BJP-RSS 'ಜೋಕರ್ ಗಳ ಗುಂಪು' ಎಂದ ರಾಹುಲ್ ಗಾಂಧಿ! 'ಅಪ್ಪಿಕೊಳ್ಳುವ' ಪ್ರಧಾನಿ ಮೋದಿಯ ವಿದೇಶಾಂಗ ನೀತಿಯ ಬಗ್ಗೆ ಲೇವಡಿ; Video
ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿದ್ದು, ಈಗ ಅದು "ದೊಡ್ಡ ಬಂಡವಾಳಶಾಹಿಗಳಾದ ಅದಾನಿ ಮತ್ತು ಅಂಬಾನಿ ಅವರ ಸಾಧನ"ವಾಗಿ ಮಾರ್ಪಟ್ಟಿದೆ ಎಂದರು.

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು'ಜೋಕರ್ ಗಳ ಗುಂಪು' ಎಂದು ಕರೆದಿದ್ದು, ಅವರಿಗೆ ಭಾರತದ ಬಗ್ಗೆ ಅಷ್ಟಾಗಿ ಅರಿವಿಲ್ಲ ಎಂದು ಹೇಳಿದ್ದಾರೆ, ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯು ಕೇವಲ ವಿಶ್ವ ನಾಯಕರನ್ನು ಅಪ್ಪಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ ಎಂದು ಅವರು ಟೀಕಿಸಿದ್ದಾರೆ.
ನವದೆಹಲಿಯಲ್ಲಿ ನಡೆದ 'ರಚನಾತ್ಮಕ ಕಾಂಗ್ರೆಸ್' (Rachnatmak Congress) ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿದ್ದು, ಈಗ ಅದು "ದೊಡ್ಡ ಬಂಡವಾಳಶಾಹಿಗಳಾದ ಅದಾನಿ ಮತ್ತು ಅಂಬಾನಿ ಅವರ ಸಾಧನ"ವಾಗಿ ಮಾರ್ಪಟ್ಟಿದೆ ಎಂದರು.
ವಿವಿಧ ವಿಷಯಗಳಲ್ಲಿ ಮಾಧ್ಯಮಗಳು ಸರ್ಕಾರದ ನಿಲುವನ್ನೇ ಅನುಸರಿಸುತ್ತಿರುವ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ, ಮಾಧ್ಯಮಗಳ ಮಿತಿಗಳು ತಮಗೆ ಅರ್ಥವಾಗುತ್ತವೆ ಆದರೆ, ಜೋಕರ್ ಗಳ ಗುಂಪೊಂದು ನಮ್ಮ ಮೇಲೆ ತಮ್ಮದೇ ಆದ ವ್ಯವಸ್ಥೆ ಹೇರಲು ಅವಕಾಶ ನೀಡದಿರುವುದೇ" ರಾಷ್ಟ್ರೀಯ ಮನೋಭಾವ ಎಂದು ಪ್ರತಿಪಾದಿಸಿದರು.
ವಿದೇಶಾಂಗ ನೀತಿ ಎಂದರೆ ನಾಯಕರನ್ನು ಅಪ್ಪಿಕೊಳ್ಳುವುದು ಎಂಬ ಭಾವನೆ ಮೋದಿ ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ ಎಂದೂ ಅವರು ಹೇಳಿದರು. ನಂತರ ಈಗಿರುವ ಸರ್ಕಾರಕ್ಕೆ ವಿದೇಶಾಂಗ ನೀತಿ ಎಂದರೆ ಏನು ಎಂಬುದನ್ನು ತೋರಿಸಿಕೊಡಲು ಗಾಂಧಿ ಅವರು 'ರಚನಾತ್ಮಕ ಕಾಂಗ್ರೆಸ್' ಮುಖ್ಯಸ್ಥ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡರು. "ಅವರ ಅಜ್ಞಾನವನ್ನು ಊಹಿಸಿಕೊಳ್ಳಿ... ವಿದೇಶಾಂಗ ನೀತಿ ಎಂದರೆ ನಾಯಕರನ್ನು ಅಪ್ಪಿಕೊಳ್ಳುವುದು ಎಂಬ ಕಲ್ಪನೆ ಅವರಿಗೆ ಎಲ್ಲಿಂದ ಬಂತು?" ಎಂದು ಅವರು ಪ್ರಶ್ನಿಸಿದರು.
