ದೇಶ

LPG ಸಿಲಿಂಡರ್ ಅಭಾವ: ದೇಶಾದ್ಯಂತ 'ಇಂಡಕ್ಷನ್ ಕುಕ್ ಟಾಪ್' ಖರೀದಿಗೆ ಮುಗಿಬಿದ್ದ ಜನರು!

ಕಳೆದ ಎರಡು ದಿನಗಳಿಂದ ಎಲೆಕ್ಟ್ರಿಕ್ ಕುಕ್‌ಟಾಪ್‌ಗಳು, ಇನ್‌ಫ್ರಾರೆಡ್ ಸ್ಟೌವ್‌ಗಳು ಮತ್ತು ಅದಕ್ಕೆ ಹೊಂದಿಕೆಯಾಗುವ ಪಾತ್ರೆ, ಪಗಡೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ರಾಷ್ಟ್ರ ರಾಜಧಾನಿಯ ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ.

LPG ಸಿಲಿಂಡರ್ ಅಭಾವ: ದೇಶಾದ್ಯಂತ 'ಇಂಡಕ್ಷನ್ ಕುಕ್ ಟಾಪ್' ಖರೀದಿಗೆ ಮುಗಿಬಿದ್ದ ಜನರು!
ಇಂಡಕ್ಷನ್ ಕುಕ್ ಟಾಪ್ ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಇರಾನ್ ಜೊತೆಗೆ ಇಸ್ರೇಲ್ ಹಾಗೂ ಅಮೆರಿಕ ಯುದ್ಧದಿಂದಾಗಿ ಭಾರತದಲ್ಲಿ LPG ಸಿಲಿಂಡರ್ ಅಭಾವ ತಲೆದೋರಿದ್ದು, ಇದೀಗ ಬೆಂಗಳೂರು ಸೇರಿದಂತೆ ದೇಶಾದ್ಯಂತ ಇಂಡಕ್ಷನ್ ಕುಕ್ ಟಾಪ್ (induction cooktops) ಮತ್ತು ಎಲೆಕ್ಟ್ರಾನಿಕ್ ಕುಕ್ಕಿಂಗ್ ಉಪಕರಣಗಳ ಮಾರಾಟದಲ್ಲಿ ದಿಢೀರ್ ಬೇಡಿಕೆ ಹೆಚ್ಚಾಗಿದೆ.

ಕಳೆದ ಎರಡು ದಿನಗಳಿಂದ ಎಲೆಕ್ಟ್ರಿಕ್ ಕುಕ್‌ಟಾಪ್‌ಗಳು, ಇನ್‌ಫ್ರಾರೆಡ್ ಸ್ಟೌವ್‌ಗಳು ಮತ್ತು ಅದಕ್ಕೆ ಹೊಂದಿಕೆಯಾಗುವ ಪಾತ್ರೆ, ಪಗಡೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ರಾಷ್ಟ್ರ ರಾಜಧಾನಿಯ ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ.

ಇಂಡಕ್ಷನ್ ಕುಕ್ ಟಾಪ್ ಕೇಳಿಕೊಂಡು ಅಂಗಡಿಗೆ ಬರುವವರು ಹಾಗೂ ಆನ್ ಲೈನ್ ನಲ್ಲಿ ವಿಚಾರಿಸುವವರ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದೆ ಎಂದು ಕನ್ನಾಟ್ ಪ್ರದೇಶದಲ್ಲಿ ಎಫೆಕ್ಟ್ಸ್ ಕಿಚನ್ಸ್ ಮತ್ತು ಹಾರ್ಡ್‌ವೇರ್ ಶಾಪ್ ಇಟ್ಟುಕೊಂಡಿರುವ ಅಮಿತ್ ಗುಪ್ತಾ ಎಂಬುವರು ತಿಳಿಸಿದ್ದಾರೆ.

ನಿನ್ನೆಯಿಂದ 200 ಕ್ಕೂ ಗ್ರಾಹಕರು ಬಂದು ವಿಚಾರಿಸಿದ್ದಾರೆ. ಇನ್ನೂ 250 ರಿಂದ 300 ಮಂದಿ ಹೊಸ ಗ್ರಾಹಕರು ಫೋನ್ ಕರೆ ಮೂಲಕ ವಿಚಾರಿಸಿದ್ದಾರೆ. ಈ ಹಿಂದೆ ಅತಿಥ್ಯ ಕೇಂದ್ರಗಳು ಹೆಚ್ಚಾಗಿ ಎಲೆಕ್ಟ್ರಿಕ್ ಕುಕ್‌ಟಾಪ್‌ಗಳನ್ನು ಖರೀದಿಸುತ್ತಿದ್ದರು. ಆದರೆ ಈಗ ಎಲ್‌ಪಿಜಿ ಅಭಾವದಿಂದ ಕುಟುಂಬಗಳು ಕೂಡಾ ಭಯಭೀತರಾಗಿದ್ದಾರೆ ಎಂದು ಅವರು ಹೇಳಿದರು.

ಅಂಗಡಿಯಲ್ಲಿದ್ದು ಸ್ಟಾಕ್ ಖಾಲಿಯಾಗಿದ್ದು, ಈಗ ಹೆಚ್ಚುವರಿಯಾಗಿ ಖರೀದಿಸಬೇಕಾಗಿದೆ. ಹೆಚ್ಚುತ್ತಿರುವ ಬೇಡಿಕೆಗನುಗುಣವಾಗಿ ಪ್ರತಿದಿನ ವಿವಿಧ ಬ್ರಾಂಡ್‌ಗಳನ್ನು ಬೃಹತ್ ಪ್ರಮಾಣದಲ್ಲಿ ದಾಸ್ತಾನಿಗೆ ಪ್ರಯತ್ನಿಸುತ್ತಿರುವುದಾಗಿ ಗುಪ್ತಾ ಮಾಹಿತಿ ನೀಡಿದ್ದಾರೆ.

ಗ್ರೀನ್ ಪಾರ್ಕ್‌ನಲ್ಲಿ ಎನ್‌ಜಿ ಕಿಚನ್‌ವೇರ್ ನಡೆಸುತ್ತಿರುವ ಮತ್ತೊಬ್ಬ ಚಿಲ್ಲರೆ ವ್ಯಾಪಾರಿ ಪ್ರವೀಣ್ ಕುಮಾರ್, ಇಂಡಕ್ಷನ್ ಕುಕ್‌ಟಾಪ್‌ಗಳು ಮತ್ತು ಎಲೆಕ್ಟ್ರಿಕ್ ಉಪಕರಣಗಳನ್ನು ಖರೀದಿಸುವ ಗ್ರಾಹಕರಲ್ಲಿ ಸಂಖ್ಯೆಯಲ್ಲಿ ಏರಿಕೆಯಾಗಿದೆ. ನಿನ್ನೆಯಿಂದ ಭಾರೀ ಜನಸಂದಣಿ ಕಂಡುಬಂದಿದೆ. ಅಂಗಡಿಗೆ ಭೇಟಿ ನೀಡುವ ಶೇ. 80 ರಷ್ಟು ಗ್ರಾಹಕರು ನಿರ್ದಿಷ್ಟವಾಗಿ ಇಂಡಕ್ಷನ್ ಕುಕ್‌ಟಾಪ್‌ಗಳು ಅಥವಾ ರೈಸ್ ಕುಕ್ಕರ್‌ನಂತಹ ವಿದ್ಯುತ್ ಉಪಕರಣಗಳನ್ನು ಖರೀದಿಸಲು ಬರುತ್ತಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.