ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ದಾಖಲೆ: Instagram ನಲ್ಲಿ 10 ಕೋಟಿ ಫಾಲೋವರ್ಸ್ ದಾಟಿದ ಮೊದಲ ವಿಶ್ವ ನಾಯಕ
2014ರಲ್ಲಿ ಇನ್‌ಸ್ಟಾಗ್ರಾಂ ಖಾತೆ ಸೇರಿದ್ದ ಪ್ರಧಾನಿ ಮೋದಿ ಅವರಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಎರಡು ಪಟ್ಟು ಹೆಚ್ಚು ಅನುಯಾಯಿಗಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಗುರುವಾರ ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ಇನ್ಸ್ಟಾಗ್ರಾಂನಲ್ಲಿ 100 ಮಿಲಿಯನ್ ಅನುಯಾಯಿಗಳನ್ನು ಹೊಂದಿದ ವಿಶ್ವದ ಮೊದಲ ನಾಯಕ ಮತ್ತು ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. 2014ರಲ್ಲಿ ಇನ್‌ಸ್ಟಾಗ್ರಾಂ ಖಾತೆ ಸೇರಿದ್ದ ಪ್ರಧಾನಿ ಮೋದಿ ಅವರಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಎರಡು ಪಟ್ಟು ಹೆಚ್ಚು ಅನುಯಾಯಿಗಳಿದ್ದಾರೆ.
ಮುಂದಿನ ಐದು ಪ್ರಮುಖ ಜಾಗತಿಕ ನಾಯಕರ ಒಟ್ಟು ಅನುಯಾಯಿಗಳ ಸಂಖ್ಯೆಯೂ ಮೋದಿ ಅವರ ವೈಯಕ್ತಿಕ ಅನುಯಾಯಿಗಳಿಗಿಂತ ಕಡಿಮೆಯಾಗಿದೆ. ಡೊನಾಲ್ಡ್ ಟ್ರಂಪ್ ಅವರಿಗೆ 43.2 ಮಿಲಿಯನ್ ಅನುಯಾಯಿಗಳಿದ್ದು, ಇಂಡೋನೇಷ್ಯಾ ಅಧ್ಯಕ್ಷ ಪ್ರೊಬೊವೊ ಸುಬಿಯಂಟೊ ಅವರಿಗೆ 15 ಮಿಲಿಯನ್ ಅನುಯಾಯಿಗಳಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲುಲಾ ಅವರಿಗೆ 14.4 ಮಿಲಿಯನ್, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರಿಗೆ 11.6 ಮಿಲಿಯನ್ ಮತ್ತು ಅರ್ಜೆಂಟಿನಾ ಅಧ್ಯಕ್ಷ ಜೇವಿಯರ್ ಮಿಲೀ ಅವರಿಗೆ 6.4 ಮಿಲಿಯನ್ ಅನುಯಾಯಿಗಳಿದ್ದಾರೆ.
ಭಾರತದಲ್ಲಿಯೂ ಇನ್‌ಸ್ಟಾಗ್ರಾಂನಲ್ಲಿ ಮೋದಿಯವರು ಇತರ ರಾಜಕೀಯ ನಾಯಕರಿಗಿಂತ ಬಹಳ ಮುಂದಿದ್ದಾರೆ. ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದು, ಅವರಿಗೆ ಸುಮಾರು 16.1 ಮಿಲಿಯನ್ ಅನುಯಾಯಿಗಳಿದ್ದಾರೆ. ನಂತರ ರಾಹುಲ್ ಗಾಂಧಿಯವರಿಗೆ ಸುಮಾರು 12.6 ಮಿಲಿಯನ್ ಅನುಯಾಯಿಗಳಿದ್ದಾರೆ.
ಪ್ರಸ್ತುತ ಪ್ರಧಾನಿ ಮೋದಿ ಇಸ್ರೇಲ್‌ಗೆ ಎರಡು ದಿನಗಳ ಅಧಿಕೃತ ಭೇಟಿಯಲ್ಲಿದ್ದಾರೆ. ನಿನ್ನೆ ಬುಧವಾರ ಇಸ್ರೇಲ್ ಸಂಸತ್ತಾದ ನೆಸ್ಸೆಟ್ ನಿಂದ ಅತ್ಯುನ್ನತ ಗೌರವವಾದ “ಸ್ಪೀಕರ್ ಆಫ್ ದ ಕ್ನೆಸೆಟ್ ಮೆಡಲ್” ಪ್ರಶಸ್ತಿಯನ್ನು ಅವರಿಗೆ ಪ್ರದಾನಿಸಲಾಯಿತು.
ಭಾರತ–ಇಸ್ರೇಲ್ ತಂತ್ರಾತ್ಮಕ ಸಂಬಂಧಗಳನ್ನು ಬಲಪಡಿಸಲು ಮೋದಿ ಅವರು ತಮ್ಮ ವೈಯಕ್ತಿಕ ನಾಯಕತ್ವದ ಮೂಲಕ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಇಸ್ರೇಲ್ ಸಂಸತ್ತಿನಲ್ಲಿ ಮಾಡಿದ ಭಾಷಣದ ಬಳಿಕ ಈ ಪದಕವನ್ನು ಪ್ರದಾನಿಸಲಾಯಿತು. ಭಾಷಣದ ನಂತರ ಮೋದಿ ಅವರು ನೆಸ್ಸೆಟ್ ಸದಸ್ಯರೊಂದಿಗೆ ಸಂವಾದ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