ಸರ್ಕಾರದ ಮೇಲೆ ಕಾಂಗ್ರೆಸ್ ಒತ್ತಡವನ್ನು ಮುಂದುವರಿಸಲಿದೆ ಎಂದು ಹೇಳಿದ ಗಾಂಧಿ, "ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಮ್ಮ ರಾಜೀನಾಮೆ ನೀಡುವವರೆಗೂ ನಮಗೆ ನಿದ್ದೆ ಬರುವುದಿಲ್ಲ, ನಾವು ಅವರನ್ನು ನಿದ್ದೆ ಮಾಡದಂತೆ ಮಾಡುತ್ತೇವೆ... ದ್ವೇಷ ಅಥವಾ ಹಿಂಸೆಯಿಲ್ಲದೆ ನಾವು ಇದನ್ನು ಮಾಡುತ್ತೇವೆ. ನಾವು ನಮ್ಮ ಸಂಸ್ಕೃತಿಗಾಗಿ ಹೋರಾಡುತ್ತಿದ್ದೇವೆ; ನಮ್ಮ ದೇಶವು ದ್ವೇಷದ ಆಧಾರದ ಮೇಲಿಲ್ಲ, ಬದಲಾಗಿ ಪ್ರೀತಿ, ಸಹೋದರತ್ವ ಮತ್ತು 'ಅಹಿಂಸೆ'ಯ ತಳಹದಿಯಲ್ಲಿದೆ" ಎಂದು ಹೇಳಿದರು.
ಇದು ಇತರರಿಗೆ ಆದೇಶಗಳನ್ನು ಹೇರಲು ಬಯಸುವವರು ಮತ್ತು ತಮ್ಮನ್ನು ತಾವು ಅಭಿವ್ಯಕ್ತಪಡಿಸಿಕೊಳ್ಳಲು ಬಯಸುವವರ ನಡುವಿನ ಹೋರಾಟ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ."ಜಂತರ್ ಮಂತರ್‌ನಲ್ಲಿ ಏನಾಗುತ್ತಿತ್ತು ಎಂಬುದನ್ನು ನೀವು ಗಮನಿಸಿದರೆ, ವಿದ್ಯಾರ್ಥಿಗಳು ತಮ್ಮನ್ನು ತಾವು ಅಭಿವ್ಯಕ್ತಪಡಿಸಿಕೊಳ್ಳಲು ಬಯಸಿದ್ದರು. ಆದರೆ ಸರ್ಕಾರ 'ನಮಗೆ ಶಿಸ್ತು/ವ್ಯವಸ್ಥೆ (order) ಬೇಕು ಮತ್ತು ನಿಮ್ಮ ಅಭಿವ್ಯಕ್ತಿ ವ್ಯಕ್ತಪಡಿಸುವುದು ಬೇಡ ಎಂದು ಹೇಳಿತು.
"ಹೀಗಾಗಿ ತಮಗೆ ಮತ್ತು ನಿರ್ದಿಷ್ಟ ಮಂದಿಗ ಲಾಭವಾಗುವಂತಹ ವ್ಯವಸ್ಥೆಯನ್ನು ಭಾರತದ ಮೇಲೆ ಹೇರುವುದೇ ಬಿಜೆಪಿ- ಆರ್ ಎಸ್ ಎಸ್ ರಾಜಕೀಯ ಸಿದ್ಧಾಂತವಾಗಿದೆ ಎಂದು ಅವರು ಪ್ರತಿಪಾದಿಸಿದರು.
