ವಿದೇಶ

ಕೊನೆಗೂ ಯುದ್ಧ ಅಂತ್ಯಗೊಳಿಸಲು ಇರಾನ್ ಮುಂದು! ಆದ್ರೆ ಅಮೆರಿಕ, ಇಸ್ರೇಲ್ ಗೆ ಹಾಕಿದ ಷರತ್ತುಗಳೇನು?

ಯಾವುದೇ ನಿರ್ಣಯವು ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು ಮತ್ತು ದೇಶವು ಭವಿಷ್ಯದ ದಾಳಿಯನ್ನು ಎದುರಿಸುವುದಿಲ್ಲ ಎಂದು ಖಾತರಿಪಡಿಸಬೇಕು ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ.

ಕೊನೆಗೂ ಯುದ್ಧ ಅಂತ್ಯಗೊಳಿಸಲು ಇರಾನ್ ಮುಂದು! ಆದ್ರೆ ಅಮೆರಿಕ, ಇಸ್ರೇಲ್ ಗೆ ಹಾಕಿದ ಷರತ್ತುಗಳೇನು?
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ನ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ
Published On :

ಟೆಹರಾನ್: ಅಮೆರಿಕ ಮತ್ತು ಇಸ್ರೇಲ್‌ ಜೊತೆಗೆ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಮೂರು ಷರತ್ತುಗಳನ್ನು ಹಾಕಿದೆ.

ಯಾವುದೇ ನಿರ್ಣಯವು ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು ಮತ್ತು ದೇಶವು ಭವಿಷ್ಯದ ದಾಳಿಯನ್ನು ಎದುರಿಸುವುದಿಲ್ಲ ಎಂದು ಖಾತರಿಪಡಿಸಬೇಕು ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪೆಜೆಶ್ಕಿಯಾನ್ ಯುದ್ಧದ ಸಮಯದಲ್ಲಿ ಉಂಟಾದ ಹಾನಿಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಮಾತನಾಡುತ್ತಾ, ಈ ಪ್ರದೇಶದಲ್ಲಿ ಶಾಂತಿಗಾಗಿ ಇರಾನ್‌ನ ಬದ್ಧತೆಯನ್ನು ಪುನರುಚ್ಚರಿಸಿದ್ದೇನೆ. ಯಹೋದಿಗಳ ಆಡಳಿತದ ಇಸ್ರೇಲ್ ಮತ್ತು ಅಮೆರಿಕ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸುವುದು, ಪರಿಹಾರ ನೀಡುವುದು ಮತ್ತು ಭವಿಷ್ಯದ ಆಕ್ರಮಣದ ವಿರುದ್ಧ ದೃಢವಾದ ಅಂತಾರಾಷ್ಟ್ರೀಯ ಖಾತ್ರಿಯನ್ನು ಒದಗಿಸಬೇಕು ಎಂದು ಅವರು ಬರೆದುಕೊಂಡಿದ್ದಾರೆ.

ಅಮೆರಿಕ ಒಂದು ವೇಳೆ ಇರಾನ್ ನ ಬಂದರು ಮೇಲೆ ದಾಳಿ ಮಾಡಿದರೆ ಪರ್ಷಿಯನ್ ಕೊಲ್ಲಿಯಲ್ಲಿ ಯಾವುದೇ ಬಂದರು, ಆರ್ಥಿಕ ಕೇಂದ್ರ ಅಥವಾ ಸ್ಥಳದ ಮೇಲೆ ಭಾರಿ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಇರಾನ್‌ನ ಸಶಸ್ತ್ರ ಪಡೆಗಳ ವಕ್ತಾರ ಅಬೋಲ್‌ಫಜಲ್ ಶೆಕಾರ್ಚಿ, ಸರ್ಕಾರಿ ಸುದ್ದಿಸಂಸ್ಥೆ IRIB ಗೆ ಹೇಳಿಕೆ ನೀಡಿದ ನಂತರ ಪೆಜೆಶ್ಕಿಯಾನ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ನಮ್ಮ ಬಂದರುಗಳು ಮತ್ತು ಹಡಗುಕಟ್ಟೆಗಳಿಗೆ ದಾಳಿ ಮಾಡಿದರೆ, ಪರ್ಷಿಯಲ್ ಕೊಲ್ಲಿಯ ಎಲ್ಲಾ ಬಂದರುಗಳು ಮತ್ತು ಹಡಗುಕಟ್ಟೆಗಳು ನಮ್ಮ ಕಾನೂನುಬದ್ಧ ಗುರಿಗಳಾಗುತ್ತವೆ.ಇಲ್ಲಿಯವರೆಗೆ ಮಾಡಿದ್ದಕ್ಕಿಂತ ಭಾರಿ ಪ್ರಮಾಣದಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತವೆ. ಅಮೆರಿಕನ್ನರನ್ನು ತಮ್ಮ ಭೂಮಿಯಿಂದ ಹೊರಹಾಕಲು ನಾವು ಪ್ರದೇಶದ ದೇಶಗಳಿಗೆ ಕರೆ ನೀಡುತ್ತೇವೆ ಎಂದು ಶೆಕರ್ಚಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.