ಪೆರಂಬೂರಿನಿಂದ ನಾಮಪತ್ರ ಸಲ್ಲಿಸಿದ ನಟ ವಿಜಯ್; ದಳಪತಿ ಆಸ್ತಿ ಎಷ್ಟು ಗೊತ್ತಾ?
ನಾಮಪತ್ರವನ್ನು ಸಲ್ಲಿಸಿದ ಬಳಿಕ ತಮ್ಮ ಓಪನ್-ಟಾಪ್ ಪ್ರಚಾರ ವಾಹನದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯ್ ಅವರು, "ದುಷ್ಟ ಶಕ್ತಿ ಡಿಎಂಕೆ ಸರ್ಕಾರವನ್ನು ಮನೆಗೆ ಕಳುಹಿಸಬೇಕು" ಎಂದು ಕರೆ ನೀಡಿದರು.

ಪೆರಂಬೂರು: ತಮಿಳುನಾಡು ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು, ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಅವರು ಸೋಮವಾರ ಚೆನ್ನೈನ ಪೆರಂಬೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.
ಇದೇ ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ನಟ ವಿಜಯ್ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದರು.
ನಾಮಪತ್ರವನ್ನು ಸಲ್ಲಿಸಿದ ಬಳಿಕ ತಮ್ಮ ಓಪನ್-ಟಾಪ್ ಪ್ರಚಾರ ವಾಹನದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯ್ ಅವರು, "ದುಷ್ಟ ಶಕ್ತಿ ಡಿಎಂಕೆ ಸರ್ಕಾರವನ್ನು ಮನೆಗೆ ಕಳುಹಿಸಬೇಕು" ಎಂದು ಕರೆ ನೀಡಿದರು.
"ನಾವು ತಮಿಳುನಾಡನ್ನು ಉಳಿಸಬೇಕು. ಈ ದುಸ್ಥಿತಿಗೆ ಯಾರು ಹೊಣೆ? ದುಷ್ಟ ಶಕ್ತಿ ಡಿಎಂಕೆ ಈ ಪರಿಸ್ಥಿತಿಗೆ ಕಾರಣ, ಸ್ಟಾಲಿನ್ ಸರ್ ಕಾರಣ" ಎಂದು ಆರೋಪಿಸಿದರು.
"ನಾನು ಎಲ್ಲಾ ನೋವನ್ನು ಸಹಿಸಿಕೊಂಡು ನಿಮಗಾಗಿ ಮಾತ್ರ ಬಂದಿದ್ದೇನೆ (ರಾಜಕೀಯಕ್ಕೆ ಸೇರಿದ್ದೇನೆ). ನಾನು ಎಂದಿಗೂ ಸುಳ್ಳು ಹೇಳುವುದಿಲ್ಲ, ನಿಮ್ಮನ್ನು ಎಂದಿಗೂ ಮೋಸ ಮಾಡುವುದಿಲ್ಲ" ಎಂದು ವಿಜಯ್ ಭರವಸೆ ನೀಡಿದರು.
"ಜನವಿರೋಧಿ ಸರ್ಕಾರ ನಡೆಸುವ ಸ್ಟಾಲಿನ್ ಸರ್ ನಿಮಗೆ ಬೇಕೇ? ಅಥವಾ ಜನರನ್ನು ಪ್ರೀತಿಸುವ ವಿಜಯ್ ನಿಮಗೆ ಬೇಕೇ? ದಯವಿಟ್ಟು ಒಂದು ಅವಕಾಶ ನೀಡಿ ಮತ್ತು 'ಸೀಟಿ' ಚಿಹ್ನೆಗೆ ನಿಮ್ಮ ಮತ ನೀಡಿ" ಎಂದು ಅವರು ಹೇಳಿದರು.
ದಳಪತಿ ಆಸ್ತಿ ಎಷ್ಟು ಗೊತ್ತಾ?
ನಾಮಪತ್ರ ಸಲ್ಲಿಸಿದ ಬಳಿಕ ನಟ ವಿಜಯ್ ಅವರ ಆಸ್ತಿ ವಿವರ ತೀವ್ರ ಚರ್ಚೆಗೀಡಾಗಿದೆ. ವಿಜಯ್ ಅವರು ಒಟ್ಟು 520 ಕೋಟಿ ರೂ. ಆಸ್ತಿಯನ್ನು ಘೋಷಿಸಿದ್ದು, 405 ಕೋಟಿ ರೂಪಾಯಿ ಮೌಲ್ಯದ ಚಿರಾಸ್ತಿ ಮತ್ತು 115 ಕೋಟಿ ರೂಪಾಯಿ ಸ್ತಿರಾಸ್ತಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



