IIT Bombay ವಿದ್ಯಾರ್ಥಿ ಸಾಹಿಲ್ ಆತ್ಮಹತ್ಯೆ: ಎಕ್ಸಾಮ್ ಹಾಲ್‌ನಲ್ಲಿ ಅಂದು ನಡೆದಿದ್ದೇನು?
ಐಐಟಿ ಬಾಂಬೆಯ ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಹೊರಬಂದಿರುವ ಸಿಸಿಟಿವಿ ದೃಶ್ಯಾವಳಿಗಳಿಂದ ಪರೀಕ್ಷಾ ಕೊಠಡಿಯಲ್ಲಿ ನಡೆದ ಘಟನೆಯ ಸ್ಪಷ್ಟ ಚಿತ್ರಣ ಲಭ್ಯವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ್ರ): ಇಡೀ ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿರುವ ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರೀಕ್ಷಾ ಕೊಠಡಿಯ ಒಳಗಿನ ಸಿಸಿಟಿವಿ (CCTV) ದೃಶ್ಯಾವಳಿಗಳಿಂದ ಮಹತ್ವದ ವಿವರಗಳು ಬಹಿರಂಗವಾಗಿವೆ. ಮಧ್ಯಂತರ ಸೆಮಿಸ್ಟರ್ ಪರೀಕ್ಷೆಯ ವೇಳೆ ಸಾಹಿಲ್ ಮುಂದಿನ ಸಾಲಿನ ಸೀಟಿನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುತ್ತಿರುವುದು ಪತ್ತೆಯಾಗಿದೆ. ಆದರೆ, ಈ ವೇಳೆ ಪರೀಕ್ಷಾ ಕೊಠಡಿಯಲ್ಲಿ ಯಾವುದೇ ವಾಗ್ವಾದ ನಡೆದಿಲ್ಲ ಎಂಬುದು ಸಿಸಿಟಿವಿ ದೃಶ್ಯಗಳಿಂದ ಸ್ಪಷ್ಟವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಮೊಬೈಲ್ ಬಳಕೆ...
ಮಧ್ಯಂತರ ಸೆಮಿಸ್ಟರ್ ಪರೀಕ್ಷೆಯ ವೇಳೆ ಸಾಹಿಲ್ ಮುಂದಿನ ಸಾಲಿನ ಸೀಟಿನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುತ್ತಿದ್ದರು. ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಅವರು ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಕ್ಕೆ ಅಪ್‌ಲೋಡ್ ಮಾಡುತ್ತಿದ್ದರು ಎಂದು ಐಐಟಿ ಬಾಂಬೆ ತಿಳಿಸಿದೆ. ಇದು ಸಿಸಿಟಿವಿ ದೃಶ್ಯಗಳಿಂದಲೂ ಸ್ಪಷ್ಟವಾಗಿದೆ. ಇನ್ನು, ಈ ವೇಳೆ ಅಲ್ಲಿಗೆ ಬಂದ ಇನ್ವಿಜಿಲೇಟರ್ ಮತ್ತು ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರು ಸಾಹಿಲ್ ಅವರನ್ನು ಪರೀಕ್ಷಾ ಅಕ್ರಮದ (ಚೀಟಿಂಗ್) ಸಂದರ್ಭದಲ್ಲಿ ಹಿಡಿದಿದ್ದಾರೆ. ಜೊತೆಗೆ, ಪ್ರಾಧ್ಯಾಪಕರು ಸಾಹಿಲ್ ಅವರನ್ನು ಪ್ರಶ್ನಿಸಿ, ಪಕ್ಕಕ್ಕೆ ಕರೆದೊಯ್ದಾಗ ಸಾಹಿಲ್ ಯಾವುದೇ ವಾಗ್ವಾದ ನಡೆಸದೆ ಶಾಂತವಾಗಿ ತನ್ನ ಮೊಬೈಲ್ ಫೋನ್ ಅನ್ನು ಪ್ರಾಧ್ಯಾಪಕರಿಗೆ ಹಸ್ತಾಂತರಿಸಿದ್ದಾರೆ. ಈ ವೇಳೆ, ಇತರ ವಿದ್ಯಾರ್ಥಿಗಳು ಎಂದಿನಂತೆ ಪರೀಕ್ಷೆ ಬರೆಯುತ್ತಿರುತ್ತಾರೆ. ಜೊತೆಗೆ, ಇದಾದ ನಂತರ ಯಾವುದೇ ಗದ್ದಲವಿಲ್ಲದೆ ಸಾಹಿಲ್ ಪರೀಕ್ಷಾ ಕೊಠಡಿಯಿಂದ ಹೊರನಡೆದಿದ್ದಾರೆ.
ಹಾಗಾದ್ರೆ, ನಂತರ ನಡೆದಿದ್ದೇನು?
ಪರೀಕ್ಷಾ ಕೊಠಡಿಯಿಂದ ಹೊರಬಂದ ನಂತರ ಸಾಹಿಲ್ ಅವರನ್ನು ಐಐಟಿಯ ಇತರ ಹಿರಿಯ ಅಧಿಕಾರಿಗಳ ಬಳಿಗೂ ಕರೆದೊಯ್ಯಲಾಗಿತ್ತು. ಸಿಸಿಟಿವಿ ಪ್ರಕಾರ, ಮಧ್ಯಾಹ್ನ 1:25 ರ ಸುಮಾರಿಗೆ ಸಾಹಿಲ್ ತನ್ನ ಹಾಸ್ಟೆಲ್ ಕೊಠಡಿಯತ್ತ ಹೋಗಿರುವುದು ಕಂಡುಬಂದಿದ್ದು, ಆ ನಂತರ ಅವರು ಕೋಣೆಯಿಂದ ಹೊರಗೆ ಬರಲಿಲ್ಲ ಹಾಗೂ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಾಹಿಲ್ ಕುಟುಂಬದವರು ಜಾತಿ ಆಧಾರಿತ ತಾರತಮ್ಯದ ಆರೋಪ ಮಾಡಿದ್ದು, ಪ್ರೊಫೆಸರ್ ದೂಲ್ಲಾ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಅವರನ್ನು ಡೀನ್ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಸದ್ಯ ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ಈ ಪ್ರಕರಣದ ಸಮಗ್ರ ತನಿಖೆ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



