ರಕ್ಷಾ ಬಂಧನ ಸಂದರ್ಭದಲ್ಲಿ ಶಾಂತಿಯ ಜಪ: ಬಾಬಾ ರಾಮದೇವ್, ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಾದ್ರಾ?
ಕಂಗನಾ ಜೊತೆಗಿನ ವಿವಾದವನ್ನು ಕೊನೆಗೊಳಿಸಬೇಕೆಂದು ಆಪೇಕ್ಷಿಸುವ ಬಾಬಾ ರಾಮದೇವ್ ವೀಡಿಯೊ ವೈರಲ್ ಆದ ಕಂಗನಾ, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರಕ್ಷಾ ಬಂಧನದ ಸಂದರ್ಭದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಯೋಗು ಗುರು ಬಾಬಾ ರಾಮದೇವ್ ತಮ್ಮ ಇತ್ತೀಚಿನ ಜಗಳದಿಂದ ಹಿಂದೆ ಸರಿದಿದ್ದು, ರಾಜೀ ಮಾಡಿಕೊಂಡಂತೆ ಕಂಡುಬಂದಿದೆ. ರಕ್ಷಾ ಬಂಧನ ಸಂದರ್ಭದಲ್ಲಿ ಕಂಗನಾ ರಣಾವತ್ ಅವರಿಗೆ ಸಿಹಿತಿಂಡಿಗಳು ಗಿಫ್ಟ್ ವೊಂದನ್ನು ಕಳುಹಿಸಿರುವುದಾಗಿ ರಾಮ್ ದೇವ್ ಹೇಳಿಕೆ ನೀಡಿದ್ದ ಬೆನ್ನಲ್ಲೇ, ಅದನ್ನು ಸ್ವೀಕರಿಸುವುದಾಗಿ ಕಂಗನಾ ಹೇಳಿದ್ದು, ಮಾತುಕತೆ ಮೂಲಕ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ.
ಕಂಗನಾ ಜೊತೆಗಿನ ವಿವಾದವನ್ನು ಕೊನೆಗೊಳಿಸಬೇಕೆಂದು ಆಪೇಕ್ಷಿಸುವ ಬಾಬಾ ರಾಮದೇವ್ ವೀಡಿಯೊ ವೈರಲ್ ಆದ ಕಂಗನಾ, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರಕ್ಷಾ ಬಂಧನ ಹಬ್ಬವು ಹಿಂದಿನ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಇತರರನ್ನು ಕ್ಷಮಿಸುವ ಸಮಯ ಎಂದು ಅವರು ಹೇಳಿದ್ದಾರೆ. ಮಾತುಕತೆ ಮೂಲಕ ವಿವಾದಗಳನ್ನು ಬಗೆಹರಿಸಿಕೊಳ್ಳುವ ಬಗ್ಗೆ ರಾಮದೇವ್ ಅವರ ಸಂದೇಶವನ್ನು ಸಹ ಅವರು ಸ್ವಾಗತಿಸಿದ್ದಾರೆ.
ರಾಮ್ದೇವ್ ಅವರ ಇಂಗಿತದ ಹಿಂದಿನ ಸಿಹಿತಿಂಡಿಗಳು ಮತ್ತು ಭಾವನೆಗಳನ್ನು ಸ್ವೀಕರಿಸಿದ ನಟಿ, "ಆಜ್ ರಕ್ಷಾಬಂಧನ್ ಕೆ ದಿನ್ ಮೈನ್ ಉಂಕಿ ಮಿಥಾಯ್ ಔರ್ ಬಡೇ ಭಾಯಿ ಕಾ ಪ್ರೇಮ್ ದೋನೋ ಸ್ವೀಕಾರ್ ಕಾರ್ತಿ ಹೂಂ. ಬಹುತ್ ಧಾನ್ಯವಾದ್ ಈಶ್ವರ್ ಆಪ್ಕೋ ಲಂಬಿ ಆಯು ದೇ ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಬಾಬಾ ರಾಮ್ ದೇವ್, ಕಂಗನಾಗೆ ರಕ್ಷಾ ಬಂಧನದ ಶುಭಾಶಯ ಕೋರಿದ್ದರು. ಅಲ್ಲದೇ ಈವಿವಾದದಿಂದ ಹೊರಬರಲು ಬಯಸುವುದಾಗಿ ಹೇಳಿದ್ದರು. ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ನಂತರ, ಕಂಗನಾ ಅವರು ಅಲ್ಲಿನ ಯುವ ಪ್ರತಿಭಟನಾಕಾರರ ಗುಂಪೊಂದನ್ನು ಟೀಕಿಸಿದ ಬಳಿಕ ಅವರಿಗೂ ರಾಮ್ದೇವ್ ಅವರಿಗೂ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಪ್ರತಿಭಟನೆಯ ವಿಡಿಯೋಗಳಿಗೆ ಪ್ರತಿಕ್ರಿಯಿಸಿದ ಕಂಗನಾ, ಪ್ರತಿಭಟನಾಕಾರರನ್ನು "ಜನರೇಷನ್ ಗಟರ್"ಎಂದಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ ರಾಮ್ದೇವ್, ಯುವ ಪೀಳಿಗೆಯ ಕುರಿತಾದ ಕಂಗನಾ ಅವರ ಟೀಕೆಯನ್ನು ಆಕ್ಷೇಪಿಸಿದ್ದಲ್ಲದೆ, ಅವರ ಸ್ವಂತ ಹಿನ್ನೆಲೆಯ ಬಗ್ಗೆಯೂ ಪ್ರಶ್ನಿಸಿದ್ದರು. ಆಗಿನಿಂದ ಒಂದಲ್ಲಾ ಒಂದು ಹೇಳಿಕೆಯಿಂದ ಇಬ್ಬರ ನಡುವೆ ಟೀಕೆ, ವಾಕ್ಸಮರ ಮುಂದುವರೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