'ಚಾಣಕ್ಯ' ಎಂದು ಕರೆಯಲ್ಪಡುವ ಅಮಿತ್ ಶಾ 20 ದಿನ ಸಂಸತ್ ಗೆ ಬಾರದೇ ಎಲ್ಲಿಗೆ ಓಡಿ ಹೋಗಿದ್ದರು? ಎಂದು ಪ್ರಶ್ನಿಸಿದ ಅವರು, ಈ ದೇಶವು ತನ್ನನ್ನು ತಾನು ಅಭಿವ್ಯಕ್ತಪಡಿಸುವುದನ್ನು ನಿಲ್ಲಿಸುವುದಿಲ್ಲ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಆರ್‌ಎಸ್‌ಎಸ್‌ನ ತಮ್ಮದೇ ಆದ ಸಣ್ಣ ವ್ಯವಸ್ಥೆಯನ್ನು ಸೃಷ್ಟಿಸಬಹುದು, ಆದರೆ ಅದನ್ನು ಮುರಿದು ಬಿಸಾಕಲಾಗುತ್ತದೆ ಎಂದು ಅವರು ಹೇಳಿದರು.
"ಆರ್‌ಎಸ್‌ಎಸ್‌ನ (RSS)ನವರಿಗೆ ಭಾರತದ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲ. ಇಂದಿನ ಭಾರತದೊಂದಿಗೆ ಬೆರೆಯಲು ಅಥವಾ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದವರು ಭಾರತವನ್ನೇ ಅರ್ಥಮಾಡಿಕೊಳ್ಳಲಾರರು. ಅವರು3000 ವರ್ಷಗಳ ಹಿಂದಿನ ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಬದಲಿಗೆ ಇಂದಿನ ಭಾರತವನ್ನು ಅರ್ಥಮಾಡಿಕೊಳ್ಳಬೇಕು. ಇಂದಿನ ಭಾರತವನ್ನು ಅರ್ಥಮಾಡಿಕೊಳ್ಳಲು, ಅದರ ಅಭಿವ್ಯಕ್ತಿಯನ್ನು ಅರ್ಥಮಾಡಿಕೊಳ್ಳಬೇಕು," ಎಂದು ಅವರು ಹೇಳಿದರು.
ಆರ್ ಎಸ್ ಎಸ್ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಪ್ರಾರಂಭವಾಯಿತು. ಪ್ರಮೋದ್ ಮಹಾಜನ್ ಇದನ್ನು ಆರಂಭಿಸಿದರು. ನರೇಂದ್ರ ಮೋದಿ ಅವರ ಕಾಲದಲ್ಲಿ ಆರ್‌ಎಸ್‌ಎಸ್‌ನ ಸಂಪೂರ್ಣ ಬಂಡವಾಳಶಾಯಿ ಆಯಿತು.. ಮೂಲ ಶಕ್ತಿಯಾಗಿದ್ದ ಆರ್‌ಎಸ್‌ಎಸ್ ಈಗ ಇಲ್ಲವಾಗಿದೆ. ಅದು ಈಗ ಬೃಹತ್ ಬಂಡವಾಳಶಾಹಿಗಳ ಸಾಧನವಾಗಿದೆ. ಮೋದಿ ಅವರು ಅದಾನಿಯವರ ಸೇವಕರಾಗಿರುವಂತೆಯೇ, ಇವರು ಕೂಡ ಅದಾನಿಯವರ ಸೇವಕರಾಗಿದ್ದಾರೆ ಎಂದು ಅವರು ಆರೋಪಿಸಿದರು.
"ಪ್ರಧಾನಿ ಮೋದಿ ಅವರು ಯಾಕೆ ಎಂದಿಗೂ ಸುದ್ದಿಗೋಷ್ಠಿ ನಡೆಸುವುದಿಲ್ಲ ಎಂದು ನೀವು ಎಂದಾದರೂ ಕೇಳಿದ್ದೀರಾ? ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಆರ್‌ಎಸ್‌ಎಸ್‌ನ ಅಭಿವ್ಯಕ್ತಿಯನ್ನು ಸ್ವಾತಂತ್ಯ್ರವನ್ನು ಕೊನೆಗೊಳಿಸುವ ಮಾತುಗಳು ಕೇಳಿಬರುವ ದಿನದಂದು, ನಾನು ಅವರನ್ನು ರಕ್ಷಿಸುತ್ತೇನೆ."ಎಲ್ಲರಿಗೂ ತಮ್ಮ ಅಭಿವ್ಯಕ್ತಿಗೆ ಅವಕಾಶವಿರಬೇಕು ಎಂದು ನಾವು ಹೇಳುತ್ತೇವೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




