ಬೆಂಗಳೂರಿಗೆ ಬರಲಿದೆ ಮತ್ತೊಂದು ಬುಲೆಟ್ ರೈಲು; 7 ಹೊಸ ಮಾರ್ಗಗಳಿಗೆ ಮೋದಿ ಸರ್ಕಾರ ಅನುಮೋದನೆ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದ್ದು, ಸರ್ಕಾರವು ತನ್ನ ದೀರ್ಘಾವಧಿಯ ದೃಷ್ಟಿಯ ಭಾಗವಾಗಿ ಏಳು ಹೆಚ್ಚುವರಿ ಹೈಸ್ಪೀಡ್ ರೈಲು ಮಾರ್ಗಗಳನ್ನು ಘೋಷಿಸಿದೆ.

ನವದೆಹಲಿ: ಕೇಂದ್ರ ಸರ್ಕಾರ ದೇಶದಲ್ಲಿ ಏಳು ಹೊಸ ಬುಲೆಟ್ ರೈಲು ಯೋಜನೆಗಳನ್ನು ಘೋಷಣೆ ಮಾಡಿದ್ದು, ಸದ್ಯ ಈ ಏಳು ಯೋಜನೆಯ ಕೆಲಸಗಳು ಶರವೇಗದಲ್ಲಿ ನಡೆಯುತ್ತಿವೆ.
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದ್ದು, ಸರ್ಕಾರವು ತನ್ನ ದೀರ್ಘಾವಧಿಯ ದೃಷ್ಟಿಯ ಭಾಗವಾಗಿ ಏಳು ಹೆಚ್ಚುವರಿ ಹೈಸ್ಪೀಡ್ ರೈಲು ಮಾರ್ಗಗಳನ್ನು ಈಗಾಗಲೇ ಗುರುತಿಸಿದೆ. ಈ ಪ್ರಸ್ತಾವಿತ ಕಾರಿಡಾರ್‌ಗಳು ದೆಹಲಿ, ವಾರಣಾಸಿ, ಪುಣೆ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದ್ದು, ವಿಶಾಲವಾದ ರಾಷ್ಟ್ರೀಯ ಬುಲೆಟ್ ರೈಲು ಜಾಲಕ್ಕೆ ದಾರಿ ಮಾಡಿಕೊಡುತ್ತವೆ.
ದೇಶದ ಪ್ರಮುಖ ನಗರಗಳ ನಡುವೆ ಪ್ರಯಾಣದ ಸಮಯವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಬರೋಬ್ಬರಿ 16 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 7 ಹೊಸ ಬುಲೆಟ್ ಟ್ರೈನ್ ಕಾರಿಡಾರ್ ಯೋಜನೆಗಳನ್ನು ಘೋಷಿಸಿದೆ. ಇದರಲ್ಲಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂಪರ್ ಕೊಡುಗೆ ಸಿಕ್ಕಿದ್ದು, ಹೈದರಾಬಾದ್ ಮತ್ತು ಚೆನ್ನೈ ನಡುವಿನ ಪ್ರಯಾಣ ಇನ್ಮುಂದೆ ವಿಮಾನಕ್ಕಿಂತಲೂ ವೇಗವಾಗಲಿದೆ.
ಈ ಬುಲೆಟ್ ಟ್ರೈನ್ ಯೋಜನೆಗಳು ಭಾರತೀಯ ಸಾರಿಗೆ ವ್ಯವಸ್ಥೆಯ ಮುಖಪುಟವನ್ನೇ ಬದಲಾಯಿಸಲಿದ್ದು, ಬೆಂಗಳೂರಿನ ಜನರಿಗೆ ಇನ್ಮುಂದೆ ನೆರೆಯ ಮೆಟ್ರೋ ಸಿಟಿಗಳಿಗೆ ಹೋಗಿ ಬರುವುದು ಪಕ್ಕದ ಏರಿಯಾಗೆ ಹೋಗುವಷ್ಟೇ ಸುಲಭವಾಗಲಿದೆ.
ಹೈದರಾಬಾದ್ - ಬೆಂಗಳೂರು ಕಾರಿಡಾರ್
ಬೆಂಗಳೂರು ಮತ್ತು ಹೈದರಾಬಾದ್ ದೇಶದ ಅತಿ ದೊಡ್ಡ ಟೆಕ್ ಹಬ್‌ಗಳು. ಸದ್ಯ ಈ ಎರಡು ನಗರಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಬೇಕಾದರೂ ಕನಿಷ್ಠ 8.5 ಗಂಟೆ ಬೇಕು. ಆದರೆ ಬುಲೆಟ್ ಟ್ರೈನ್ ಬಂದ ಮೇಲೆ ಈ ಇಡೀ ಜರ್ನಿಯನ್ನು ಕೇವಲ 2 ಗಂಟೆಗಳಲ್ಲಿ ಮುಗಿಸಬಹುದು. ಇದರಿಂದಾಗಿ ಎರಡೂ ನಗರಗಳ ನಡುವಿನ ಬಿಸಿನೆಸ್ ಮತ್ತು ಉದ್ಯೋಗದ ಸಂಪರ್ಕ ಮತ್ತಷ್ಟು ಸ್ಟ್ರಾಂಗ್ ಆಗಲಿದೆ.
ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಹೊಸ ಮಾರ್ಗಗಳು
ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ.
ಈ ಮಾರ್ಗಗಳು ಭಾರತದ ಕೆಲವು ದೊಡ್ಡ ಆರ್ಥಿಕ, ಕೈಗಾರಿಕಾ, ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಕೇಂದ್ರಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



