ಮುಂದಿನ ಚುನಾವಣೆಯನ್ನು ಈಗಾಗಲೇ ಗೆದ್ದಿದ್ದೇವೆ; ಎಲ್ಲಾ ವಿಷವನ್ನು ನುಂಗುವ ಶಿವನಂತೆ 'ಕಾಂಗ್ರೆಸ್': ರಾಹುಲ್ ಗಾಂಧಿ
ಇಂಡಿಯಾ ಒಕ್ಕೂಟದ ನಡುವೆ ಸಮನ್ವಯವಿಲ್ಲ ಎಂಬ ಬಿಜೆಪಿ ನಡೆಸುತ್ತಿರುವ ಪ್ರಚಾರಕ್ಕೆ ನಾಯಕರು ಬಲಿಯಾಗಬಾರದು. ಒಕ್ಕೂಟದ ಕಲ್ಪನೆಯನ್ನು ಸಮರ್ಥಿಸಲು ಎಲ್ಲರೂ ಒಟ್ಟಿಗೆ ಇರುತ್ತೇವೆ.

ನವದೆಹಲಿ: ಸರ್ಕಾರದ ವಿರುದ್ಧ ಜನರಲ್ಲಿರುವ ಕೋಪವನ್ನು ಗಮನಿಸಿದರೆ, ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಈಗಾಗಲೇ ನಾವು ಗೆದ್ದಿದ್ದೇವೆ. ಆದರೆ, ಮುಖ್ಯ ಸಮಸ್ಯೆ ಏನೆಂದರೆ, ಗೆಲ್ಲಲು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಒಟ್ಟಾಗಿ ನಿಂತು ವಿರೋಧಿಸಿದರೆ" ಬಿಜೆಪಿಯನ್ನು ಸೋಲಿಸುವುದು ಸುಲಭ ಎಂದು ಹೇಳಿದ ರಾಹುಲ್ ಗಾಂಧಿ, ಕಾಂಗ್ರೆಸ್ "ಎಲ್ಲಾ ವಿಷವನ್ನು ಕುಡಿಯುವ ನೀಲಿ ಕುತ್ತಿಗೆಯ (ಶಿವ)ನ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಅವರು ಹೇಳಿದರು, ಪಕ್ಷದ ಬಗ್ಗೆ ಮಿತ್ರಪಕ್ಷಗಳು ಹೊಂದಿರುವ ಯಾವುದೇ ಟೀಕೆಗಳನ್ನು "ನಗುತ್ತಾ ಸ್ವೀಕರಿಸಲಾಗುತ್ತದೆ ಎಂದರು.
ಇಂಡಿಯಾ ಒಕ್ಕೂಟದ ನಡುವೆ ಸಮನ್ವಯವಿಲ್ಲ ಎಂಬ ಬಿಜೆಪಿ ನಡೆಸುತ್ತಿರುವ ಪ್ರಚಾರಕ್ಕೆ ನಾಯಕರು ಬಲಿಯಾಗಬಾರದು. ಒಕ್ಕೂಟದ ಕಲ್ಪನೆಯನ್ನು ಸಮರ್ಥಿಸಲು ಎಲ್ಲರೂ ಒಟ್ಟಿಗೆ ಇರುತ್ತೇವೆ. ಇದರಲ್ಲಿ ಡಿಎಂಕೆ ಕೂಡ ಒಳಗೊಂಡಿರುತ್ತದೆ’ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
‘ಇಂಡಿಯಾ’ದಲ್ಲಿ ಒಗ್ಗಟ್ಟಿಲ್ಲ ಎಂದು ಬಿಜೆಪಿ ಬಿಂಬಿಸುತ್ತಿದೆ. ಇದು ಸತ್ಯವಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಜೊತೆಗಿದ್ದರೂ ಕೂಡ ಕೆಲವು ಪಕ್ಷಗಳ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದೇವೆ. ಕೇರಳದಲ್ಲಿ ನಾವು ಪಿಣರಾಯಿ ವಿಜಯನ್ ಅವರನ್ನು ಕಟುವಾಗಿ ಟೀಕಿಸಿದ್ದೆವು. ನೀವು ಹೋಗಿ ಅವರನ್ನು ಆಲಂಗಿಸಿಕೊಳ್ಳಿ ಎಂದರೆ ಅದು ಸಾಧ್ಯವಿಲ್ಲ. ನಾವು ಅವರ ಜೊತೆ ರಾಜಕೀಯವಾಗಿ ಹೋರಾಟ ನಡೆಸುತ್ತಿದ್ದೇವೆ’ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



