ಇರಾನ್ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಹೊರೆ; ಪ್ರತಿ ತಿಂಗಳು 30,000 ಕೋಟಿ ರೂ ಹೆಚ್ಚಿನ ವೆಚ್ಚ!
2026-27ರ ಆರ್ಥಿಕ ವರ್ಷದಲ್ಲಿ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಿಂತ ಹೆಚ್ಚಿದ್ದರೆ, ಕೇಂದ್ರ ಸರ್ಕಾರದ ವಾರ್ಷಿಕ ಹೆಚ್ಚುವರಿ ವೆಚ್ಚವು 3.6 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಬಹುದು ಎಂದು ಎಲಾರಾ ಸೆಕ್ಯುರಿಟೀಸ್ ವರದಿ ತಿಳಿಸಿದೆ.

ನವದೆಹಲಿ: ಇರಾನ್ ಜೊತೆಗಿನ ಅಮೆರಿಕ-ಇಸ್ರೇಲ್ ಯುದ್ಧದಿಂದ ಭಾರತದ ಮೇಲೂ ತೀವ್ರ ಪರಿಣಾಮ ಉಂಟಾಗಿದೆ.
2026-27ರ ಆರ್ಥಿಕ ವರ್ಷದಲ್ಲಿ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಿಂತ ಹೆಚ್ಚಿದ್ದರೆ, ಕೇಂದ್ರ ಸರ್ಕಾರದ ವಾರ್ಷಿಕ ಹೆಚ್ಚುವರಿ ವೆಚ್ಚವು 3.6 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಬಹುದು ಎಂದು ಎಲಾರಾ ಸೆಕ್ಯುರಿಟೀಸ್ ವರದಿ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉಂಟಾಗುತ್ತಿರುವ ಪರಿಣಾಮವನ್ನು ಈ ವರದಿ ತಿಳಿಸಿದೆ. ಏಷ್ಯಾದ ಇಂಧನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳಲಿದ್ದು, ಜಾಗತಿಕ ಇಂಧನ ತೈಲ ಪೂರೈಕೆಗೆ ಅಡ್ಡಿಯಾಗಬಹುದು ಎನ್ನಲಾಗಿದೆ.
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 100 ಡಾಲರ್ ಗೆ ಹೆಚ್ಚಾದರೆ ಭಾರತದ ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ. 2 ರಷ್ಟು ಹೆಚ್ಚಾಗಬಹುದು. ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ 3.6 ಲಕ್ಷ ಕೋಟಿ ರೂ. ಹೆಚ್ಚಿನ ಹೊರೆಯಾಗಬಹುದು ಎಂದು ಹೇಳಲಾಗಿದೆ.
ಮಾರ್ಚ್ ಮಧ್ಯದಿಂದ ಹಾರ್ಮುಜ್ ಜಲಸಂಧಿಯಲ್ಲಿ (SOH) ದೀರ್ಘಕಾಲದ ಅಡಚಣೆ, ಇಂಧನ ಪೂರೈಕೆಯಲ್ಲಿ ವಿಳಂಬ, ನಿರಂತರ ಭೌಗೋಳಿಕ ರಾಜಕೀಯ ಅನಿಶ್ಚಿತತೆಯು ಭಾರತದ ಬಾಹ್ಯ ವಲಯದ ಮೇಲೆ ಒತ್ತಡವನ್ನು ಉಂಟುಮಾಡಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಬೆಳವಣಿಗೆಗಳು ದೇಶೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು. ಹಣಕಾಸಿನ ಒತ್ತಡಗಳಿಗೆ ಕಾರಣವಾಗಬಹುದು. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಎದುರಿಸುತ್ತಿರುವ ಸಮಸ್ಯೆ ಸರಿದೂಗಿಸಲು ಸರ್ಕಾರದಿಂದ ಅಬಕಾರಿ ಸುಂಕ ಕಡಿತ ಮಾಡಬಹುದು ಎಂದು ವರದಿಯಾಗಿದೆ.
ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಸಮೀಪವಿರುವ ತೈಲ ಬೆಲೆಗಳೊಂದಿಗೆ ಪ್ರತಿ ತಿಂಗಳು ಕೇಂದ್ರ ಸರ್ಕಾರದ ಮೇಲೆ 30000 ಕೋಟಿ ರೂ. ಹೆಚ್ಚಿನ ವೆಚ್ಚ ತಗುಲಿದೆ. ಮುಖ್ಯವಾಗಿ ಇದು ತೈಲ ಮಾರುಕಟ್ಟೆ ಕಂಪನಿಗಳ ನಷ್ಟವನ್ನು ಒಳಗೊಂಡಿರುತ್ತದೆ ಎಂದು ಎಲಾರಾ ಸೆಕ್ಯುರಿಟೀಸ್ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



