ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಮಹಿಳೆ; ಬಟ್ಟೆ ಕಳಚುವುದಾಗಿ ಮನೆ ಮಾಲೀಕರಿಗೆ ಬೆದರಿಕೆ! ದೂರು ದಾಖಲು
ಜೈಪುರದ ಮುಹಾನಾ ಪ್ರದೇಶದಲ್ಲಿರುವ ಮನೆಯ ಮಾಲೀಕರು, ಆಕೆ ಕೂಗಾಡುತ್ತಾ ಮತ್ತು ತಮಗೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದಾರೆ.
ಜೈಪುರ: ಜೈಪುರದ ಮನೆಯೊಂದರ ಮಲಗುವ ಕೋಣೆಯಿಂದ ಆಭರಣಗಳನ್ನು ಕದ್ದ ಮಹಿಳೆಯೊಬ್ಬಳು, ಮನೆಯೊಳಗೆ ಲಾಕ್ ಆಗಿದ್ದರಿಂದ ಅಲ್ಲಿಂದ ಹೊರಹೋಗಲಾಗದೆ ಸಿಕ್ಕಿಬಿದ್ದಿದ್ದಾರೆ. ಮನೆಯ ಮಾಲೀಕರು ಬಂದು ಪ್ರಶ್ನಿಸಿದಾಗ, ಆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು, ಆಕೆ ತನ್ನ ಬಟ್ಟೆಗಳನ್ನು ಕಳಚುವುದಾಗಿ ಮತ್ತು ಪೊಲೀಸರಿಗೆ ಕರೆ ಮಾಡಿ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಜೈಪುರದ ಮುಹಾನಾ ಪ್ರದೇಶದಲ್ಲಿರುವ ಮನೆಯ ಮಾಲೀಕರು, ಆಕೆ ಕೂಗಾಡುತ್ತಾ ಮತ್ತು ತಮಗೆ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಮನೆಯಿಂದ ಆಭರಣಗಳು ಮತ್ತು ನಗದು ಕಳುವಾದ ಬಗ್ಗೆ ದೂರು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆ ನಂತರ ಮನೆಯ ಮಾಲೀಕರು ಭದ್ರತೆ ಮತ್ತು ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು.
ಗುರುವಾರ ಕುಟುಂಬದೊಂದಿಗೆ ಹೊರಗೆ ಹೋಗಿದ್ದಾಗ, ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಮಹಿಳೆಯೊಬ್ಬರು ಬೆಡ್ ರೂಂಗೆ ಪ್ರವೇಶಿಸಿ ಕಬೋರ್ಡ್ ಅನ್ನು ತೆರೆಯುತ್ತಿರುವುದು ಕಂಡುಬಂದಿದೆ. ಮಹಿಳೆ ಸಣ್ಣ ಬಾಕ್ಸ್‌ವೊಂದನ್ನು ಹೊರತೆಗೆದು ಹಾಸಿಗೆಯ ಮೇಲೆಟ್ಟು, ಅದರಲ್ಲಿದ್ದ ವಸ್ತುಗಳನ್ನು ಪರಿಶೀಲಿಸುತ್ತಿದ್ದರು; ಅವುಗಳಲ್ಲಿ ಹೆಚ್ಚಿನವು ಆಭರಣಗಳಾಗಿದ್ದವು.
ಮನೆಯ ಮಾಲೀಕರು ತಕ್ಷಣವೇ ನೆರೆಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಮತ್ತು ಮುಖ್ಯ ದ್ವಾರಕ್ಕೆ ಬೀಗ ಹಾಕಿಸಿದ್ದಾರೆ. ಬಳಿಕ ಅವರು ಕೂಡಲೇ ಮನೆಗೆ ಧಾವಿಸಿ ಬಂದಿದ್ದಾರೆ.
ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದ ಮಹಿಳೆ, ಮನೆಯ ಮಾಲೀಕರು ಮತ್ತು ಅವರ ನೆರೆಯವರನ್ನು ಬೆದರಿಸಿದ್ದಾರೆ.
'ನಾನು ನನ್ನ ಬಟ್ಟೆಗಳನ್ನು ಹರಿದುಹಾಕುತ್ತೇನೆ. ಪೊಲೀಸರು ನಿಮ್ಮನ್ನು ಹಿಡಿದುಕೊಳ್ಳುತ್ತಾರೆ' ಎಂದು ಮನೆಯ ಮಾಲೀಕರು ಚಿತ್ರೀಕರಿಸಿದ ವಿಡಿಯೋದಲ್ಲಿ ಆಕೆ ಹೇಳುತ್ತಿರುವುದು ಕೇಳಿಬಂದಿದೆ.
ಪೊಲೀಸರು ಶೀಘ್ರದಲ್ಲೇ ಮನೆಗೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮನೆಯ ಮಾಲೀಕರ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


