ದೇಶ

ಕೋಳಿ ಸಾಕಣೆ ಹೆಸರಲ್ಲಿ ನಡೀತಿತ್ತು ಡ್ರಗ್ಸ್ ದಂಧೆ; ಗಡಿ ಭಾಗದಲ್ಲಿ ಖಾಕಿ ಭರ್ಜರಿ ಬೇಟೆ; 1 ಕೋಟಿ ರೂ ಮೌಲ್ಯದ ನಿಷೇಧಿತ ಡ್ರಗ್ಸ್ ವಶ

Kolhapur Drug Bust: ಕೋಳಿ ಸಾಕಣೆ ಕೇಂದ್ರದ ಹೆಸರಲ್ಲಿ ಗುಟ್ಟಾಗಿ ನಡೆಯುತ್ತಿದ್ದ ಭಾರಿ ದಂಧೆಯೊಂದು ಬಯಲಾಗಿದೆ. ಹೊರನೋಟಕ್ಕೆ ಹಳ್ಳಿಯ ಸಾಮಾನ್ಯ ಕೋಳಿ ಫಾರಂನಂತೆ ಕಂಡರೂ, ಒಳಗೆ ಕಾಲಿಟ್ಟ ಪೊಲೀಸರಿಗೆ ಕಂಡಿದ್ದು ನೂರಾರು ಕೋಟಿ ಮೌಲ್ಯದ ಅಪಾಯಕಾರಿ ಮಾದಕ ವಸ್ತುಗಳ ತಯಾರಿಕಾ ಜಾಲ. ಆ ಕುರಿತ ವರದಿ ಇಲ್ಲಿದೆ:

ಕೋಳಿ ಸಾಕಣೆ ಹೆಸರಲ್ಲಿ ನಡೀತಿತ್ತು ಡ್ರಗ್ಸ್ ದಂಧೆ; ಗಡಿ ಭಾಗದಲ್ಲಿ ಖಾಕಿ ಭರ್ಜರಿ ಬೇಟೆ; 1 ಕೋಟಿ ರೂ ಮೌಲ್ಯದ ನಿಷೇಧಿತ ಡ್ರಗ್ಸ್ ವಶ
ಕೋಳಿ ಸಾಕಣೆ ಹೆಸರಲ್ಲಿ ನಡೀತಿತ್ತು ಡ್ರಗ್ಸ್ ದಂಧೆ — Online Desk
Published On :

ಚಂದಗಡ (ಮಹಾರಾಷ್ಟ್ರ): ಹೊರಗಡೆ ನೋಡಿದರೆ ಸಾಮಾನ್ಯ ಕೋಳಿ ಸಾಕಣೆ ಕೇಂದ್ರ, ಆದರೆ ಅದರ ಒಳಗಡೆ ನಡೆಯುತ್ತಿದ್ದ ಕರಾಳ ದಂಧೆ ಮಾತ್ರ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಗಡ್ ಬಳಿ ಕೋಳಿ ಫಾರಂನ ಹೆಸರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮೆಫೆಡ್ರೋನ್ ಡ್ರಗ್ಸ್ ಕಾರ್ಖಾನೆಯನ್ನು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಭೇದಿಸಿದ್ದು, ಬರೋಬ್ಬರಿ 1.13 ಕೋಟಿ ರೂ. ಮೌಲ್ಯದ ನಿಷೇಧಿತ ಡ್ರಗ್ಸ್ ಹಾಗೂ ರಾಸಾಯನಿಕಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಫಾರಂ ಮಾಲೀಕ ಸೇರಿ 7 ಜನರನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ರಾಜಗೋಳಿ ಗ್ರಾಮದಲ್ಲಿ ಕೋಳಿ ಫಾರ್ಮ್ ಹೆಸರಿನಲ್ಲಿ ನಡೆಯುತ್ತಿದ್ದ ಬೃಹತ್ ಡ್ರಗ್ಸ್ ಫ್ಯಾಕ್ಟರಿಯನ್ನು ಮಹಾರಾಷ್ಟ್ರದ ಆಂಟಿ-ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ . ಇನ್ನು, ಪಪ್ಪು ವಿಠ್ಠಲ್ ಮಾಲತ್ವಾಡರ್ ಎಂಬುವವರಿಗೆ ಸೇರಿದ ಈ ಕೋಳಿ ಫಾರ್ಮ್‌ನಲ್ಲಿ ಆರೋಪಿಗಳು ರಹಸ್ಯ ಪ್ರಯೋಗಾಲಯ ನಡೆಸಿ, ಅಲ್ಲಿಂದ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಿಗೆ ಎಂಡಿಎಂಎ (MDMA/Mephedrone) ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಜೊತೆಗೆ, ದಾಳಿಯ ವೇಳೆ ಅಂದಾಜು 1.13 ಕೋಟಿ ರೂಪಾಯಿ ಮೌಲ್ಯದ ಸಿದ್ಧಪಡಿಸಿದ ಡ್ರಗ್ಸ್ ಹಾಗೂ ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 208 ಗ್ರಾಂ ಸಿದ್ಧಪಡಿಸಿದ ಮೆಫೆಡ್ರೋನ್, 70 ಲೀಟರ್ ಮಾನೋಮಿಥೈಲಮೈನ್ ದ್ರಾವಣ, 2-ಬ್ರೋಮೋ ಪೌಡರ್, ಡಿಜಿಟಲ್ ಥರ್ಮಾಮೀಟರ್, ಹೈಡ್ರೋಮೀಟರ್, ಟೆಸ್ಟ್ ಟ್ಯೂಬ್, ಗ್ರಿಲ್ಲರ್ ಹಾಗೂ ಮಿಕ್ಸಿಂಗ್ ಯಂತ್ರಗಳು ಸೇರಿವೆ.

ನೆಟ್‌ವರ್ಕ್ ಪತ್ತೆಯಾಗಿದ್ದು ಹೇಗೆ?

ಈ ಹಿಂದೆ ಮಾದಕ ದ್ರವ್ಯ ಪ್ರಕರಣದಲ್ಲಿ ಥಾಣೆಯ ಮೀರಾ ರೋಡ್ ನಿವಾಸಿ ಇರ್ಫಾನ್ ಸಲೀಂ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆತ ನೀಡಿದ ಸುಳಿವನ್ನು ಆಧರಿಸಿ ತನಿಖಾಧಿಕಾರಿ ನಿತಿನ್ ಬೋಧೆ ನೇತೃತ್ವದ ಪೊಲೀಸ್ ತಂಡ ಈ ಅಡ್ಡೆಯ ಮೇಲೆ ಕಾರ್ಯಾಚರಣೆ ನಡೆಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.