ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ವಿಡಿಯೋ ಬ್ಲಾಕ್; ಅಲ್ಗಾರಿದಮ್ ಬಗ್ಗೆ ಮೆಟಾ ವಿಚಾರಣೆ; ಜುಗರ್‌ಬರ್ಗ್ ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು
ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಅವರ ಫೇಸ್‌ಬುಕ್ ವಿಡಿಯೋವನ್ನು 5 ಗಂಟೆಗಳ ಕಾಲ ನಿರ್ಬಂಧಿಸಿದ್ದಕ್ಕಾಗಿ ಸಂಸದೀಯ ಸಮಿತಿಯು ಮೆಟಾ ಸಂಸ್ಥೆಗೆ ಕಠಿಣ ಎಚ್ಚರಿಕೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ವಿಡಿಯೋವನ್ನು 5 ಗಂಟೆಗಳ ಕಾಲ ನಿರ್ಬಂಧಿಸಿದ್ದಕ್ಕಾಗಿ ಸಂಸದೀಯ ಸಮಿತಿಯು ಮೆಟಾ ಸಂಸ್ಥೆಗೆ ಕಠಿಣ ಎಚ್ಚರಿಕೆ ನೀಡಿದೆ. ಜೊತೆಗೆ, ಮೆಟಾದ ಈ ಕ್ರಮವನ್ನು ದೇಶವನ್ನು ಅಸ್ಥಿರಗೊಳಿಸುವ ಯತ್ನ ಎಂದು ಕರೆದ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಸಾರ್ವಜನಿಕ ಕ್ಷಮೆಯಾಚಿಸದಿದ್ದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅಡಿಯಿರುವ 'ಸುರಕ್ಷಿತ ಬಂದರು' ರಕ್ಷಣೆಯನ್ನು ರದ್ದುಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ವಿವಾದ?
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯುವಜನತೆಯನ್ನು ಉದ್ದೇಶಿಸಿ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿ ಮಾಡಿದ ಫೇಸ್‌ಬುಕ್ ವೀಡಿಯೊ ಪೋಸ್ಟ್‌ಗೆ ಮೆಟಾ ಸಂಸ್ಥೆಯ ಸ್ವಯಂಚಾಲಿತ ವ್ಯವಸ್ಥೆಯು 5 ಗಂಟೆಗಳ ಕಾಲ ನಿರ್ಬಂಧಿಸಿತ್ತು. ತದ ನಂತರ ಇದು ತಾಂತ್ರಿಕ ದೋಷ ಮತ್ತು ಆಟೋಮೇಟೆಡ್ ಕಂಟೆಂಟ್ ಮಾಡರೇಶನ್ ವ್ಯವಸ್ಥೆಯಿಂದ ಆದ ತಪ್ಪು ಎಂದು ಮೆಟಾ ಪ್ರತಿನಿಧಿಗಳು ಕ್ಷಮೆಯಾಚಿಸಿದ್ದರು. ಆದರೆ, ಇದನ್ನು ಕೇವಲ ತಾಂತ್ರಿಕ ದೋಷ ಎಂಬ ಕಾರಣವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮಾಹಿತಿ ತಂತ್ರಜ್ಞಾನದ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ. ಇದರೊಂದಿಗೆ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಸಾರ್ವಜನಿಕ ಕ್ಷಮೆಯಾಚಿಸದಿದ್ದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅಡಿಯಿರುವ 'ಸುರಕ್ಷಿತ ಬಂದರು' ರಕ್ಷಣೆಯನ್ನು ರದ್ದುಗೊಳಿಸುವುದಾಗಿ ಎಚ್ಚರಿಸಿದೆ.
ಇದೆ ವೇಳೆ ಮೆಟಾ, ಎಕ್ಸ್ (ಟ್ವಿಟರ್) ಮತ್ತು ಯೂಟ್ಯೂಬ್‌ನ ಆಲ್ಗಾರಿದಮ್‌ಗಳು ಅಧಿಕೃತ ರಾಜಕೀಯ ಪಕ್ಷಗಳಿಗಿಂತ ಅನಧಿಕೃತ ಖಾತೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ ಎಂದು ಸಮಿತಿಯ ಅಧ್ಯಕ್ಷ ದುಬೆ ಆರೋಪಿಸಿದ್ದಾರೆ. ಜೊತೆಗೆ ಡೀಪ್‌ಫೇಕ್ ವಿಡಿಯೋಗಳು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ದೃಶ್ಯಗಳನ್ನು ತಡೆಯಲು ಮೆಟಾ ವಿಫಲವಾಗಿದೆ ಎಂದು ಸಮಿತಿ ತರಾಟೆಗೆ ತೆಗೆದುಕೊಂಡಿದೆ.
ಅಕಸ್ಮಾತ್, ಸೆಕ್ಷನ್ 79 ರದ್ದಾದರೆ ಏನಾಗುತ್ತದೆ?
ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಸಾಮಾಜಿಕ ಜಾಲತಾಣಗಳಿಗೆ ಸುರಕ್ಷಿತ ಬಂದರು ರಕ್ಷಣೆ ಇರುತ್ತದೆ. ಇದರ ಪ್ರಕಾರ, ಬಳಕೆದಾರರು ಪೋಸ್ಟ್ ಮಾಡುವ ಯಾವುದೇ ಕಾನೂನುಬಾಹಿರ ವಿಷಯಗಳಿಗೆ ಫೇಸ್‌ಬುಕ್ ಅಥವಾ ಮೆಟಾ ಸಂಸ್ಥೆ ನೇರ ಹೊಣೆಯಾಗುವುದಿಲ್ಲ. ಒಂದು ವೇಳೆ ಈ ರಕ್ಷಣೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದರೆ, ಬಳಕೆದಾರರು ಹಾಕುವ ವಿವಾದಾತ್ಮಕ ಪೋಸ್ಟ್‌ಗಳಿಗೆ ಮೆಟಾ ಸಂಸ್ಥೆಯೇ ನೇರ ಕಾನೂನು ಜವಾಬ್ದಾರಿಯಾಗಬೇಕಾಗುತ್ತದೆ. ಇದರೊಂದಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳ ವಿರುದ್ಧ ಭಾರತದಲ್ಲಿ ನೇರ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ಸಿಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



