ದೇಶ

ಉಪವಾಸ ಅಂತ್ಯಗೊಳಿಸುವ ನನ್ನ ಪತ್ನಿಯ ಪ್ರಸ್ತಾವನೆಗೆ ರಾಹುಲ್ ನಿರ್ಲಕ್ಷ್ಯ: ಸೋನಮ್ ವಾಂಗ್ಚುಕ್ ಬೇಸರ

ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ನನಗೆ ಸೂಪ್‌ ನೀಡುತ್ತಿರುವ ಫೋಟೊವನ್ನು, ನಾನು ಉಪವಾಸ ಅಂತ್ಯಗೊಳಿಸುವವರೆಗೆ ಬಿಡುಗಡೆ ಮಾಡಲ್ಲ ಅಂತ ಮಾತುಕೊಟ್ಟಿದ್ದರು.

ಉಪವಾಸ ಅಂತ್ಯಗೊಳಿಸುವ ನನ್ನ ಪತ್ನಿಯ ಪ್ರಸ್ತಾವನೆಗೆ  ರಾಹುಲ್ ನಿರ್ಲಕ್ಷ್ಯ: ಸೋನಮ್ ವಾಂಗ್ಚುಕ್ ಬೇಸರ
ಸೋನಮ್ ವಾಂಗ್ಚುಕ್
Published On :

ನವದೆಹಲಿ: ನನ್ನ ಉಪವಾಸ ಅಂತ್ಯಗೊಳಿಸುವ ಬಗ್ಗೆ ರಾಹುಲ್‌ ಗಾಂಧಿ ಬಳಿ ನನ್ನ ಪತ್ನಿ ಗೀತಾಂಜಲಿ ಪ್ರಯತ್ನಿಸಿದರೂ ಅದನ್ನು ರಾಹುಲ್ ಗಾಂಧಿ ನಿರ್ಲಕ್ಷಿಸಿದ್ದರು ಎಂದು ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲು ರಾಹುಲ್ ಗಾಂಧಿ ಅವರಿಂದ ಜ್ಯೂಸ್ ನೀಡಲು ನನ್ನ ಪತ್ನಿ ಗೀತಾಂಜಲಿ ಪ್ರಯತ್ನಿಸಿದ್ದರು. ಆದರೆ, ಅವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಕಾಂಗ್ರೆಸ್ ನಾಯಕ ಮತ್ತು ಇತರ ರಾಜಕೀಯ ಪಕ್ಷಗಳ ಬಗ್ಗೆ ನನಗೆ ನಿರಾಶೆಯಾಗಿದೆ ಎಂದು ವಾಂಗ್ಚುಕ್ ಹೇಳಿದ್ದಾರೆ.

ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ನನಗೆ ಸೂಪ್‌ ನೀಡುತ್ತಿರುವ ಫೋಟೊವನ್ನು, ನಾನು ಉಪವಾಸ ಅಂತ್ಯಗೊಳಿಸುವವರೆಗೆ ಬಿಡುಗಡೆ ಮಾಡಲ್ಲ ಅಂತ ಮಾತುಕೊಟ್ಟಿದ್ದರು. ಆದರೆ, ಅವರು ಕೂಡ ಭರವಸೆಯನ್ನು ಮುರಿದರು. ಆದ್ದರಿಂದ ನಾನು ಈ ಎಲ್ಲಾ ನಾಯಕರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ ಎಂದು ಅಸಾಮಾಧಾನ ಹೊರಹಾಕಿದ್ದಾರೆ.

ಜಂತರ್ ಮಂತರ್ ನಲ್ಲಿ ನಾನು ಉಪವಾಸ ಮಾಡುತ್ತಿದ್ದ ಸ್ಥಳಕ್ಕೆ ಕೆಲವೇ ಕೆಲವು ಮಂದಿ ವಿರೋಧ ಪಕ್ಷದ ನಾಯಕರು ಆಗಮಿಸಿ ನನ್ನನ್ನು ಭೇಟಿ ಮಾಡಿದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.