ಸೂರಜ್ಕುಂಡ್ ಮೇಳದಲ್ಲಿ ದುರಂತ: Tsunami ಸ್ವಿಂಗ್ ಕುಸಿತ; ರಕ್ಷಿಸಲು ತೆರಳಿದ ಪೊಲೀಸ್ ಇನ್ಸ್ಪೆಕ್ಟರ್ ದುರ್ಮರಣ, 13 ಜನರಿಗೆ ಗಾಯ; Video
ಶನಿವಾರ ಸಂಜೆ ಸುಮಾರು 6:15ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೇಳದಲ್ಲಿ ಅಳವಡಿಸಲಾಗಿದ್ದ ಜಾಯಿಂಟ್ ವ್ಹೀಲ್ನಲ್ಲಿ ಜನರು ಕುಳಿತು ಖುಷಿಪಡುತ್ತಿದ್ದರು. ಈ ನಡುವೆ ಅದರ ಒಂದು ಭಾಗ ಇದ್ದಕ್ಕಿದ್ದಂತೆ ಮುರಿಯಲಾರಂಭಿಸಿತು.

ಫರಿದಾಬಾದ್ (ಹರಿಯಾಣ): ಪ್ರಸಿದ್ಧ ಸೂರಜ್ಕುಂಡ್ ಕರಕುಶಲ ಮೇಳದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ‘ಸುನಾಮಿ (Tsunami) ಸ್ವಿಂಗ್’ (ದೈತ್ಯ ಜಾಯಿಂಟ್ ವ್ಹೀಲ್) ಕುಸಿದು ಬಿದ್ದಿದ್ದು, ಘಟನೆ ವೇಳೆ ಕರ್ತವ್ಯನಿರತ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಸಾವನ್ನಪ್ಪಿ 13ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಆಘಾತಕಾರಿ ಘಟನೆ ಶನಿವಾರ ಸಂಜೆ ನಡೆದಿದೆ.
ಶನಿವಾರ ಸಂಜೆ ಸುಮಾರು 6:15ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೇಳದಲ್ಲಿ ಅಳವಡಿಸಲಾಗಿದ್ದ ಜಾಯಿಂಟ್ ವ್ಹೀಲ್ನಲ್ಲಿ ಜನರು ಕುಳಿತು ಖುಷಿಪಡುತ್ತಿದ್ದರು. ಈ ನಡುವೆ ಅದರ ಒಂದು ಭಾಗ ಇದ್ದಕ್ಕಿದ್ದಂತೆ ಮುರಿಯಲಾರಂಭಿಸಿತು.
ಇದನ್ನು ಗಮನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಪ್ರಸಾದ್ ಅವರು ತಕ್ಷಣ ಜನರನ್ನು ರಕ್ಷಿಸಲು ಮತ್ತು ಪರಿಸ್ಥಿತಿ ನಿಭಾಯಿಸಲು ಮುಂದೆ ಧಾವಿಸಿದರು. ಆದರೆ, ವ್ಹೀಲ್'ನ ದೊಡ್ಡ ಭಾಗವೊಂದು ನೇರವಾಗಿ ಇನ್ಸ್ಪೆಕ್ಟರ್ ಅವರ ತಲೆ ಮತ್ತು ಮುಖಕ್ಕೆ ಬಲವಾಗಿ ಅಪ್ಪಳಿಸಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ (DC) ಆಯುಷ್ ಸಿನ್ಹಾ ಅವರು, ಇದು ಅತ್ಯಂತ ದುಃಖಕರ ಘಟನೆ. ಜಗದೀಶ್ ಪ್ರಸಾದ್ ಅವರು ಜನರ ಪ್ರಾಣ ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಘಟನೆಯಲ್ಲಿ ಒಟ್ಟು 13 ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



