ದೇಶ

ಸಿಜೆಐ ಸೂರ್ಯಕಾಂತ್ ಐತಿಹಾಸಿಕ ತೀರ್ಪು: 105 ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿ ಬರೋಬ್ಬರಿ ನೂರು ವರ್ಷ ದಾಟಿದ ಮೇಲೂ ಜೈಲಿನ ಕತ್ತಲೆಯಲ್ಲೇ ಇರಬೇಕೆ? ಕಾನೂನಿನ ಕಠಿಣ ನಿಯಮಗಳಿಗಿಂತ ಮಾನವೀಯತೆಯೇ ಮಿಗಿಲು ಎಂದು ಸಾಬೀತುಪಡಿಸಿದ ಅಪರೂಪದ ಘಟನೆಯೊಂದು ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ದಾಖಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಸಿಜೆಐ ಸೂರ್ಯಕಾಂತ್ ಐತಿಹಾಸಿಕ ತೀರ್ಪು: 105 ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆಯಿಂದ ಮುಕ್ತಿ ನೀಡಿದ ಸುಪ್ರೀಂ ಕೋರ್ಟ್
ಶತಾಯುಷಿಗೆ ಜೈಲಿನಿಂದ ಮುಕ್ತಿ — Online Desk
Published On :

ನವದೆಹಲಿ: ಭಾರತೀಯ ನ್ಯಾಯಾಂಗ ನ್ಯಾಯ ಸಿಗೋದು ಸ್ವಲ್ಪ ಲೇಟ್! ಆದರೆ, ಕೊಲೆ ಪ್ರಕರಣವೊಂದರಲ್ಲಿ ಕೊಲೆ ಮಾಡಿರುವುದು ಪ್ರೂವ್ ಆಗಿದ್ದರು ಕೂಡ ಆತನ ಮೇಲಿನ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಮನ್ನಾ ಮಾಡಿರುವ ಘಟನೆ ಮನ್ನಾ ಮಾಡಿದ್ದು, ಆತನನ್ನು ಮುಕ್ತ ಮನುಷ್ಯನನ್ನಾಗಿ ಬಿಡುಗಡೆಗೊಳಿಸಲು ಐತಿಹಾಸಿಕ ಆದೇಶ ನೀಡಿದೆ. ಹೌದು, 105 ವರ್ಷದ ವೃದ್ಧ ರಸಿಕ್ ಚಂದ್ರ ಮಂಡಲ್ ಅವರಿಗೆ ಸರ್ವೋಚ್ಚ ನ್ಯಾಯಾಲಯ ಮಾನವೀಯತೆಯ ಆಧಾರದ ಮೇಲೆ ಜೈಲು ಶಿಕ್ಷೆಯಿಂದ ಶಾಶ್ವತ ಮುಕ್ತಿ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರಸಿಕ್ ಚಂದ್ರ ಮೊಂಡಲ್ ಎಂಬುವವರು 1988 ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯವು 1994 ರಲ್ಲಿ ಇವರನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಅಂದಿನಿಂದ ಇವರು ಜೈಲು ಪಾಲಾಗಿದ್ದು, ಬಹುತೇಕ ಮೂರು ದಶಕಗಳ ಕಾಲ ಜೈಲಿನಲ್ಲಿಯೇ ಕಳೆದಿದ್ದರು. ತಮಗೆ ವಯಸ್ಸಾಗಿರುವ ಕಾರಣ ಅವಧಿಗೂ ಮುನ್ನವೇ ಬಿಡುಗಡೆ ಮಾಡಬೇಕೆಂದು ಕೋರಿ ಇವರು 2020 ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಶಿಕ್ಷೆ ಮನ್ನಾ ಮಾಡಿದ ಸರ್ವೋಚ್ಚ ನ್ಯಾಯಾಲಯ

ನವೆಂಬರ್ 2024 ರಲ್ಲಿ ಸುಪ್ರೀಂ ಕೋರ್ಟ್ ಇವರಿಗೆ ಮಧ್ಯಂತರ ಜಾಮೀನು ನೀಡಿ ಜೈಲಿನಿಂದ ಬಿಡುಗಡೆ ಮಾಡಿತ್ತು. ಇದರ ನಡುವೆ, ಜೀವಾವಧಿ ಶಿಕ್ಷೆಯ ಅವಧಿ ಇನ್ನೂ ಬಾಕಿ ಉಳಿದಿದ್ದರೂ, ಈಗ ಆ ಆದೇಶವನ್ನು ನ್ಯಾಯಾಲಯವು ಅಂತಿಮ ಮತ್ತು ಶಾಶ್ವತ ಆದೇಶವಾಗಿ ಪರಿವರ್ತಿಸಿದೆ. ಅದರಂತೆ, ಅವರ 105 ವರ್ಷದ ವಯಸ್ಸನ್ನು ಗೌರವಿಸಿ ಉಳಿದ ಶಿಕ್ಷೆಯನ್ನು ಮನ್ನಾ ಮಾಡಲಾಗಿದೆ. ಇದರೊಂದಿಗೆ, "ಇನ್ನು ಮುಂದೆ ಮಂಡಲ್ ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಕಸ್ಟಡಿಗೆ ಅಥವಾ ಜೈಲಿಗೆ ತೆಗೆದುಕೊಳ್ಳುವಂತಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

3 ದಶಕಗಳ ಕಾನೂನು ಹೋರಾಟದ ಅಂತ್ಯ

ರಸಿಕ್ ಚಂದ್ರ ಮಂಡಲ್ ಅವರು ತಾವು ನಿರಪರಾಧಿ ಎಂದು ಸಾಬೀತುಪಡಿಸಲು ಮೊದಲು ಕಲ್ಕತ್ತಾ ಹೈಕೋರ್ಟ್, ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2020 ರಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣ ನೀಡಿ ಅವಧಿಗೂ ಮುನ್ನ ಬಿಡುಗಡೆಗಾಗಿ ಅರ್ಜಿ ಸಲ್ಲಿಸಿದ್ದರು. ಕೊನೆಗೂ 1988 ರಿಂದ ಆರಂಭವಾಗಿದ್ದ ಸುಮಾರು 38 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ಸುಪ್ರೀಂ ಕೋರ್ಟ್‌ನಿಂದ ಪೂರ್ಣವಿರಾಮ ಬಿದ್ದಿದೆ. ಇದರೊಂದಿಗೆ, ಭಾರತದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಅತ್ಯಂತ ಹಿರಿಯ ವಯಸ್ಸಿನ ಕೈದಿಯೊಬ್ಬರಿಗೆ ವಯಸ್ಸಿನ ಆಧಾರದ ಮೇಲೆ ಮಾನವೀಯತೆಯ ಮುಕ್ತಿ ಸಿಕ್ಕಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.