MGNREGA

ಮನ್ರೇಗಾ ಪುನರ್ ಸ್ಥಾಪನೆಗೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧಾರ..!
ಕೇಂದ್ರ ಸರ್ಕಾರ ಮನ್ರೇಗಾಗೆ ಬದಲಾಗಿ VB-G RAM-G ಕಾಯ್ದೆ ಜಾರಿಗೊಳಿಸಿರುವುದಕ್ಕೆ ರಾಜ್ಯ ಸರ್ಕಾರ ಈಗಾಗಲೇ ವಿರೋಧ ವ್ಯಕ್ತಪಡಿಸಿ, ಎಂಎನ್‌ಆರ್‌ಇಜಿಎ ಪುನರ್ ಸ್ಥಾಪನೆಗೆ ಆಗ್ರಹಿಸಿತ್ತು.

ಸಬ್ಸಿಡಿಗಳ ಮೇಲೆ ಅವಲಂಬಿತವಾಗುವಂತೆ ಮಾಡಿ ಜನರನ್ನು 'ಕನಸಿಲ್ಲದ ಹಾದಿ'ಯಲ್ಲಿ ನಡೆಸುತ್ತಿದ್ದೀರಿ: ಸುನೀಲ್ ಕುಮಾರ್
ಕತ್ತಲಿನ ದಾರಿಯಲ್ಲಾದರೂ ನಡೆಯಬಹುದು. ಆದರೆ, ಕನಸುಗಳಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ ಎಂಬ ಮಾತುಗಳನ್ನು ನಾಟಕಕಾರ ಗಿರೀಶ್ ಕಾರ್ನಾಡ್ ಅವರು ‘ಯಯಾತಿ’ ನಾಟಕದಲ್ಲಿ ಬರೆದಿದ್ದಾರೆ. ರಾಜ್ಯ ಸರ್ಕಾರ ಕನಸುಗಳಿಲ್ಲದ ದಾರಿಯಲ್ಲಿ ಜನರನ್ನು ಮುನ್ನಡೆಸುತ್ತಿದೆ.

BJP ಅಂತಿಮ ದಿನಗಳು ಸಮೀಪಿಸುತ್ತಿವೆ: MGNREGA ಬಚಾವೋ ಆಂದೋಲನದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್
ಹೊಸ ಯೋಜನೆಯಡಿಯಲ್ಲಿ, ರಾಜ್ಯಗಳು ಶೇ 40 ರಷ್ಟು ವೆಚ್ಚವನ್ನು ಭರಿಸಬೇಕಾಗುತ್ತದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ಸಹ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ.

ಮನ್ರೇಗಾ ರದ್ದತಿ ಒಗ್ಗಟ್ಟಾಗಿ ವಿರೋಧಿಸಿ: ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ ಈ ಹಿಂದೆ ಮನರೇಗಾ ಯೋಜನೆಯನ್ನು ಜಾರಿಗೊಳಿಸಿತ್ತು. ಇದು ಮಹಿಳೆಯರು, ಅದಿವಾಸಿಗಳು, ಕಾರ್ಮಿಕರಿಗೆ ಉದ್ಯೋಗ ನೀಡುವ ಉತ್ತಮ ಯೋಜನೆಯಾಗಿದ್ದು, ಗ್ರಾಮಸಭೆಗಳಲ್ಲಿ ಕಾಮಗಾರಿಗಳು ನಿರ್ಧಾರವಾಗುತ್ತಿತ್ತು.

