ದೇಶ

'ಅಪ್ಪಿಕೋ' ವಿದೇಶಾಂಗ ನೀತಿ: ಮೋದಿ ಕೆಣಕಿದ ರಾಹುಲ್ ಗಾಂಧಿ; ಇಂದಿರಾ ಗಾಂಧಿ ವಿಡಿಯೋ ಮೂಲಕ ಬಿಜೆಪಿ ತಿರುಗೇಟು!

ಬಿಜೆಪಿ ಸಂಸದ ದುಬೆ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಅವರು ಕ್ಯೂಬನ್ ಕ್ರಾಂತಿಕಾರಿ ಫಿಡೆಲ್ ಕ್ಯಾಸ್ಟ್ರೋ ಮತ್ತು ಪ್ಯಾಲೆಸ್ಟೀನಿಯನ್ ನಾಯಕ ಯಾಸರ್ ಅರಾಫತ್ ಅವರನ್ನು ಭೇಟಿಯಾದ ಸಂದರ್ಭದ ಫೋಟೋಗಳನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

'ಅಪ್ಪಿಕೋ' ವಿದೇಶಾಂಗ ನೀತಿ: ಮೋದಿ ಕೆಣಕಿದ ರಾಹುಲ್ ಗಾಂಧಿ; ಇಂದಿರಾ ಗಾಂಧಿ ವಿಡಿಯೋ ಮೂಲಕ ಬಿಜೆಪಿ ತಿರುಗೇಟು!
ರಾಹುಲ್ ಗಾಂಧಿ - ಇಂದಿರಾ ಗಾಂಧಿ
Published On :

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವ ರೀತಿಯನ್ನು ಟೀಕಿಸಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕನ ಕುಟುಂಬದ ರಾಜತಾಂತ್ರಿಕ ಅಪ್ಪುಗೆಯ ಇತಿಹಾಸವನ್ನು ಉಲ್ಲೇಖಿಸಿದ್ದಾರೆ.

ಬಿಜೆಪಿ ಸಂಸದ ದುಬೆ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಅವರು ಕ್ಯೂಬನ್ ಕ್ರಾಂತಿಕಾರಿ ಫಿಡೆಲ್ ಕ್ಯಾಸ್ಟ್ರೋ ಮತ್ತು ಪ್ಯಾಲೆಸ್ಟೀನಿಯನ್ ನಾಯಕ ಯಾಸರ್ ಅರಾಫತ್ ಅವರನ್ನು ಭೇಟಿಯಾದ ಸಂದರ್ಭದ ಫೋಟೋಗಳನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಎಂಟು ವರ್ಷಗಳ ಹಿಂದೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡ ವೈರಲ್ ಫೋಟೋವನ್ನು ಸಹ ಪೋಸ್ಟ್ ಮಾಡಿರುವ ದುಬೆ, "ರಾಹುಲ್ ಗಾಂಧಿ ಇದನ್ನು ಉಸಿರುಗಟ್ಟಿಸುವ ಸಂವೇದನೆ ಎಂದು ಕರೆಯುತ್ತಾರೆಯೇ ಅಥವಾ ಇದು ಕಾಮದ ಬೆಂಕಿಯೇ?" ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ಇಂದಿರಾ ಗಾಂಧಿ ಹಾಗೂ ಫಿಡೆಲ್ ಕ್ಯಾಸ್ಟ್ರೋ ಭೇಟಿಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದಕ್ಕು ಮುನ್ನ ಕಾಂಗ್ರೆಸ್ ಸಂಘಟನಾ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಮೋದಿಯವರಿಗೆ ವಿದೇಶಾಂಗ ನೀತಿ ಎಂದರೆ ಏನು ಎನ್ನುವುದನ್ನು ತೋರಿಸುವುದಾಗಿ, ವೇದಿಕೆಯಲ್ಲಿದ್ದ ಸಂದೀಪ್ ದೀಕ್ಷಿತ್ ಅವರತ್ತ ನಡೆದು ಆಲಿಂಗಿಸಿಕೊಂಡಿದ್ದರು. ಮೋದಿಯವರ ಹಾವಭಾವದ ಮೂಲಕ, ಮೋದಿಯವರ ವಿದೇಶಾಂಗ ನೀತಿಯನ್ನು ಗೇಲಿ ಮಾಡಿದ್ದರು. ʻವಿದೇಶಾಂಗ ನೀತಿ ಎಂದರೆ ವಿದೇಶಿ ನಾಯಕರನ್ನ ಅಪ್ಪಿಕೊಳ್ಳುವುದು ಎಂಬ ಕಲ್ಪನೆ ಅವರಿಗೆ ಎಲ್ಲಿಂದ ಬಂತು ಎಂಬುದು ನನಗೆ ಅರ್ಥವಾಗುವುದಿಲ್ಲʼ ಎಂದು ವ್ಯಂಗ್ಯವಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.