ದೇಶ

ಕೇಂದ್ರ ಬಜೆಟ್ 2026: ವಿಬಿ-ಜಿ ರಾಮ್ ಜಿ ಯೋಜನೆಗೆ 95,000 ಕೋಟಿ ರೂ ಮೀಸಲು; ಮನ್ರೇಗಾಗೆ ಕೊಟ್ಟಿದ್ದು ಎಷ್ಟು ಗೊತ್ತಾ?

ವಿಬಿ-ಜಿ ರಾಮ್ ಜಿ ಜಾರಿಯಾಗುವವರೆಗೆ ಮನ್ರೇಗಾ ಯೋಜನೆ ಮುಂದುವರಿಯುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ

ಕೇಂದ್ರ ಬಜೆಟ್ 2026: ವಿಬಿ-ಜಿ ರಾಮ್ ಜಿ ಯೋಜನೆಗೆ 95,000 ಕೋಟಿ ರೂ ಮೀಸಲು; ಮನ್ರೇಗಾಗೆ ಕೊಟ್ಟಿದ್ದು ಎಷ್ಟು ಗೊತ್ತಾ?
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ಸಜ್ಜಾಗುತ್ತಿರುವಂತೆಯೇ ಕೇಂದ್ರ ಸರ್ಕಾರ ಇದಕ್ಕೆ 95,692.31 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಆದರೆ ಮನ್ರೇಗಾ ಯೋಜನೆಗೆ 30,000 ಕೋಟಿ ರೂ. ಮೀಸಲಿಡಲಾಗಿದೆ.

ವಿಕ್ಷಿತ್ ಭಾರತ್-ಗ್ಯಾರೆಂಟಿ ಫಾರ್ ರೋಜ್‌ಗಾರ್ ಆಜೀವಿಕಾ ಮಿಷನ್ (ಗ್ರಾಮೀಣ) ವಿಬಿ-ಜಿ ರಾಮ್ ಜಿ) ಯೋಜನೆ ವರ್ಷದಲ್ಲಿ 125 ದಿನಗಳ ಕೆಲಸದ ಭರವಸೆಯನ್ನು ನೀಡುತ್ತದೆ. ಮನ್ರೇಗಾ ಬದಲಿಗೆ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ವಿಬಿ-ಜಿ ರಾಮ್ ಜಿ ಜಾರಿಯಾಗುವವರೆಗೆ ಮನ್ರೇಗಾ ಯೋಜನೆ ಮುಂದುವರಿಯುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಬಜೆಟ್ ದಾಖಲೆಗಳ ಪ್ರಕಾರ, ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಒಟ್ಟು 1,94,368.81 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷ 1,86,995.61 ಕೋಟಿ ಮೀಸಲಿಡಲಾಗಿತ್ತು.

ಭೂಸಂಪನ್ಮೂಲ ಇಲಾಖೆಗೆ 2026-27ಕ್ಕೆ 2,654.33 ಕೋಟಿ ಮೀಸಲಿಡಲಾಗಿದೆ. 2025-26 ರಿಂದ ಪರಿಷ್ಕೃತ ಅಂದಾಜಿನ ಪ್ರಕಾರ MGNREGA ಯೋಜನೆಗೆ ಒಟ್ಟು 88,000 ಕೋಟಿ ರೂ.ವೆಚ್ಚ ಮಾಡಲಾಗಿದೆ. ಇನ್ನೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ (PMGSY) 2026-27 ಕ್ಕೆ 19,000 ಕೋಟಿ ರೂ. ಹಂಚಿಕೆಯಾಗಿದೆ. ಇದಕ್ಕೆ ಕಳೆದ ವರ್ಷ 11,000 ಕೋಟಿ ವೆಚ್ಚ ಮಾಡಲಾಗಿತ್ತು.

ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ಮಿಷನ್ (DAY-NRLM)ಗಾಗಿ 2026-27ಕ್ಕೆ ರೂ. 19,200 ಕೋಟಿಗಳ ಹಂಚಿಕೆಯಾಗಿದೆ. ಕಳೆದ ವರ್ಷ ಇದು ರೂ. 19,005 ಕೋಟಿಗಳಷ್ಟಿತ್ತು.

ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಗಾಗಿ ಈ ವರ್ಷ 54,916.70 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕಳೆದ ಬಜೆಟ್‌ನಲ್ಲಿ 54,832.00 ಕೋಟಿ ಮೀಸಲಿಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.