ಮನರೇಗಾ ರದ್ದು ಮಾಡಿ ಕಾರ್ಮಿಕರ ಸ್ವಾಭಿಮಾನದ ಬದುಕು ಕಸಿದ ಕೇಂದ್ರ: ಬಿಜೆಪಿ ಆಡಳಿತ ರಾಜ್ಯಗಳಲ್ಲೇ ನೂತನ ಕಾಯ್ದೆ ಜಾರಿ ಅಸಾಧ್ಯ; ಡಿ.ಕೆ ಶಿವಕುಮಾರ್
ಈಗ ಹೊಸ ಕಾಯ್ದೆಯಲ್ಲಿ ಗುತ್ತಿಗೆದಾರನ ಬಳಿ ಕೆಲಸ ಮಾಡಿ ಎಂದು ತಿಳಿಸಿದ್ದಾರೆ. ಪಂಚಾಯಿತಿ ಮಟ್ಟದ ಕೆಲಸಗಳನ್ನು ದೆಹಲಿಯಲ್ಲಿ ಕುಳಿತು ಹೇಗೆ ನಿರ್ಧಾರ ಮಾಡಲಾಗುತ್ತದೆ. ಎಐ ತಂತ್ರಜ್ಞಾನದ ಮೂಲಕ ಎಲ್ಲೆಲ್ಲಿ ಯಾವ ಕೆಲಸ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡುತ್ತಾರಂತೆ.

ಕೇಂದ್ರ ಬಜೆಟ್ 2026: ವಿಬಿ-ಜಿ ರಾಮ್ ಜಿ ಯೋಜನೆಗೆ 95,000 ಕೋಟಿ ರೂ ಮೀಸಲು; ಮನ್ರೇಗಾಗೆ ಕೊಟ್ಟಿದ್ದು ಎಷ್ಟು ಗೊತ್ತಾ?
ವಿಬಿ-ಜಿ ರಾಮ್ ಜಿ ಜಾರಿಯಾಗುವವರೆಗೆ ಮನ್ರೇಗಾ ಯೋಜನೆ ಮುಂದುವರಿಯುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ

ಮನ್ರೇಗಾ ಯೋಜನೆ ಕುರಿತು ಚರ್ಚೆ: ವಿಧಾನಮಂಡಲ ಅಧಿವೇಶನ 2 ದಿನ ವಿಸ್ತರಣೆ?
ಶಾಸಕರು ಈ ಕಾಯ್ದೆ ಕುರಿತಾದ ಚರ್ಚೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ನರೇಗಾ ವಿಷಯಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ. ಆದರೆ, ಚರ್ಚೆಗೆ ಅವಕಾಶ ಸಿಕ್ಕಿಲ್ಲ.

'ಮನ್ರೇಗಾ' ಕೈಬಿಟ್ಟ ಕ್ರಮ ವಿರೋಧಿಸಿ ಕಾಂಗ್ರೆಸ್ ಲೋಕ್ ಭವನ್ ಚಲೋ: ಕೇಂದ್ರ ವಿರುದ್ಧ ವಾಗ್ದಾಳಿ; ಸಿಎಂ-ಡಿಸಿಎಂ ವಶಕ್ಕೆ ಪಡೆದು ಬಿಡುಗಡೆ
ಕೇಂದ್ರ ಸರ್ಕಾರವು ಗ್ರಾಮೀಣ ಉದ್ಯೋಗ ಖಾತರಿ ಚೌಕಟ್ಟನ್ನು ಕಿತ್ತುಹಾಕುತ್ತಿದೆ. ಪಂಚಾಯತ್‌ಗಳ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದು ಆರೋಪಿಸಿ ಲೋಕ ಭವನದ ಕಡೆಗೆ ತೆರಳಲು ಯತ್ನಿಸಿದ ಕಾಂಗ್ರೆಸ್ ನಾಯಕರನ್ನು ಪೊಲೀಸರು ತಡೆದರು.

ಮನ್ರೇಗಾ ಹೆಸರು ಬದಲಾವಣೆಗೆ ವಿರೋಧ: ನಾಳೆ ಕಾಂಗ್ರೆಸ್ನಿಂದ ರಾಜಭವನ ಚಲೋ- DCM ಡಿ.ಕೆ ಶಿವಕುಮಾರ್
ಮಂಗಳವಾರ ಫ್ರೀಡಂಪಾರ್ಕ್ನಿಂದ ರಾಜಭವನದತ್ತ ನಡೆಯುವ ಈ ಪ್ರತಿಭಟನೆಯಲ್ಲಿ ರಾಜ್ಯಾದ್ಯಂತ ಎಲ್ಲ ಶಾಸಕರು, ಎಂಎಲ್ಸಿಗಳು ಹಾಗೂ ನರೇಗಾ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

