪದಲ್ಲಿ ವಿಜಯ್ ಅವರ ಬಳಿ 2 ಲಕ್ಷ ರೂಪಾಯಿ ಇದ್ದರೆ, ಅವರ ಪತ್ನಿಯ ಬಳಿ 1 ಲಕ್ಷ ರೂಪಾಯಿ ಇದೆ.
ತಂದೆ-ತಾಯಿ, ಮಕ್ಕಳಿಗೂ ಸಾಲ ಕೊಟ್ಟಿದ್ದಾರಾ ಟಿವಿಕೆ ವಿಜಯ್?
ಅವರು ಹಲವು ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಸಾಲ ನೀಡಿರುವುದನ್ನೂ ಘೋಷಿಸಿದ್ದಾರೆ. ಅದರಲ್ಲಿ ಅವರ ತಂದೆ ಎಸ್ ಎ ಚಂದ್ರಶೇಖರ್ ಅವರಿಗೆ 3.02 ಕೋಟಿ ರೂಪಾಯಿ, ತಾಯಿ ಶೋಭಾ ಚಂದ್ರಶೇಖರ್ ಅವರಿಗೆ 87.12 ಲಕ್ಷ ರೂಪಾಯಿ, ಪತ್ನಿಗೆ 12.6 ಕೋಟಿ ರೂಪಾಯಿ, ಮಗ ಜೇಸನ್ ಸಂಜಯ್ ಗೆ 8.78 ಲಕ್ಷ ರೂಪಾಯಿ ಮತ್ತು ಮಗಳು ದಿವ್ಯ ಸಾಶಾಗೆ 4.6 ಲಕ್ಷ ರೂಪಾಯಿ ಸಾಲ ನೀಡಿದ್ದೇನೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಅವರು ತಮ್ಮ ವೃತ್ತಿಯನ್ನು ಸ್ವಯಂ ಉದ್ಯೋಗಿ ಎಂದು ಘೋಷಿಸಿಕೊಂಡಿದ್ದು, ಜೊತೆಗೆ ವಿಜಯ್ ವಿದ್ಯಾಶ್ರಮದ ಸಂಯೋಜಕರಾಗಿಯೂ ಹಾಗೂ ನಾಲ್ಕು ಟ್ರಸ್ಟ್‌ಗಳ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಮತ್ತು ಟ್ರಸ್ಟಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಆದಾಯ ಮೂಲಗಳು ಸ್ವಯಂ ಉದ್ಯೋಗ, ಬಡ್ಡಿ ಆದಾಯ ಮತ್ತು ಹಲವು ವಾಣಿಜ್ಯ ಕಟ್ಟಡಗಳ ಆಸ್ತಿಗಳಿಂದ ಬರುವ ಬಾಡಿಗೆ ಹಣವಾಗಿವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




