'ಅತ್ಯಾಚಾರಿಗಳ ರಕ್ಷಕ': ಬಿಲ್ಕಿಸ್ ಬಾನೋ ಪ್ರಕರಣ ಉಲ್ಲೇಖಿಸಿ ಜೋಶಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ; ವಾದ್ರಾ ಹೇಳಿಕೆ ಸಮರ್ಥಿಸಿಕೊಂಡ CM
2009 ರ ಮಂಗಳೂರು ಪಬ್ ದಾಳಿಗೆ ಸಂಬಂಧಿಸಿದ ವ್ಯಕ್ತಿಯನ್ನು ಪ್ರಹ್ಲಾದ್ ಜೋಶಿ ಬಿಜೆಪಿಗೆ ಸೇರಿಸಿದ್ದು ಸೇರಿದಂತೆ ಹಿಂದಿನ ಘಟನೆಗಳನ್ನು ಕಾಂಗ್ರೆಸ್ ಮುಖಂಡರು ಉಲ್ಲೇಖಿಸಿದ್ದಾರೆ. "ಇದರಲ್ಲಿ ಸಂಸತ್ತಿಗೆ ವಿರುದ್ಧವಾಗಿ ಏನಿತ್ತು?

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೇಳಿಕೆಗಳು ವೈಯಕ್ತಿಕ ರಾಜಕೀಯ ದಾಳಿಯಲ್ಲ, ಬದಲಾಗಿ ರಾಷ್ಟ್ರವ್ಯಾಪಿ ಸಾರ್ವಜನಿಕ ಭಾವನೆ ಮತ್ತು ವಿದ್ಯಾರ್ಥಿಗಳ ಆಕಾಂಕ್ಷೆಗಳ ಪ್ರತಿಬಿಂಬ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಶಿವಕುಮಾರ್. ಪ್ರಿಯಾಂಕಾ ಗಾಂಧಿ ಪ್ರಶ್ನಿಸಿಲ್ಲ, ಅವರು ದೇಶದ ಪರ ಧ್ವನಿ ಎತ್ತಿದ್ದಾರೆ. ಅದು ವಯಕ್ತಿಕವಲ್ಲ, ಜನರ, ವಿದ್ಯಾರ್ಥಿಗಳ ಮತ್ತು ದೇಶದ ನಾಗರಿಕರ ಪರವಾದ ದನಿಯಾಗಿದೆ ಅವರು ಹೇಳಿದರು. ಇದಕ್ಕೂ ಮೊದಲು, ಪ್ರಿಯಾಂಕಾ ವಾದ್ರಾ ಅವರು ಸದನದೊಳಗೆ ಮಾಡಿದ ಹೇಳಿಕೆಗಳು ಸಂಸತ್ತಿಗೆ ವಿರುದ್ಧವಾಗಿವೆ ಎಂಬ ಆರೋಪಗಳನ್ನು ತಳ್ಳಿಹಾಕಿದರು.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ತಮ್ಮ ಹೇಳಿಕೆಗಳು ದಾಖಲಿತ ಸಂಗತಿಗಳನ್ನು ಆಧರಿಸಿವೆ ಮತ್ತು ಮಹಿಳೆಯರ ಬಗ್ಗೆ ಅವರಿಗಿರುವ ಮನೋಭಾವದ ಬಗ್ಗೆ ಹೇಳಿದ್ದೇನೆ ಎಂದು ಅವರು ಪ್ರತಿಪಾದಿಸಿದರು, ಸಂಸದೀಯ ಕ್ರಮ ಅಥವಾ ನಿರ್ಬಂಧಗಳ ಬೆದರಿಕೆಗೆ ನಾನು ಬಗ್ಗುವುದಿಲ್ಲ ಎಂದು ಪುನರುಚ್ಚರಿಸಿದರು.
2009 ರ ಮಂಗಳೂರು ಪಬ್ ದಾಳಿಗೆ ಸಂಬಂಧಿಸಿದ ವ್ಯಕ್ತಿಯನ್ನು ಪ್ರಹ್ಲಾದ್ ಜೋಶಿ ಬಿಜೆಪಿಗೆ ಸೇರಿಸಿದ್ದು ಸೇರಿದಂತೆ ಹಿಂದಿನ ಘಟನೆಗಳನ್ನು ಕಾಂಗ್ರೆಸ್ ಮುಖಂಡರು ಉಲ್ಲೇಖಿಸಿದ್ದಾರೆ. "ಇದರಲ್ಲಿ ಸಂಸತ್ತಿಗೆ ವಿರುದ್ಧವಾಗಿ ಏನಿತ್ತು? ಅದು ಸತ್ಯ. ಸತ್ಯವನ್ನು ಹೇಳಿದ್ದಕ್ಕಾಗಿ ಅವರು ನನ್ನನ್ನು ಶಿಕ್ಷಿಸಲು ಬಯಸಿದರೆ, ಶಿಕ್ಷಿಸಲಿ ನಾನು ಸತ್ಯವನ್ನು ಮಾತನಾಡುತ್ತೇನೆ ಎಂದಿದ್ದಾರೆ.
ಮಂಗಳೂರಿನ ಪಬ್‌ನಲ್ಲಿ ಮಹಿಳೆಯರ ಮೇಲೆ ನಡೆದ ಹಲ್ಲೆಯಲ್ಲಿ ಭಾಗಿಯಾದ ವ್ಯಕ್ತಿಯನ್ನು ಬಿಜೆಪಿಗೆ ಯಾರು ಸೇರಿಸಿಕೊಂಡರು? ಪ್ರಲ್ಹಾದ್ ಜೋಷಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡರು. ಐದು ಗಂಟೆಗಳ ನಂತರ ಅಥವಾ ಹೊರಹಾಕಲಾಯಿತು, ಆದರೆ ಅವರನ್ನು ಸೇರಿಸಿಕೊಳ್ಳುತ್ತಿರುವ ಛಾಯಾಚಿತ್ರವಿದೆ. ಇದು ಕೇವಲ ಒಂದೇ ಒಂದು ಘಟನೆಯಲ್ಲ, ಆದರೆ ಇದು ಮಹಿಳೆಯರ ಬಗ್ಗೆ ಅವರ ಮನೋಭಾವವನ್ನು ಪ್ರತಿಬಿಂಬಿಸುತ್ತದೆ" ಎಂದು ಪ್ರಿಯಾಂಕಾ ಹೇಳಿದರು.
ಕಾಂಗ್ರೆಸ್ ಲೋಕಸಭಾ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಲ್ಕಿಸ್ ಬಾನೋ ಅಪರಾಧಿಗಳಿಗೆ ಸಂಬಂಧಿಸಿದಂತೆ ಹೊಸದಾಗಿ ನೇಮಕಗೊಂಡ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಷಿ ವಿರುದ್ಧ ವಾಗ್ದಾಳಿ ನಡೆಸಿದರು.
ಜೋಶಿ ಅವರನ್ನು ‘ಅತ್ಯಾಚಾರಿಗಳ ರಕ್ಷಕ’ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ ಬೆನ್ನಲ್ಲೇ ಬಿಲ್ಕಿಸ್ ಬಾನು ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ವಿನಾಯಿತಿ ನೀಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಲ್ಹಾದ್ ಜೋಶಿ ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದರು. ಇದೇ ವಿಚಾರವನ್ನು ಉಲ್ಲೇಖಿಸಿ ಸಂಸತ್ತಿನಲ್ಲಿ ಜೋಶಿ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



