ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ 300 ಅಡಿ ಕುಸಿತ, ಟರ್ಬ್ಯುಲೆನ್ಸ್; 12 ಮಂದಿ ಪ್ರಯಾಣಿಕರಿಗೆ ಗಾಯ; Video
ವಿಮಾನ ನಿಲ್ದಾಣದಲ್ಲಿ ತೆಗೆದ ದೃಶ್ಯಗಳಲ್ಲಿ ಟರ್ಮಿನಲ್ ಗೇಟ್ ಹೊರಗೆ ಆಂಬುಲೆನ್ಸ್‌ಗಳು ನಿಯೋಜಿಸಲಾಗಿದ್ದವು. ಕೆಲ ಪ್ರಯಾಣಿಕರನ್ನು ವೀಲ್‌ಚೇರ್‌ಗಳಲ್ಲಿ ಹೊರತೆಗೆದುಕೊಂಡು ಬರುತ್ತಿರುವುದು ಕಂಡುಬಂದವು.

ನವದೆಹಲಿ: ಥೈಲ್ಯಾಂಡ್ ನ ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಮಂಗಳವಾರ ಹಾರಾಟದ ವೇಳೆ ಟರ್ಬುಲೆನ್ಸ್ ಅಂದರೆ ಗಾಳಿಯ ಪ್ರಕ್ಷುಬ್ಧತೆಗೆ ಸಿಲುಕಿ, 300 ಅಡಿ ಕುಸಿತ ಉಂಟಾಗಿ 12 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿಮಾನ ನಿಲ್ದಾಣದಲ್ಲಿ ತೆಗೆದ ದೃಶ್ಯಗಳಲ್ಲಿ ಟರ್ಮಿನಲ್ ಗೇಟ್ ಹೊರಗೆ ಆಂಬುಲೆನ್ಸ್‌ಗಳು ನಿಯೋಜಿಸಲಾಗಿದ್ದವು. ಕೆಲ ಪ್ರಯಾಣಿಕರನ್ನು ವೀಲ್‌ಚೇರ್‌ಗಳಲ್ಲಿ ಹೊರತೆಗೆದುಕೊಂಡು ಬರುತ್ತಿರುವುದು ಕಂಡುಬಂದರೆ, ಇನ್ನು ಕೆಲವರು ತಲೆಗೆ ಬ್ಯಾಂಡೇಜ್ ಹಾಕಿಸಿಕೊಂಡ ಸ್ಥಿತಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲ್ಪಟ್ಟರು.
ಈ ಕುರಿತು ಪ್ರಕಟಣೆ ನೀಡಿದ ಏರ್ ಇಂಡಿಯಾ ವಕ್ತಾರರು, AI2379 ವಿಮಾನವು ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಹಾರಾಟದ ಮಧ್ಯದಲ್ಲಿ "ಟರ್ಬುಲೆನ್ಸ್‌ಗೆ ಸಂಬಂಧಿಸಿದ ಕ್ಷಣಿಕ ಘಟನೆ"ಯನ್ನು ಅನುಭವಿಸಿದೆ ಎಂದು ತಿಳಿಸಿದ್ದಾರೆ.
ಇಂದು ಫುಕೆಟ್‌ನಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾದ AI2379 ವಿಮಾನವು ಹಾರಾಟದ ವೇಳೆ ಕ್ಷಣಿಕ ಟರ್ಬುಲೆನ್ಸ್‌ಗೆ ಒಳಗಾಗಿದ್ದು, ಇದರಿಂದ ಅಲ್ಪಕಾಲದ ಮಟ್ಟಿಗೆ ವಿಮಾನದ ಎತ್ತರದಲ್ಲಿ ಬದಲಾವಣೆ ಉಂಟಾಯಿತು ಎಂದು ಏರ್ ಇಂಡಿಯಾ ತಿಳಿಸಿದೆ.
ವಿಮಾನವು ಸುರಕ್ಷಿತವಾಗಿ ದೆಹಲಿಯಲ್ಲಿ ಭೂಸ್ಪರ್ಶ ಮಾಡಿದ್ದು, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ತೊಂದರೆಯಿಲ್ಲದೆ ವಿಮಾನದಿಂದ ಇಳಿದಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಸದ್ಯದ ಮಾಹಿತಿಯ ಪ್ರಕಾರ ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಸಣ್ಣಪುಟ್ಟ ಗಾಯಗಳಾಗಿರುವ ಕೆಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಏರ್ ಇಂಡಿಯಾದ ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ವೈದ್ಯಕೀಯ ತಂಡ ಅಗತ್ಯ ನೆರವು ಒದಗಿಸುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


