ನನ್ನ ಯೌವ್ವನದ ದಿನಗಳ ಬಗ್ಗೆ ತಿಳಿಯಲು ನನ್ನ ಬೆಡ್‌ರೂಂನಲ್ಲಿ ಬಾಬಾ ರಾಮದೇವ್ ಬಾವಲಿಯಂತೆ ನೇತಾಡುತ್ತಿದ್ದರೇ?: ಕಂಗನಾ ರಣಾವತ್
ರಾಮ್ ದೇವ್ ಅವರ ವ್ಯಾಪಾರ ಹಿತಾಸಕ್ತಿ ಅವರನ್ನು ಸನಾತನ ತತ್ವಶಾಸ್ತ್ರದ ಮೂಲ ಸಿದ್ಧಾಂತಗಳಿಂದ ದೂರ ಕೊಂಡೊಯ್ದಿವೆ ಎಂದು ನಾನು ನಂಬುವುದಾಗಿ ಹೇಳಿದರು.

ನವದೆಹಲಿ: ತಮ್ಮ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು "ನನ್ನ ಮಲಗುವ ಕೋಣೆಯಲ್ಲಿ ಬಾಬಾ ರಾಮ್ ದೇವ್ ಬಾವಲಿಯಂತೆ ನೇತಾಡುತ್ತಿದ್ದರೇ ಎಂದು ನಟಿ ಹಾಗೂ ಬಿಜೆಪಿ ಸಂಸದೆ ಕಂಗಮಾ ರಣಾವತ್ ಪ್ರಶ್ನಿಸಿದ್ದಾರೆ.
ಬಾಬಾ ರಾಮದೇವ್ ನನ್ನ ಮಲಗುವ ಕೋಣೆಯಲ್ಲಿ ಬಾವಲಿಯಂತೆ ನೇತಾಡುತ್ತಿದ್ದರೇ? ಅವರು ನನ್ನ ಯೌವನದಲ್ಲಿ ನನ್ನನ್ನು ನೋಡಿದ್ದಾರೆಯೇ? ಅವರು ನಿಖರವಾಗಿ ಏನು ನೋಡಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಅವರು ಏನು ನೋಡಿದ್ದಾರೆಂದು ಹೇಳಬೇಕು ಎಂದು ಅವರು ಹೇಳಿದರು.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಕಂಗನಾ ಅವರು ಯೋಗ ಮತ್ತು ಆಯುರ್ವೇದದಿಂದ ವ್ಯವಹಾರಕ್ಕೆ ರಾಮದೇವ್ ಅವರ ಬದಲಾವಣೆಯನ್ನು ಪ್ರಶ್ನಿಸಿದರು, ನನಗೆ ವ್ಯಕ್ತಿತ್ವದ ಬಗ್ಗೆ ರಾಮ್ ದೇವ್ ಪಾಠ ಹೇಳಬಾರದು ಎಂದು ಕಂಗನಾ ಹೇಳಿದ್ದಾರೆ.
ಸನಾತನ ಸಿದ್ಧಾಂತದೊಂದಿಗೆ ಗುರುತಿಸಿಕೊಳ್ಳುವ ರಾಮ್‌ದೇವ್ ಅವರು ನಿಮ್ಮನ್ನು ವಿರೋಧಿಸುವ ಹಂತಕ್ಕೆ ಹೇಗೆ ಬಂದರು? ಎಂಬ ಪ್ರಶ್ನೆಗೆ ಉತ್ತರಿಸಿದ ಕಂಗನಾ, ರಾಮ್ ದೇವ್ ಅವರ ವ್ಯಾಪಾರ ಹಿತಾಸಕ್ತಿ ಅವರನ್ನು ಸನಾತನ ತತ್ವಶಾಸ್ತ್ರದ ಮೂಲ ಸಿದ್ಧಾಂತಗಳಿಂದ ದೂರ ಕೊಂಡೊಯ್ದಿವೆ ಎಂದು ನಾನು ನಂಬುವುದಾಗಿ ಹೇಳಿದರು.
ಅವರ ಸ್ವದೇಶಿ ಚಳವಳಿ ಆರಂಭವಾದಾಗ ಸರ್ಕಾರವು ಅವರಿಗೆ ಸಾಕಷ್ಟು ಪ್ರೋತ್ಸಾಹ ನೀಡಿತ್ತು. ಆದರೆ, ಅವರು ಬಂಡವಾಳಶಾಹಿಯತ್ತ ಸಾಗಿದ್ದಾರೆ ಎಂದು ನನಗೆ ಅನಿಸುತ್ತದೆ. ರಾಮದೇವ್ ಅವರು ಆಯುರ್ವೇದ, ಗಿಡಮೂಲಿಕೆಗಳು ಮತ್ತು ಯೋಗವನ್ನು ಮೀರಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ ಎಂದು ಕಂಗನಾ ಟೀಕಿಸಿದ್ದಾರೆ.
ಆಯುರ್ವೇದ, ಗಿಡಮೂಲಿಕೆಗಳು ಮತ್ತು ಯೋಗ ಕ್ಷೇತ್ರಗಳಲ್ಲಿ ಅವರಿಗೆ ದೊರೆತ ಪ್ರೋತ್ಸಾಹದಿಂದಾಗಿ ಇದೀಗ ಅವರು ಒಳಉಡುಪು ಮತ್ತು ಬನಿಯನ್‌ಗಳನ್ನು ಮಾರಾಟ ಮಾಡುವ ವ್ಯವಹಾರಕ್ಕೂ ಮುಂದಾಗಿದ್ದಾರೆ ಎಂದು ಹೇಳಿದರು. ರಾಮ್‌ದೇವ್ ಅವರನ್ನು ಸಂಪೂರ್ಣ ಉದ್ಯಮಿ ಎಂದು ಕರೆದ ಕಂಗನಾ, ಉದ್ಯಮಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನೀವು ಏನಾಗಿಲ್ಲವೋ ಆ ವೇಷವನ್ನು ಧರಿಸಬೇಡಿ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



