ದೇಶ

Xi Jinpingಗೆ ದಿಢೀರ್ ಅಸ್ವಸ್ಥತೆ: BRICS ಶೃಂಗದಲ್ಲಿ ಮಾನವೀಯತೆ ಮೆರೆದ ಮೋದಿ; ಭಾಷಣ ನಿಲ್ಲಿಸಿ China ಅಧ್ಯಕ್ಷರ ಆರೋಗ್ಯ ವಿಚಾರಿಸಿದ ಪ್ರಧಾನಿ..!

ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡುತ್ತಿದ್ದಾಗ, ಅವರ ಪಕ್ಕದಲ್ಲೇ ಕುಳಿತಿದ್ದ ಚೀನಾ ಅಧ್ಯಕ್ಷ ಶ್ಸಿ ಜಿನ್‌ಪಿಂಗ್ ಅವರು ತೀವ್ರ ಅಸ್ವಸ್ಥತೆಗೆ ಒಳಗಾದಂತೆ ಕಂಡುಬಂದರು.

Xi Jinpingಗೆ ದಿಢೀರ್ ಅಸ್ವಸ್ಥತೆ: BRICS ಶೃಂಗದಲ್ಲಿ ಮಾನವೀಯತೆ ಮೆರೆದ ಮೋದಿ; ಭಾಷಣ ನಿಲ್ಲಿಸಿ China ಅಧ್ಯಕ್ಷರ ಆರೋಗ್ಯ ವಿಚಾರಿಸಿದ ಪ್ರಧಾನಿ..!
ಪ್ರಧಾನಿ ನರೇಂದ್ರ ಮೋದಿ-ಕ್ಸಿ ಜಿನ್ ಪಿಂಗ್
Published On :

ನವದೆಹಲಿ: ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಷಣ ಮಾಡುತ್ತಿದ್ದ ವೇಳೆ ಅನಿರೀಕ್ಷಿತ ಘಟನೆಯೊಂದು ನಡೆದಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಇದ್ದಕ್ಕಿದ್ದಂತೆ ಅಸ್ವಸ್ಥರಾದಂತೆ ಕಂಡುಬಂದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು ತಮ್ಮ ಭಾಷಣವನ್ನು ಮಧ್ಯದಲ್ಲೇ ನಿಲ್ಲಿಸಿ ಅವರ ಆರೋಗ್ಯ ವಿಚಾರಿಸಿದ ಅಪರೂಪದ ಕ್ಷಣಕ್ಕೆ ಶೃಂಗಸಭೆ ಸಾಕ್ಷಿಯಾಗಿದೆ.

ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡುತ್ತಿದ್ದಾಗ, ಅವರ ಪಕ್ಕದಲ್ಲೇ ಕುಳಿತಿದ್ದ ಚೀನಾ ಅಧ್ಯಕ್ಷ ಶ್ಸಿ ಜಿನ್‌ಪಿಂಗ್ ಅವರು ತೀವ್ರ ಅಸ್ವಸ್ಥತೆಗೆ ಒಳಗಾದಂತೆ ಕಂಡುಬಂದರು. ಇದನ್ನು ತಕ್ಷಣವೇ ಗಮನಿಸಿದ ಪ್ರಧಾನಿ ಮೋದಿ, ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಬದಿಗಿಟ್ಟು ಮಾನವೀಯತೆಗೆ ಆದ್ಯತೆ ನೀಡಿದರು.

ಇದೇ ವೇಳೆ ತಮ್ಮ ಭಾಷಣವನ್ನು ಕ್ಷಣಕಾಲ ಸ್ಥಗಿತಗೊಳಿಸಿದ ಮೋದಿ ಅವರು, ಜಿನ್‌ಪಿಂಗ್ ಅವರ ಕಡೆಗೆ ತಿರುಗಿ, "ಎಲ್ಲವೂ ಸರಿಯಾಗಿದೆಯೇ? (Is It Okay?)" ಎಂದು ಅತ್ಯಂತ ಕಾಳಜಿಯಿಂದ ವಿಚಾರಿಸಿದರು.

ಪ್ರಧಾನಿ ಮೋದಿಯವರ ಪ್ರಶ್ನೆಗೆ ಚೀನಾ ಅಧ್ಯಕ್ಷರು ಹಸನ್ಮುಖಿಯಾಗಿ ತಲೆಯಾಡಿಸಿ, ತಾವು ಆರಾಮವಾಗಿರುವುದಾಗಿ ಸಂಜ್ಞೆ ಮಾಡಿದರು. ಜಿನ್‌ಪಿಂಗ್ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದ ನಂತರವಷ್ಟೇ ಮೋದಿ ಅವರು ತಮ್ಮ ಭಾಷಣವನ್ನು ಮುಂದುವರಿಸಿದರು.

ಭಾರತ ಮತ್ತು ಚೀನಾ ನಡುವೆ ಗಡಿ ವಿಷಯದಲ್ಲಿ ರಾಜತಾಂತ್ರಿಕ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಪ್ರಧಾನಿ ಮೋದಿ ಅವರು ತೋರಿದ ಈ ಔದಾರ್ಯ ಮತ್ತು ಜಾಗರೂಕತೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.